ಬಿಸಿ ಬಿಸಿ ಸುದ್ದಿ

ಸುರಪುರ: ನಗರಸಭೆ ಸದಸ್ಯ ಸೋಮನಾಥ ನಾಯಕ ಬಿಜೆಪಿಗೆ ಸೇರ್ಪಡೆ

ಸುರಪುರ: ಇಲ್ಲಿಯ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಿ, ಯುವ ಮುಖಂಡರಾದ ಪ್ರವೀಣ್, ಪ್ರತಾಪ್ ಸೇರಿ ತಾಲೂಕಿನ ನಾನಾ ಗ್ರಾಮಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಶಾಸಕ ರಾಜುಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ನೂರಕ್ಕೂ ಹೆಚ್ಚು ಮಹಿಳೆಯರು ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ರಾಜುಗೌಡ,ಅನೇಕರು ಬಿಜೆಪಿ ಪಕ್ಷಕ್ಕೆ ಬರುವವರಿಗೆ ದುಡ್ಡು ಕೊಟ್ಟು ಸೇರಿಸಿಕೊಳ್ಳುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.ಇಂದು ಪಕ್ಷಕ್ಕೆ ಸೇರ್ಪಡೆಗೊಂಡವರು ಕಾಂಗ್ರೆಸ್ ಪಕ್ಷದ ಧೋರಣೆಗೆ ಬೇಸತ್ತು ಬಂದಿದ್ದಾರೆ ವಿನಃ,ಯಾರಿಗೂ ಹಣವನ್ನು ನೀಡಿಲ್ಲ ಅಲ್ಲದೆ ಯಾವುದೇ ಡಿಮ್ಯಾಂಡ್ ಇಲ್ಲದೆ ಇಂದು ನಮ್ ಪಕ್ಷಕ್ಕೆ ಬಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಳೆದ ಕೆಲ ದಿನಗಳ ಹಿಂದೆ ದೇವತ್ಕಲ್ ಗ್ರಾಮಕ್ಕೆ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ಹೇಳಿಕೆಗೆ ಹರಿಹಾಯ್ದ ಶಾಸಕ ರಾಜುಗೌಡ ಮಾಜಿ ಸಿ.ಎಮ್ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಮ್.ಬಿ ಪಾಟೀಲ್ ವಿರುದ್ಧ ಮಾತನಾಡಿ, ಮಿಸ್ಟರ್ ಎಂ.ಬಿ.ಪಾಟೀಲ್, ನಾರಾಯಣಪುರ ಸ್ಕಾಡಾ ಗೇಟ್-2ನ್ನು 2017 ರಲ್ಲಿ ನೀವೆ ಉದ್ಘಾಟಸಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಇಲ್ಲಾ, 2018 ರಲ್ಲಿ ನಾನು ಎಂಎಲ್‍ಎ ಆದ ನಂತರ ಟೆಂಡರ್ ಆಗಿತ್ತು ಅಂದ್ರೆ ನೀವು ರಾಜಕೀಯ ನಿವೃತ್ತಿ ತೆಗದುಕೊಳ್ಳಬೇಕು. ತಾಕತ್ತಿದ್ದರೆ ನನ್ನ ಈ ಸವಾಲು ಸ್ವೀಕರಿಸಿ ಎಂದು ಗುಡುಗಿದರು.

ರಾಜೂಗೌಡಗೆ ತಲೆ ಕೆಟ್ಟಿದೆ, ಹುಚ್ಚ ಅಂತಾ, ನಾವು ಮಾಡಿದ ಉದ್ಘಾಟನೆ 5 ವರ್ಷದ ನಂತರ ಉದ್ಘಾಟಿಸಲಾಗಿದೆ ಎಂದು ಏನೇನೋ ಮಾತಾಡಿ ಹೋಗಿದ್ದಾರೆ. ಸ್ಕಾಡಾ ಗೇಟ್ ಯಾವಾಗ ಉದ್ಘಾಟನೆಯಾಗಿದೆ ಎಂಬುದು ದಾಖಲೆ ಸಮೇತ ಚರ್ಚೆಗೆ ನಾನು ಸಿದ್ಧ. ನನ್ನ ಸವಾಲು ಸ್ವೀಕರಿಸುವ ತಾಕತ್ತು ಎಂ.ಬಿ.ಪಾಟೀಲ್‍ಗೆ ಇದ್ದರೆ ಬರಲಿ ಎಂದು ಸವಾಲು ಎಸೆದರು.

ಸುರಪುರ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಇಲ್ಲಿ ಯಾವ ಯೋಜನೆಗಳು ಜಾರಿಯಾಗಿಲ್ಲ ಎಂದು ಹೇಳಿ ಹೋಗಿರುವ ಶಾಸಕ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಅವರು ಅಂದು ದೇವತ್ಕಲ್‍ನಲ್ಲಿ ನಿಂತು ಭಾಷಣ ಮಾಡಿ ಹೋದ ಸ್ಥಳ ಹೈಸ್ಕೂಲ್ ಮೈದಾನ, ಹೈಸ್ಕೂಲ್ ಕಟ್ಟಡ ನಿರ್ಮಾಣ ಇದೇ ರಾಜೂಗೌಡ ಮಾಡಿಸಿದ್ದು. ಅದು ಅವರ ಕಣ್ಣಿಗೆ ಕಾಣಲಿಲ್ಲ. ಮುಂದೆ ಅವರ ಕ್ಷೇತ್ರಕ್ಕೆ ಹೋದಾಗ ಈ ಕುರಿತು ಉತ್ತರ ಕೊಟ್ಟು ಬರುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಡಾ.ಎಸ್.ಪಿ.ದಯಾನಂದ, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಡಾ.ಸುರೇಶ್ ಸಜ್ಜನ್, ಕಿಶೋರಚಂದ ಜೈನ್, ಮರಿಲಿಂಗಪ್ಪ ನಾಯಕ ಕರ್ನಾಳ, ಬಸವರಾಜ ಸ್ಥಾವರಮಠ, ಹಣಮಂತ ನಾಯಕ ಬಬ್ಲುಗೌಡ, ರಾಜಾ ಮುಕುಂದ ನಾಯಕ, ದೊಡ್ಡ ದೇಸಾಯಿ, ವೇಣುಮಾಧವ ನಾಯಕ, ಪ್ರಕಾಶ ಸಜ್ಜನ್, ದುರ್ಗಪ್ಪ ಗೋಗಿಕೇರಾ, ರಾಜಾ ರಂಗಪ್ಪ ನಾಯಕ, ಭೀಮಾಶಂಕರ ಬಿಲ್ಲವ, ಡಾ.ಬಿ.ಎಂ.ಹಳ್ಳಿಕೋಟೆ ಇದ್ದರು.

ಬಂಜಾರ ಸಮಾಜಕ್ಕೆ ಸ್ಥಾನಮಾನ: ಮೊನ್ನೆ ದೇವತ್ಕಲ್‍ನಲ್ಲಿ ಬಂಜಾರ ಸಮಾಜದ ಮುಖಂಡ ಪ್ರಕಾಶ ರಾಠೋಡ್ ಇಲ್ಲ ಸಲ್ಲದ ಆರೋಪ ಮಾಡಿ ಹೋಗಿದ್ದು ಸತ್ಯಕ್ಕೆ ದೂರವಾಗಿದೆ. ನಾನು ಸಮುದಾಯವನ್ನು ಪೂಜನೀಯ ಭಾವನೆಯಿಂದ ನೋಡುತ್ತೇನೆ. ನನಗೂ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ಅಕಾರವಯಲ್ಲಿ ಬಂಜಾರ ಸಮಾಜಕ್ಕೆ 4 ಜಿಪಂ, 13 ತಾಪಂ, 22 ಗ್ರಾಪಂ ಸದಸ್ಯರನ್ನಾಗಿ ಮಾಡಿದ್ದಲ್ಲದೆ ಒಮ್ಮೆ ತಾಪಂ ಅಧ್ಯಕ್ಷರನ್ನಾಗಿ ಮಾಡಿರುವೆ. ಅದೇ ರೀತಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ನೀಡಿರುವೆ ಎಂದು ರಾಜೂಗೌಡ ತಿಳಿಸಿದರು.

 

 

 

 

 

 

 

 

 

 

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago