ಕಲಬುರಗಿ: 12ನೇ ಶತಮಾನ ನೆನಪಿಸುವಂತಹ ಕಾರ್ಯಕ್ರಮ ಇದಾಗಿದ್ದು, ಇಂತಹ ಸಮ್ಮೇಳನ ನಡೆಸುವ ಮೂಲಕ ಮಹಿಳಾ ಸಂವೇದನೆಗಳಿಗೆ ಉತ್ತಮ ವೇದಿಕೆ ಸಿಗುವಂತಾಗಿದೆ ಎಂದು ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಶಾರದಾ ಜಾಧವ ನುಡಿದರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ನಿನ್ನೆಯಿಂದ ನಡೆದ ಮಹಾದೇವಿಯಕ್ಕಗಳ ಸಮ್ಮೇಳನದ ಮಂಗಲದ ಹರಹು ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಬಸವಣ್ಣ ಅನ್ನುವ ಹೆಸರೇ ಒಂದು ಸ್ಫೂರ್ತಿ. ಶರಣರ ಆಲೋಚನೆ ದೂರಗಾಮಿಯಾಗಿದ್ದವು. ಶರಣ ಚಿಂತನೆಗಳನ್ನು ಆಚರಿಸಿದರೆ ಸಾಲದು. ಅವುಗಳನ್ನು ಬದುಕಬೇಕು ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಮಹಿಳಾ ಸಂವೇದನೆ, ಮಹಿಳಾ ಪ್ರತಿಭೆ ಅನಾವರಣದ ವೇದಿಕೆಯಂತಿತ್ತು. ಪ್ರತಿ ಬಾರಿಗಿಂತ ಈ ಬಾರಿಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಅರ್ಥಪೂರ್ಣ ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು
ಲಿಂಗವ ಪೂಜಿಸಿ ಫಲವೇನಯ್ಯ ಎಂದು ಹೇಳಿದ ಬಸವಣ್ಣನವರು, ಸಮರತಿ, ಸಮಕಳೆ, ಸಮಸುಖ ಸಮಾಜದಲ್ಲಿ ಬಯಸಿದರು. ಅಸಮಾನತೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿದ ಶರಣರು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಹೇಳಿದರು. ಕಾಯಕ-ದಾಸೋಹ ಸಿದ್ಧಾಂತವನ್ನು ಬೋಧಿಸಿದ ಶರಣರು ಸ್ತ್ರೀಯರಿಗೆ ಮೊಟ್ಟ ಮೊದಲು ಸ್ವಾತಂತ್ರ್ಯ ಒದಗಿಸಿದರು. ಮಾನವೀಯ ಮೌಲ್ಯದಿಂದ ಕೂಡಿದ ವಚನ ಸಾಹಿತ್ಯದ ಅಧ್ಯಯನ ಅಗತ್ಯ ಎಂದು ಅವರು ವಿವರಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶರಣಮ್ಮ ಕಲಬುರಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಸಂಚಾಲಕಿ ಡಾ. ಜಯಶ್ರೀ ದಂಡೆ ವೇದಿಕೆಯಲ್ಲಿ ಇದ್ದರು.
ಇದೇ ವೇಳೆಯಲ್ಲಿ ಪ್ರೊ. ಶಾಂತಲಾ ನಿಷ್ಠಿ, ಪ್ರೊ. ಪೂರ್ಣಿಮಾ ಪಾಟೀಲ, ಪ್ರೊ. ಚಿತ್ರಲೇಖಾ, ಪ್ರೊ. ಮಂಗಲಾ ಉಪ್ಪಿನ್, ಮೀನಾಕುಮಾರಿ, ಮಂಜುಳಾ ಜಾನೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶಿವಲೀಲಾ ಶೀಲವಂತರ ಹಾಗೂ ಡಾ. ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…