ಬಿಸಿ ಬಿಸಿ ಸುದ್ದಿ

ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಘೋಷಣೆಗೆ ಮಾಲಿಕಯ್ಯ ಸ್ವಾಗತ

ನಿಗಮದ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕದವರಿಗೆ ನೀಡಿ; ನೂತನವಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಉತ್ತರ ಕರ್ನಾಟಕದವರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ಬಿಜೆಪಿ ಈ ಬಾರಿ 130-135 ಸ್ಥಾನ ಗೆಲ್ಲಲಿದೆ.ಕಲ್ಯಾಣ ಕರ್ನಾಟಕದಲ್ಲಿ ಕನಿಷ್ಠ 7 ಸ್ಥಾನ ಗೆಲ್ಲಲಿವೆ ಎಂದು ಗುತ್ತೇದಾರ ವಿಶ್ವಾಸ ವ್ಯಕ್ತಪಡಿಸಿದರು.ಅಫಜಲಪುರ ಕ್ಷೇತ್ರದಿಂದ ನನ್ನ ಸಹೋದರ ಇಲ್ಲವೇ ನನಗೆ ಕೊಟ್ಟರೂ ಇಬ್ಬರೂ ಸೇರಿ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.

ಕಲಬುರಗಿ: ಕರ್ನಾಟಕದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಅರ್ಥಿಕ ಸಾಮಾಜಿಕ ಶೈಕ್ಷಣಿಕ ಶ್ರೇಯ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಬ್ರಹ್ಮಶ್ರೀ ನಾರಾಯಣ ಗುರು ನಿಗಮವನ್ನು ಘೋಷಣೆ ಮಾಡಿ ಹಿಂದುಳಿದ ವರ್ಗದ ಈ ಸಮುದಾಯಕ್ಕೆ ಶಕ್ತಿ ತುಂಬಿದ ಹಿನ್ನೆಲೆಯಲ್ಲಿ ಸನ್ಮಾನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 70 ಲಕ್ಷದಷ್ಟು ಇರುವ ಈ ಜನಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದೆ ಹಲವಾರು ವರ್ಷಗಳಿಂದ ನಿಗಮದ ಬೇಡಿಕೆಯನ್ನು ಮುಂದಿಟ್ಟು ಒತ್ತಾಯ ಮಾಡಿದರೂ ಯಾವುದೇ ಸರಕಾರಗಳು ಕಿವಿಗೊಡದ ಇದೀಗ ಬಿಜೆಪಿ ಸರ್ಕಾರವು ಸಮುದಾಯದ ಬೇಡಿಕೆಯನ್ನು ಮನ್ನಿಸಿ, ನಿಗಮ ಘೋಷಣೆ ಮಾಡಿರೋದು ಈ ಸರಕಾರ ಹಿಂದುಳಿದ ಜನಸಮುದಾಯದೊಂದಿಗೆ ಇದೆ ಎಂಬುದನ್ನು ಸಾಬೀತುಪಡಿಸಿದೆ. ನಿಗಮವನ್ನು ಘೋಷಿಸುವಂತೆ ಒತ್ತಾಯಿಸಿ ಮಠಾಧೀಶರು ರಾಜಕೀಯ ನಾಯಕರು ಸಮಾಜದ ಮುಖಂಡರು ಬುದ್ಧಿಜೀವಿಗಳು ಚಿಂತಕರು ಒಂದೇ ಸ್ವರದಲ್ಲಿ ಧ್ವನಿ ಎತ್ತಿ ಬೇಡಿಕೆಗೆ ಸರಕಾರ ಒಪ್ಪಿಗೆ ನೀಡಿ ಇದೀಗ ನಿಗಮ ಘೋಷಣೆ ಮಾಡಿದೆ ಎಂದರು.

ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಈ ಅಧಿವೇಶನದಲ್ಲಿ ಸರಕಾರವು ಸಮುದಾಯದ ಬೇಡಿಕೆಯಂತ 500 ಕೋಟಿ ರೂಪಾಯಿಗಳನ್ನು ನೀಡುವುದರ ಮೂಲಕ ಸಮುದಾಯಕ್ಕೆ ಭರವಸೆ ತುಂಬಬೇಕು. ನಿಗಮಕ್ಕೆ ಕೂಡಲೇ ಅಧ್ಯಕ್ಷರ ನೇಮಕ ಮಾಡಿ ನಿರ್ದೇಶಕರನ್ನು ನಿಯೋಜಿಸಿ ಅಗತ್ಯ ಸಿಬ್ಬಂದಿಗಳೊಂದಿಗೆ ನಿಗಮ ಕೂಡಲೇ ಕಾರ್ಯ ಪ್ರವೃತ್ತರಾಗಲು ಸರಕಾರವು ಶತ್ತಣದ ಕ್ರಮವನ್ನು ಕೈಗೊಳ್ಳಲು ಮನವಿ ಮಾಡಿಕೊಳ್ಳುತ್ತೇನೆ. ಗಮವು ಕೂಡಲೇ ಕಾರ್ಯ ಚಟುವಟಿಕೆ ಪ್ರಾರಂಭ ಮಾಡಿದಲ್ಲಿ ಈ ಸಮುದಾಯದ ಹಲವು ದಶಕಗಳ ಬೇಡಿಕೆಗೆ ಸ್ಪಂದನೆ ಮಾಡಲು ಅನುಕೂಲವಾಗುತ್ತದೆ ಎಂದರು.

ಹಿಂದುಳಿದ ವರ್ಗಗಳ ಖಾತೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಾರ್ಚ್ ಮೂರನೇ ತಾರೀಕಿಗೆ ತಮ್ಮ ಕಚೇರಿಯಲ್ಲಿ ಮಠಾಧೀಶರ ಹಾಗೂ ಸಮುದಾಯದ ಮುಖಂಡರ ಸಭೆ ಕರೆದಿರುವುದು ಸ್ವಾಗತ ವಿಷಯ ಆಗಿದೆ. ಸಮುದಾಯದ ಕುರಿತು ಕುಲಶಾಸ್ತ್ರೀಯ ಅಧ್ಯಯನಕ್ಕೆ 25 ಲಕ್ಷ ರೂಪಾಯಿ ಮಂಜೂರು ಮಾಡಿರೋದು ಸಮುದಾಯದ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಮತ್ತು ಗಮನಿಯದಾಗಿರತಕ್ಕಂಥ ವಿಚಾರ ಎಂದು ತಿಳಿಸಿದರು.

ಅಧ್ಯಯನವನ್ನು ಕೂಡಲೆ ಪ್ರಾರಂಭಿಸಿದಲ್ಲಿ ಸಮುದಾಯದ ಜನರ ವಾಸ್ತವ ಸ್ಥಿತಿ ಗತಿ ಮನವರಿಕೆಯಾಗಲಿದೆ ಮತ್ತು ನಿಖರ ಪಡೆಯಲು ಅಂಕಿ ಅಂಶ ಮುಖ್ಯವಾಗಿ ನೆರವು ಪಡೆಯಲು ಅನುಕೂಲವಾಗುತ್ತದೆ. ಈಗಾಗಲೇ ಸರಕಾರವು ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಗಳನ್ನು ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭಿಸುವುದರ ಮೂಲಕ ತಲಾ 18 ಕೋಟಿ ರೂಪಾಯಿ ಈ ಬಜೆಟ್ ನಲ್ಲಿ ಮಂಜೂರು ಮಾಡಿರೋದು ಸಮುದಾಯದ ಜನರಿಗೆ ಮತ್ತು ಹಿಂದುಳಿದ ವರ್ಗಕ್ಕೆ ಉತ್ತೇಜನ ನೀಡಿದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಯಂತ *ಶಿಕ್ಷಣದಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲವಯುತರಾಗಿರಿ” ಎಂಬ ಸಂದೇಶದಂತೆ, ಸಮುದಾಯದ ಈಡಿಗ ಬಿಲ್ಲವ ನಾಮಧಾರಿ ದೀವರ, ನಾಯಕ ಹಳಿಕ, ಗೌಡ ಭಂಡಾರಿ, ಈಳಿಗರ್ , ಈರುಳಿಗ ಹೀಗೆ 26 ಪಂಗಡಗಳ ಜನರು ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ ಎಂದರು.

ಮಾರ್ಚ್ ಮೂರರಂದು ಸಚಿವ ಕೋಟ ಅವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಸಮುದಾಯದ ಹಲವಾರು ಇತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೂಡ ಇದ್ದು ಸರಕಾರದ ಸಕಾರಾತ್ಮಕ ಚಿಂತನೆಗಳಿಗೆ ಸಮುದಾಯವು ಬೆಂಬಲ ನೀಡಬೇಕೆಂದು ಕೋರಿಕೊಳ್ಳುತ್ತೇನೆ.

ರಾಜ್ಯ ಸರ್ಕಾರವು ಹಿಂದುಳಿದ ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯದ ಹಿತದೃಷ್ಟಿಯನ್ನು ಕಾಪಾಡುವುದರೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿನ್ನಲೆಯಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ, ಹಡಪದ ಅಭಿವೃದ್ಧಿ ನಿಗಮ ಮತ್ತು ಗಾಣಿಗ ಅಭಿವೃದ್ಧಿ ನಿಗಮವನ್ನು ಈ ಅಧಿವೇಶನದಲ್ಲಿ ಘೋಷಣೆ ಮಾಡಿರೋದು ಸರಕಾರದ ಬದ್ಧತೆಗೆ ಸಾಕ್ಷಿಯಾಗಿದೆ. ಹಲವಾರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಸಮುದಾಯದ ನಾಯಕನಾಗಿ ನಾನು ಕೂಡ ಮನವಿಯನ್ನು ಸಲ್ಲಿಸಿ ಚರ್ಚೆ ಮಾಡಿ ಒತ್ತಾಯಿಸಿದರ ಪರಿಣಾಮವಾಗಿ ಮುಖ್ಯಮಂತ್ರಿಗಳು ಬೇಡಿಕೆಯ ಮಹತ್ವವನ್ನು ಗಮನಿಸಿ ನಿಗರುವನ್ನು ಘೋಷಣೆ ಮಾಡಿ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಹೀಗಾಗಿ ಕರ್ನಾಟಕದ ಇಡೀ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳು ಸರಕಾರಕ್ಕೆ ಋಣಿಯಾಗಿರುತ್ತದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ತಿಳಿಸಿದರು.

ವೆಂಕಟೇಶ ಕಡೇಚೂರ, ಪ್ರವೀಣ ಜತ್ತನ್, ಕುಪೇಂದ್ರ ಗುತ್ತೇದಾರ, ರಾಜಶೇಖರ ಗುತ್ತೇದಾರ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago