ಬಿಸಿ ಬಿಸಿ ಸುದ್ದಿ

ಇದು ಕಲ್ಯಾಣ ಕರ್ನಾಟಕ ಉತ್ಸವವಲ್ಲ, ಕೆಕೆಆರ್ಡಿಬಿ ಹಣದಲ್ಲಿ ಅಪ್ಪುಗೌಡ ಉತ್ಸವ; ಮಾಜಿ ಎಂಎಲ್ಸಿ

  • ಕೆಕೆಆರ್ಡಿಬಿ ಅಧ್ಯಕ್ಷರ ವಿರುದ್ಧ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಟೀಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕೆಕೆಆರ್ಡಿಬಿಯಿಂದ 5 ಕೋಟಿ ರುಪಾಯಿ ಬಳಸುತಿರೋದನ್ನ ತೀವ್ರವಾಗಿ ಆಕ್ಷೇಪಿಸಿರುವ ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಕಂಡ ಅಲ್ಲಂಪ್ರಭು ಪಾಟೀಲ್ ಆತುರದ ಉತ್ಸವದಲ್ಲಿ ಈ ಬಾಗದ ಕಲೆ, ಸಂಸ್ಕøತಿ, ಸಾಹಿತ್ಯದ ಚರ್ಚೆಗಳಿಗಿಂತ ಹೆಚ್ಚಾಗಿ ಮಂಡಳಿಯ ಅ್ಯಕ್ಷ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ (ಅಪ್ಪುಗೌಡ) ಅವರ ಪೋಟೋಗಳೇ ರಾರಾಜಿಸುತ್ತಿವೆ. ಹೀಗಾಗಿ ಇದು ಕೆಕೆಆರ್ಡಿಬಿ ಹಣದಲ್ಲಿನ ಅಪ್ಪುಗೌಡ ಉತ್ಸವವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಮಂಡಳಿಯ ಹಣ ಪ್ರಗತಿಗೆ ಮಾತ್ರ ಬಳಸಬೇಕು ಎಂಬ ಕಟ್ಟುನಿಟ್ಟು ನಿಯಮವಿದ್ದರೂ ಇಂತಹ ಉದ್ದೇಶ ರಹಿತ ಉತ್ಸವಗಳಿಗೆ ಬಳಸಲಾಗುತ್ತಿದೆ. ಉತ್ವದಲ್ಲಿನ ಸಂಗೀತ, ಸಾಹಿತ್ಯದ ಕಲಾವಿದರಾಗಿ ಹೊರಗಿನವರಿಗೆ ಮಣೆ ಹಾಕಿದ್ದಾರೆ, ಸ್ಥಳೀಯರನ್ನು ಸುಮ್ನೇ ಹೆಸರಿಗೆ ಬಳಸಲಾಗುತ್ತಿದೆ. ಉತ್ಸವದಲ್ಲಿ ಕಲೆ, ಸಂಸ್ಕøತಿ ಅನಾವರಣಕ್ಕಿಂತ ಶಾಸಕ ಅಪ್ಪುಗೌಡರ ರಾಜಕೀಯ ರೂಪಗಳ ಅನಾವರಣ ಸಾಗಿದೆ ಎಂದು ಅಲ್ಲಂಪ್ರಭು ಕುಟುಕಿದ್ದಾರೆ.

ಉತ್ಸವ ಮಾಡುವ ಸಮಯ ಇದಲ್ಲ, ಮಕ್ಕಳು, ಯುವಕರು ಎಲ್ಲರು ಪರೀಕ್ಷೆ ಎದುರಿಸುತ್ತಿದ್ದಾರೆ. ಕಲ್ಯಾಣದ ಜಿಲ್ಲೆಗಳಲ್ಲಿ ಪೀರಕ್ಷೆಗಳ ಸಮಯ, ಪಿಯುಸಿ ಮಕ್ಕಳು ಎಸ್ಸೆಸ್ಸೆಲ್ಸಿ ಮಕ್ಕಳು ಓದಿನಲ್ಲಿದ್ದರೆ. ಹೈಸ್ಕೂಲ್ ಮ್ಕಳಿಗೆ ಪರೀಕ್ಷೆ ನಡೆಯುತ್ತಿವೆ. ಇವರೆಲ್ಲರು ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವೆ? ಹಣವಿದೆ ಅಂತ ಬೇಕಾಬಿಟ್ಟಿ ಬಳಸಲಾಗುತ್ತಿದೆ. ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಉತ್ಸವ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಬಾಲಿವುಡ್, ಟಾಲಿವುಟ್, ಸಾಂಡಲ್ ಉಡ್ ಎಂದು ದುಬಾರಿ ಹಣ ಪಡೆಯುವ, ಆ ಮೂಲಕ ಪ್ರದರ್ಶನ ನೀಡುವವರಿಗೆ ಹೆಚ್ಚಿಗೆ ಆಹ್ವಾನಿಸಲಾಗಿದೆ. ಇದು ಬೇಕಿತ್ತಾ? ಕಲ್ಯಾಣದ ಉತ್ಸವ ಸ್ಥಳೀಯರ ಉತ್ಸವವಾಗಬೇಕಿತ್ತು. ಅದೆಲ್ಲ ಬಿಟ್ಟು ಈಗಾಗಲೇ ಹೆಸರು ಮಾಡಿರುವವರನ್ನೇ ಕರೆದು ಕುಣಿಸಿದರೆ, ಹಾಡಿಸಿದರೆ ನಮ್ಮ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಆಗುವುದಾ? ನಮ್ಮ ಪ್ರತಿಭೆಗಳಿಗೆ ವೇದಿಕೆ ಸಿಗದೆ ಹೋದರೆ ಮಂಡಳಿಯ ಹಣ ಹೀಗೆ ವ್ಯರ್ಥ ವೆಚ್ಚ ಮಾಡೋದು ಯಾವ ಪುರುಷಾರ್ಥಕ್ಕಾಗಿ? ಎಂದು ಅಲ್ಲಂಪ್ರಭು ಪ್ರಶ್ನಿಸಿದ್ದಾರೆ.

ನಗರಾದ್ಯಂತ ಕಂಬಗಳಿಗೆ ಅಪ್ಪುಗೌಡರ ಫೆÇೀಟೋಗಳಿರುವ ಬ್ಯಾನರ್ ಮಾತ್ರಕ್ಷ ಕಾಣುತ್ತಿವೆ. ಪಾಲಿಕೆಯವರು, ಜಿಲ್ಲಾಡಡಳಿತ ಅನ್ಯರ ಫ್ಲೆಕ್ಸ್ ಕಂಡರೆ ಹರಿದು ಹಾಕುತ್ತದೆ. ಅಪ್ಪುಗೌಡರದ್ದು ಕಂಡರೂ ಕಾಣದಂತೆ ತನ್ನ ಪಾಡಿಗೆ ತಾನಿದೆ. ಬ್ಯಾನರ್ ಹಚ್ಚಲು ಅವರು ಪರವಾನಿಗೆ ಪಡೆದಿದ್ದಾರಾ? ಕಲ್ಯಾಣ ಕರ್ನಾಟಕ ಮಂಡಳಿ ಎಂದರೆ ಕೇವಲ ಅಪ್ಪುಗೌಡರು ಒಬ್ಬರೇನಾ? ಮಂಡಳಿಗೆ ಸದಸ್ಯರಿದ್ದಾರೆ. ಯಾರೊಬ್ಬರ ಪೆÇೀಟೋಗಳನ್ನು ಬಳಸಲಾಗಿಲ್ಲ, ಏಕವ್ಯಕ್ತಿ ವೈಭವೀಕರಣ ಸಾಗಿದೆ. ಅದೂ ಸರ್ಕಾರದ ಹಣದಲ್ಲೇ ನಡೆದಿರೋದು ಆತಂಕದ ಸಂಗತಿ, ಇದನ್ನು ಎಲ್ಲರೂ ಖಂಡಿಸಲೇಬೇಕು ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಪಾಲಿಕೆ ಪೌರ ಕಾರ್ಮಿಕರಾದ ದೇವೀಂದ್ರ, ಅಂಬರೀಷ ಹಾಗೂ ವೆಂಕಣ್ಣ ಇವರು ಎಂದಿನಂತೆ ಅಡ್ಡಾದಿಡ್ಡಿ ಕಟ್ಟಿರುವ ಫಲೆಕ್ಸ್ ತೆಗೆದು ಹಾಕಲು ಮುಂದಾಗುತ್ತಿದ್ದಂತೆಯೇ ಶಾಸಕರ ಕಡೆಯವರು, ಅವರ ಅಭಿಮಾನಿಗಳು ಪಾರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಅವರೀಗ ಜಿಮ್ಸ್ನಲ್ಲಿ ದಾಖಲಾಗಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿ ಶಾಸಕರ ಬೆಂಬಲಿಗರು ಮಾಡುತ್ತಿದ್ದಿದ್ದು ಇದನ್ನು ತಾವು ಖಂಡಿಸುವುದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago