ಬಿಸಿ ಬಿಸಿ ಸುದ್ದಿ

24ಕ್ಕೆ ಗಡಿ ಪ್ರದೇಶದಲ್ಲಿ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’

ಸೊಲ್ಲಾಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟç ಇವುಗಳ ಸಹಯೋಗದಲ್ಲಿ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಫೆಬ್ರುವರಿ ೨೪ ರಂದು ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟç ಮತ್ತು ಕರ್ನಾಟಕ ಗಡಿಭಾಗದ ಜತ್ತ ತಾಲ್ಲೂಕಿನ ಸಂಖ ಗ್ರಾಮದ ಜಿಲ್ಲಾ ಪಂ. ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಫೆಬ್ರುವರಿ ೨೪ ರಂದು ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ ೯ ಗಂಟೆಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊAದಿಗೆ ಭುವನೇಶ್ವರಿ ದೇವಿ ಹಾಗೂ ಸರ್ವಾಧ್ಯಕ್ಷತೆ ಬಾಲಸಾಹಿತಿ ಕು.ಭಾಗ್ಯಶ್ರೀ ಘಿರಡೆ ಇವರ ಮೇರವಣಿಗೆ ಅದ್ದೂರಿಯಾಗಿ ನಡೆಯಲಿದ್ದು, ಸಂಖ ಗ್ರಾಮದ ಖ್ಯಾತ ಪ್ರವಚನಕಾರರು ಸಿದ್ರಾಮಯ್ಯಾ ಶಾಸ್ತಿçಗಳು ಸಾನಿಧ್ಯ ಮತ್ತು ಸಾಂಗಲಿ ಮಾಜಿ ಜಿಲ್ಲಾ ಪಂ. ಸದಸ್ಯೆ ಸೌ.ರೇಖಾ ಬಾಗೇಳಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷನ ವಿಸ್ತಾರ ಅಧಿಕಾರಿ ಮಹಾಂತೇಶ ಮಾಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ ೧೧ ಗಂಟೆಗೆ ಬಾಲಗಾಂವ ಗುರುದೇವಾಶ್ರಮದ ಪರಮ ಪೂಜ್ಯ ಶ್ರೀ ಡಾ.ಅಮೃತಾನಂದ ಸ್ವಾಮಿಜಿ ಮತ್ತು ಪೂಜ್ಯ ಶ್ರೀ ಮಹೇಶದೇವರು ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಅವರ ಅಧ್ಯಕ್ಷತೆಯಲ್ಲಿ ಶಾಸಕ ವಿಕ್ರಮ ಸಾವಂತ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಕನ್ನಡ ಹೋರಾಟಗಾರ ಡಾ.ಆರ್.ಕೆ.ಪಾಟೀಲ ಮತ್ತು ಸಾಂಗಲಿ ಜಿಲ್ಲಾ ಪಂ. ಮಾಜಿ ಉಪಾಧ್ಯಕ್ಷ ಬಸವರಾಜ ಪಾಟೀಲ ಇವರ ಪ್ರಮುಖ ಉಪಸ್ಥಿತಿಯಲ್ಲಿ ಮಾಜಿ ಶಾಸಕ ವಿಲಾಸರಾವ ಜಗತಾಪ ಅವರು ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರತಿಮೆಗೆ ಪೂಜೆ ಸಲ್ಲಿಸುವರು. ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಬಸು ಬೆವಿನಗಿಡ ಇವರು ಶಿಕ್ಷಣರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಅವರು ಆಶಯ ನುಡಿಗಳನ್ನಾಡುವರು. ಮಧ್ಯಾಹ್ನ ೧೨ ಗಂಟೆಗೆ ಮಕ್ಕಳ ಸಾಹಿತ್ಯದ ಸ್ಥಿತಿ-ಗತಿ : ಉಪನ್ಯಾಸ ಗೋಷ್ಠಿ ಮಕ್ಕಳ ಸಾಹಿತ್ಯದ ಇತ್ತೀಚಿನ ಒಲವುಗಳು ಕುರಿತು ಬಳ್ಳಾರಿಯ ಡಾ.ಶಿವಲಿಂಗಪ್ಪ ಹಂದಿನಾಳ, ಮಕ್ಕಳ ಸಾಹಿತ್ಯದ ಪ್ರಕಾರ ಸಾಧ್ಯತೆ ಕುರಿತು ಧಾರವಾಡದ ಡಾ.ವಿನಾಯಕ ಕಮತದ ಹಾಗೂ ಮಹಾಪಠ್ಯಪುಸ್ತಕ ಮತ್ತು ಬಾಲ ಸಾಹಿತ್ಯ ಕುರಿತು ಮಹಿಬೂಬ ಜಿಡ್ಡಿ ಉಪನ್ಯಾಸ ನೀಡಲಿದ್ದಾರೆ. ತದನಂತರ ಮಧ್ಯಾಹ್ನ ೨.೩೦ ಗಂಟೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಬಳ್ಳಾರಿಯ ಕವಿ ವಿರೇಂದ್ರ ರಾವಿಹಾಳ ಇವರ ಅಧ್ಯಕ್ಷತೆಯಲ್ಲಿ ಬಾಲಕವಿ ಗೋಷ್ಠಿ ನಡೆಯಲಿದೆ.

ಮಧ್ಯಾಹ್ನ ೩.೩೦ ಗಂಟೆಗೆ ಧಾರವಾಡದ ಡಾ.ಪರಮೇಶ್ವರ ಸೊಪ್ಪಿಮಠ ಇವರ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೪.೩೦ ಗಂಟೆಗೆ ಸೊಲ್ಲಾಪುರದ ಹಿರಿಯ ಸಾಹಿತಿ ಡಾ.ಮಧುಮಾಲ ಲಿಗಾಡೆಯವರ ಅಧ್ಯಕ್ಷತೆಯಲ್ಲಿ ಬಾಲಪ್ರತಿಭೆ ಪುರಸ್ಕಾರ ಹಾಗೂ ಸಮಾರೋಪ ಸಮಾರಂಭ. ಸಾಯಂಕಾಲ ೬ ಗಂಟೆಗೆ ಶ್ರೀಕಾಂತ ಪಾಟೀಲರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಿಲಿಪಿಲಿ ಗಾನಸಂಭ್ರಮ ಕಾರ್ಯಕ್ರಮ ಸೇರಿದಂತೆ ನೃತ್ಯ, ನಾಟಕ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಕಸಾಪ ಮಹಾರಾಷ್ಟç ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ, ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ಶಿಕ್ಷಕ ನೇತಾರ ರಾಜಶೇಖರ ಉಮರಾಣಿಕರ, ವಿದ್ಯಾಧರ ಗುರವ, ಗಿರೀಶ ಜಕಾಪುರೆ, ಶರಣು ಕೋಳಿ, ಯಲ್ಲಪ್ಪ ಇಟೆನವರ, ರಾಜಕುಮಾರ ಗೊಬ್ಬೂರ, ವಾಸುದೇವ ದೇಸಾಯಿ ಸೇರಿದಂತೆ ಮೊದಲಾದವರು ಇದ್ದರು.

ಸಮಾರಂಭದಲ್ಲಿ ಪಾಲ್ಗೋಳ್ಳಲಿರುವ ಪ್ರಮುಖ ಅತಿಥಿಗಳು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರದ ನಿರ್ದೇಶಕ ಬಿ.ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟç ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಎನ್.ಸಿ.ಪಿ.ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ, ವಕೀಲರಾದ ಚೆನ್ನಪ್ಪಣ್ಣಾ ಹೋರ್ತಿಕರ್, ಜಿಲ್ಲಾ ಪಂ.ಮಾಜಿ ಸಭಾಪತಿ ತಮ್ಮಣಗೌಡ ರವಿ ಪಾಟೀಲ ಹಾಗೂ ಯುವ ನಾಯಕ ಸಂಜೀವಕುಮಾರ ತೇಲಿ, ಗಟವಿಕಾಸ ಅಧಿಕಾರಿ ದಿನಕರ ಖರಾತ್, ತಹಸಿಲ್ದಾರ ಎಸ್.ಆರ್.ಮಾಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನವನಾಥ ಕದಮ್, ಶಿಕ್ಷಣ ವಿಸ್ತಾರ ಅಧಿಕಾರಿಗಳಾದ ಅನ್ಸಾರ್ ಶೇಖ, ಶಿವಾನಂಧ ಹಿರೇಮಠ, ತುಕಾರಾಮ ಗಾಯಕವಾಡ, ತಾನಾಜಿ ಗವಾರೆ ಹಾಗೂ ಪ್ರಾಥಮಿಕ ಶಿಕ್ಷಕ ಬ್ಯಾಂಕ್ ಅಧ್ಯಕ್ಷ ವಿನಾಯಕ ಶಿಂಧೆ, ಸಂಚಾಲಕರಾದ ಅಮೋಲ ಶಿಂಧೆ, ಫತ್ತೂ ನಧಾಫ್, ಗಾಂಧಿ ಚೌಗುಲೆ, ಗ್ರಾಮವಿಕಾಸ ಅಧಿಕಾರಿ ಶ್ರೀಶೈಲ ಬಿರಾದಾರ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಪಾಲ್ಗೋಳ್ಳಲಿದ್ದಾರೆ. 

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟç ಇವುಗಳ ಸಹಯೋಗದಲ್ಲಿ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಫೆಬ್ರುವರಿ ೨೪ ರಂದು ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಲಾಗಿದ್ದು, ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದಲ್ಲಿ ಗಡಿಭಾಗದ ಕನ್ನಡ ಸಂಘ-ಸAಸ್ಥೆಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಸಂಭ್ರಮಕ್ಕೆ ಮೆರಗು ತರಬೇಕು. – ಪ್ರಕಾಶ ಮತ್ತಿಹಳ್ಳಿ, ಕಾರ್ಯದರ್ಶಿಗಳು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago