ಸೇಡಂ; ನಗರದಲ್ಲಿಂದು ಶಾರದಾ ಚಾರಿಟೇಬಲ್ ಟ್ರಸ್ಟ್, ಬಾಲರಾಜ್ ಬ್ರಿಗೇಡ್ ಫೌಂಡೇಶನ್ ವತಿಯಿಂದ ಮುಸ್ಲಿಂ ಧರ್ಮಗುರುಗಳ ಹಿತವಚನ ಹಾಗೂ ಸತ್ಕಾರ ಸಮಾರಂಭ ಏರ್ಪಡಿಸಲಾಗಿತ್ತು. ಬಂದಂತ ಎಲ್ಲಾ ಮುಸಲ್ಮಾನ ಬಾಂಧವರಿಗೆ ಹಾಗೂ ಮೌಲ್ವಿಗಳಿಗೆ ಬ್ರಿಗೇಡ್ ವತಿಯಿಂದ ಎಲ್ಲರಿಗೂ ಸತ್ಕರಿಸಲಾಯಿತು.
ಮೌಲಾನ ಅಬ್ದುಲ್ ರಹೀಮ್ ವಿಕಾರ ಅಶ್ರಫ್ ಅವರು ಮಾತನಾಡಿ ಬಾಲರಾಜ್ ಗುತ್ತೇದಾರ್ ಅವರ ಸರಳತೆಯ ಬಗ್ಗೆ ಕೊಂಡಾಡಿದರು ಕೊರೋನಾ ಸಂಕಷ್ಟದಲ್ಲಿ ಜನ ಬಳಲುತ್ತಿದ್ದಾಗ ಅವರು ಶಕ್ತಿ ಮೀರಿ ಕೆಲಸ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಅವರ ಮನುಷ್ಯ ಜಾತಿಯ ಮೇಲೆ ಪ್ರೀತಿ ವಿಶ್ವಾಸ ಕಾಳಜಿ ನೋಡಿದರೆ ಅವರು ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಸೀಮಿತ ಇಲ್ಲ. ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.
ಕೋವಿಡ ಸಮಯದಲ್ಲಿ ವಿಜಯಪುರ, ಬಾಗಲಕೋಟ ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕೂಡಾ ಬಾಲರಾಜ್ ಬ್ರಿಗೇಡ್ ವತಯಿಂದ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುವ ಮೂಲಕ ವಿಶೇಷವಾಗಿ ಸೇಡಂ ಜನತೆಗೆ ಸುಮಾರು 60000 ಕಿಂತ ಹೆಚ್ಚು ಕಿಟ್ ವಿತರಣೆ, ತಂದೆ ತಾಯಿಗಳನ್ನು ಕಳೆದುಕೊಂಡ ಅನಾಥರಿಗೆ ದತ್ತು ತೆಗೆದುಕೊಂಡು ಅವರ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.
ಕಾರ್ಯಗಳು, ಅವರಲ್ಲಿರುವ ಧೀಮಂತ ನಾಯಕತ್ವ, ಜನಪರ ಕಾಳಜಿ, ಎಲ್ಲರೊಂದಿಗೆ ನಗು ಮಗುದೊಂದಿಗೆ ಯಾವಾಗಲೂ ಹಸನ್ಮುಖಿಯಾಗಿ ಸದಾ ಜನರ ಸೇವೆಯನ್ನೇ ಬಯಸುವ ಎಲ್ಲಾ ಜನಾಂಗವನ್ನು ತೆಗೆದುಕೊಂಡು ಹೋಗುವ ಯಾರಾದರೂ ನಾಯಕರಿದ್ದರೆ ಅದು ಬಾಲರಾಜ್ ಗುತ್ತೇದಾರ್ ಎಂದು ಹೇಳಿದರು. ನಂತರ ಬಾಲರಾಜ್ ಗುತ್ತೇದಾರ್ ಮಾತನಾಡಿ ಮೊದಲಿಗೆ ನಾನು ರಾಜಕೀಯ ವ್ಯಕ್ತಿಯಾಗಿ ಹಾಗೂ ವೋಟು ಕೇಳಲು ಬಂದಿಲ್ಲ. ಯಾವಾಗಲೂ ಕೂಡ ನಮ್ಮ ಗುತ್ತೇದಾರ್ ಫ್ಯಾಮಿಲಿಯವರು ದಾನ ಧರ್ಮ ಮಾಡುತ್ತಲೇ ಬಂದಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಾನು ಕೂಡ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
ಈ ಬ್ರಿಗೇಡ್ ಇಂದ ಅನೇಕರಿಗೆ ಸಹಾಯವಾಗಿದೆ ಹಾಗೆ ಇನ್ನೂ ಹೆಚ್ಚು ಕೆಲಸ ಮಾಡಲು ಶಕ್ತಿ ಮಾಡಲು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರೆ ಸಾಕು ಆ ನಿಮ್ಮ ಒಂದು ಆಶೀರ್ವಾದ ಯಾವಾಗಲೂ ಕೂಡ ನಮ್ಮ ಮೇಲೆ ಇರಬೇಕು. ನಮ್ಮ ದೇಶವನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಮೊದಲು ನಮ್ಮಲ್ಲಿ ಮಾನವೀಯತೆ ಬರಬೇಕು. ಮನುಷ್ಯನಲ್ಲಿ ಮನುಷ್ಯತ್ವ ಇರಬೇಕು ಹಾಗೂ ಎಲ್ಲರೂ ಸೇರಿ ಜಾತಿಭೇದ ಮಾಡದೆ ಮೊದಲು ದೇಶದವನ್ನು ಪ್ರೀತಿಸುವ ನಾಗರಿಕರಾಗಬೇಕು. ಮುಂದೆ ಬರುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಲರಾಜ್ ಬ್ರಿಗೇಡ್ ಸಂಸ್ಥಾಪಕರು ಶ್ರೀ ಬಾಲರಾಜ್ ಗುತ್ತೇದಾರ, ತಾಲೂಕ ಅಧ್ಯಕ್ಷರು ಬಾಲರಾಜ್ ಬ್ರಿಗೇಡ್ ಫೌಂಡೇಶನ್ ಶಿವಕುಮಾರ್ ಅಪ್ಪಾಜಿ ನಿಡಗುಂದ ಸೇಡಂ, ಹಿರಿಯರಾದ ಇಕ್ಬಾಲ ಖಾನ್ ಸಾಬ್, ಸೈಯದ್ ನಯಾದ್ ಕುರಸಿ, ಮೊಹಮ್ಮದ್ ಸಜ್ಜದ್, ಹರೀಶ್ ಗುತ್ತೇದಾರ್, ಮುಕುದುಮ್ ಪಟೇಲ್, ಮೆಹಬೂಬ್ ಹುಸೇನಿ, ಹೇಮಂತ್ ಷಾ, ಪವನ್ ಗುತ್ತೇದಾರ, ಅನೇಕ ಮುಸಲ್ಮಾನ ಭಾಂದವರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…