ಕಲಬುರಗಿ: ಮಹಾಮಾತೆ ರಮಾಬಾಯಿ ಅಂಬೇಡ್ಕರ್ ರವರ 125ನೇ ಜಯಂತ್ಯೋತ್ಸವನ್ನು ಫೆ 26 ರಂದು ಕಲಬುರಗಿಯ ದೀಕ್ಷಾ ಭೂಮಿಯಲ್ಲಿ ಜರುಗಲಿದೆ ಎಂದು ಬಹುಜನ ಸಮಾಜದ ಮುಖಂಡ ಸೂರ್ಯಕಾಂತ ನಿಂಬಾಳ್ಕರ ಹೇಳಿದರು.
ಅವರು ಶಹಾಬಾದ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ರಮಾಬಾಯಿ ಅಂಬೇಡ್ಕರ್ ರವರ 125ನೇ ಜಯಂತ್ಯೋತ್ಸವದ ನಿಮಿತ್ತ ಕಲಬುರಗಿ ನಡೆಯುವ ಕಾರ್ಯಕ್ರಮಮದ ಕುರಿತು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕಿನಲ್ಲಿ ಅವರ ಪತ್ನಿ ರಮಾಬಾಯಿಯ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಅವರಿಗೆÀ ಪತ್ನಿ ಬೆನ್ನುಲುಬಾಗಿ ನಿಂತು ಅವರು ಬಹು ಎತ್ತರಕ್ಕೆ ಬೆಳೆಯಲು ಏಣಿಯಾಗಿದ್ದರು. ಅಂಬೇಡ್ಕರ್‍ರವರ ಓದು-ಬರಹಗಳನ್ನು ಪೆÇೀಷಿಸಿದವರು ರಮಾಬಾಯಿ ಅಂಬೇಡ್ಕರ್ ಎಂದು ಹೇಳಿದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಈ ಸಾಲು ಹಳೆಯದಾದರೂ ತಾತ್ಪರ್ಯ ಮಾತ್ರ ನಿತ್ಯ ನೂತನ.ಬಹುಶಃ ಬಾಬಾಸಾಹೇಬರಿಗಿಂತ ಮಿಗಿಲಾದ ಪದಗಳಲ್ಲಿ ಮಾತೆ ರಮಾಬಾಯಿಯವರ ಬದುಕನ್ನು ವಿವರಿಸಲು ಸಾಧ್ಯವೇ ಇಲ್ಲ. ಖಂಡಿತ, ಅಂತಹ ತ್ಯಾಗಮಯಿ ತಾಯಿಯ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಿದೆ. ಆ ನಿಟ್ಟಿನಲ್ಲಿ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ರವರ 125ನೇ ಜಯಂತ್ಯೋತ್ಸವನ್ನು ಆಯೋಜಿಸಲಾಗಿದ್ದು, ತಾಲೂಕಿನ ಎಲ್ಲಾ ಜನರೂ ಭಾಗವಹಿಸಬೇಕು ಎಂದರು.
ಅಲ್ಲದೇ ಇದೇ ಸಂದರ್ಭದಲ್ಲಿ ಕರ ಪತ್ರಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಮುಖಂಡರಾದ ಡಾ. ಹಣಮಂತರಾವ ದೊಡ್ಡಮನಿ, ಸಂತೋಷ ಮೇಲಿನಮನಿ, ಲಕ್ಷ್ಮಣ ಸೋನಕಾಂಬಳೆ ಹಾಗೂ ಸತೀಶ ಕೋಬಾಳ, ಸುಭಾಷ ಸಾಕರೆ, ಪ್ರವೀಣ ರಾಜನ, ಬಸವರಾಜ ಮಯೂರ, ನರಸಿಂಹಲು ರಾಯಚೂರ, ಭೀಮಾಶಂಕರ ಕಾಂಬಳೆ, ಹಣಮಂತ ತರನಲ್ಲಿ, ಪೂಜಪ್ಪ ಮೇತ್ರೆ, ಶಂಕರ ಜಾನಾ, ಸಿದ್ದಾರ್ಥ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…