ಕಲಬುರಗಿ: ನೇಕಾರಿಕೆ ಪವಿತ್ರವಾದ ವೃತ್ತಿಯಾಗಿದೆ. ಕೇವಲ ಒಂದು ಜನಾಂಗದವರಿಗೆ ಸಿಮೀತವಾಗಿದ್ದ ಇದು, ಇಂದು ಎಲ್ಲಾ ವರ್ಗದವರು ಇದರಲ್ಲಿ ತೊಡಗಿದ್ದು, ಜಾತಿಯನ್ನು ಮೀರಿ ಬೆಳೆದ ವೃತ್ತಿಯಾಗಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ ಎನ್. ಅಭಿಪ್ರಾಯ ಪಟ್ಟರು.
ಶುಕ್ರವಾರ ಇಲ್ಲಿ ಸಪ್ತ ನೇಕಾರರ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು, ಕೃಷಿ ಮತ್ತು ನೇಕಾರಿಕೆ ವೃತ್ತಿಗಳು ದೇಶದ ಬಹು ದೊಡ್ಡ ವೃತ್ತಿಯಾಗಿವೆ. ಎಲ್ಲಾ ವರ್ಗದವರು ಇವುಗಳಲ್ಲಿ ತೊಡಗಿದ್ದಾರೆ. ನೇಕಾರಿಕೆ ಅಭಿವೃದ್ಧಿಗಾಗಿ ನೇಕಾರರು ಹಾಗೂ ನೇಕಾರಿಕೆ ವೃತ್ತಿಯಲ್ಲಿ ತೊಡಗಿದವರಿಗೆ ಸರಕಾರ ಹಲವಾರು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆಯುವ ಮೂಲಕ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕೆಂದರು.
ಸೇವಾ ಕೇಂದ್ರವನ್ನು ಉದ್ಘಾಟಿಸಿದ ಬಯಲು ಗ್ರಂಥಾಲಯದ ರೂವಾರಿ, ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ವೃತ್ತಿಗಳು ಕೈಗೊಳ್ಳಬೇಕಾದರೆ ಸಾಕಷ್ಟು ಯೋಚನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಅನಾದಿ ಕಾಲದಿಂದಲೂ ನಡೆದು ಕೊಂಡು ಬಂದಿರುವ ತಮ್ಮ ಮೂಲವೃತ್ತಿಯನ್ನು ಉಳಿಸಿಕೊಂಡು ಬಂದವರಿದ್ದಾರೆ. ಅಂತವರ ಸಮಸ್ಯೆಗೆಳಿಗೆ ಸ್ಪಂದಿಸಿ, ಸಹಾಯ ಮಾಡಿ, ಪ್ರೋತ್ಸಾಹಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸೇವಾ ಕೇಂದ್ರದ ಪ್ರಮುಖರಾದ ಶಿವಲಿಂಗಪ್ಪ ಅಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಟಗಾರ, ದೇವಾಂಗ, ಕುರುಹಿನಶೆಟ್ಟಿ, ಪಟ್ಟಸಾಲಿ, ಪದ್ಮಸಾಲಿ, ಸ್ವಕುಳಸಾಲಿ, ತೋಗಟವೀರ, ಕ್ಷತ್ರೀಯ ನೇಕಾರ ಬಂಧುಗಳನ್ನು ಒಂದುಗೂಡಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ, ಸರಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವುದು, ಅವರ ಅಭಿವೃದ್ಧಿಗಾಗಿ ಶ್ರಮಿಸಲು ಈ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಸೇವಾ ಕೇಂದ್ರದ ಮತ್ತೋರ್ವ ಪ್ರಮುಖರೂ, ವಕೀಲರಾದ ವಿನೋದಕುಮಾರ ಜನೇವರಿ ಸ್ವಾಗತಿಸಿ, ಸಪ್ತ ನೇಕಾರ ಬಂಧಗಳನ್ನು ಒಂದುಗೂಡಿಸಬೇಕೆಂಬ ಬಹುದಿನಗಳ ಕನಸು ಇಂದು ನನಸಾಗಿದೆ. ಸಪ್ತ ನೇಕಾರ ಸಮುದಾಯದ ಎಲ್ಲಾ ಹಿರಿಯರು, ಪ್ರಮುಖರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಒಂದು ಐತಿಹಾಸಿಕ ದಿನವಾಗಿದೆ. ಎಲ್ಲರ ಸಹಕಾರ, ಅಭಿಪ್ರಾಯದೊಂದಿಗೆ ಸಂಘಟನೆ ಮಾಡಲಾಗುತ್ತದೆ ಎಂದರು.
ಸಾನಿದ್ಯವನ್ಮು ಗಂಗಾಧರ ಸ್ವಾಮಿ ಅಗ್ಗಿಮಠ ವಹಿಸಿದ್ದರು. ಹಿರಿಯ ಸಾಹಿತಿ ಸೂರ್ಯಕಾಂತ ಸೊನ್ನದ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸೇವಾ ಕೇಂದ್ರದ ಜಿಲ್ಲಾ ಸಂಚಾಲಕ ಚಂದ್ರಶೇಖರ ಮ್ಯಾಳಗಿ ವಂದಿಸಿದರು.
ಸಪ್ತ ನೇಕಾರರ ಸಮುದಾಯದ ಪ್ರಮುಖರಾದ ಅಣ್ಣಾರಾಯ ಕುಣಿಕೇರಿ, ರೇವಣಸಿದ್ದಪ್ಪ ಗಡ್ಡದ, ಶ್ರೀನಿವಾಸ ಬಲಪುರ, ಸಂಗಮನಾಥ ರೇವತಗಾಂವ್, ಸತೀಶ ಜಮಖಂಡಿ, ಚನ್ನಮಲ್ಲಪ್ಪ ಯಳಸಂಗಿ, ಭೀಮಾಶಂಕರ ರಾಜಗುಂಡ, ಮಲ್ಲಿನಾಥ ಬಡ್ಡೂರ, ಶಾಂತಕುಮಾರ ಯಳಸಂಗಿ, ಬಸವರಾಜ ಕರದಾಳ, ಶಿವಪುತ್ರಪ್ಪ ಬಾವಿ, ಯಶವಂತರಾವ್ ಪಾಟೀಲ್, ಪ್ರಕಾಶ, ಶಿವರಾಜ ಪೋಲಿಸ್ ಪಾಟೀಲ್, ದಯಾನಂದ ಅಂಬಲಗಿ, ಸಂಜೀವಪ್ಪ, ರಾಜಗೋಪಾಲ ಬಂಢಾರೆ, ರಾಜು ಕೊಸ್ಟಿ, ಸತ್ಯನಾರಾಯಣ ಸೇರಿದಂತೆ ಮೊದಲಾದವರು ಪಾಲ್ಗೊಂಡಿದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…