ಬಿಸಿ ಬಿಸಿ ಸುದ್ದಿ

ವಿವಿಧ ಸಂಘ ಸಂಸ್ಥೆಗಳಿಂದ ನೆರೆ ಸಂತ್ರಸ್ಥರಿಗೆ ನಿಧಿ ಸಂಗ್ರಹ

ಸುರಪುರ: ಪ್ರವಾಹದಿಂದ ನಷ್ಟಕ್ಕೊಳಗಾದ ಸಂತ್ರಸ್ತರಿಗೆ ನೆರವಾಗಲು ಕರ್ನಾಟಕ ನವ ನಿರ್ಮಾಣ ವೇದಿಕೆ,ಸಗರನಾಡಿನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ,ಕಾಯಕ ಶಿಕ್ಷಣ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವಣಕಿಹಾಳ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಗಾಂಧಿ ವೃತ್ತದಿಂದ ಪೂಜ್ಯರಾದ ಶ್ರೀ ಗಿರಿಮಠದ ಪೂಜ್ಯ ಬಸವಲಿಂಗ ದೇವರು ಮತ್ತು ಪೂಜ್ಯರಾದ ಶಾಂತಮೂರ್ತಿ ಶಿವಚಾರ್ಯರು ಸಮ್ಮುಖದಲ್ಲಿ ನಿಧಿ ಸಂಗ್ರಹಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಲಕ್ಷ್ಮೀಪುರ ಶ್ರೀಗಿರಿಮಠದ ಬಸವಲಿಂಗ ದೇವರು ಹಾಗು ರುಕ್ಮಾಪುರ ಹಿರೇಮಠದ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಪ್ರವಾಹದಿಂದ ಒಳಗಾದ ಜನರಿಗೆ ನೆರವು ಅನಿವಾರ್ಯ ಇದೆ ಆದ ಕಾರಣ ಸುರಪುರ ತಾಲೂಕಿನ ಎಲ್ಲಾ ಸಂಘ ಸಂಸ್ಥೆಯವರು ಸ್ವಇಚ್ಛೆಯಿಂದ ಸಹಾಯ ಸಹಕಾರ ಮಾಡಿ ಪ್ರತಿಯೊಬ್ಬರು ಮಾನವಿಯತೆ ಮೆರೆಯೋಣವೆಂದು ಕರೆಕೊಟ್ಟರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಇಂದು ನಾಡಿನಲ್ಲಿ ಸಂತ್ರಸ್ತರದಾವರೆಲ್ಲರು ನಮ್ಮ ಬಂಧುಗಳಾಗಿದ್ದು,ಅವರ ಬದುಕನ್ನು ಸರಕಾರದ ಜೊತೆ ಸೇರಿ ಕಟ್ಟಿ ಕೊಡುವ ಜವಬ್ದಾರಿ ನಮ್ಮೆಲ್ಲರದಾಗಿದ್ದು ಎಲ್ಲರು ನೆರೆ ಸಂತ್ರಸ್ತರಿಗೆ ನೆರವು ನಿಡೋಣ,ಆ ನಿಟ್ಟಿನಲ್ಲಿ ಇಂದು ವಿವಿಧ ಸಂಘ ಸಂಸ್ಥೆಗಳು ಮಾಡುತ್ತಿರುವ ಕಾರ್ಯ ಶ್ಲಾಘನಿಯವಾಗಿದೆ ಎಂದರು.

ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ,ಕರ್ನಾಟಕ ನವ ನಿರ್ಮಾಣ ವೇದಿಕೆಯ ಉ.ಕ ಅಧ್ಯಕ್ಷ ಶಿವು ಕಲಿಕೇರಿ.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದೇವಿಂದ್ರಪ್ಪ ಗೌಡ ಮಾಲಗತ್ತಿ, ಕಾಯಕ ಗ್ರಾಮೀಣಾಭೀವೃಧ್ಧಿ ಟ್ರಸ್ಟ್‌ನ ನಾಗಭೂಷಣ ಯಾಳಗಿ, ಶಿವರಾಜ ವಗ್ಗರ ದೀವಳಗುಡ್ಡ, ಸಗರ ನಾಡಿನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಕವಡಿಮಟ್ಟಿ, ಆನಂದ ಮಡ್ಡಿ,ಬಸವರಾಜ ದೇವಾಪೂರ,ಮಂಜುನಾಥ ಸುರಪುರ,ಜೈ ಕರ್ನಾಟಕ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ, ವೀರೇಶ ಪಂಚಾಂಗಮಠ, ಚಂದ್ರಶೇಖರ ಡೊಣ್ಣೂರು, ವಿನಯ ಪಂಚಮಗಿರಿ ಮಲ್ಲಣ್ಣ ಸಾಹು ಮುದೋಳ, ಜಗದೀಶ ಪಾಟೀಲ್ ಸೂಗೂರು, ವೆಂಕಟೇಶ ಗುತ್ತೇದಾರ ಸೂಗೂರು, ಶಿವನಗೌಡ ಸೂಗೂರು, ಚನ್ನಬಸವ ವಾಲಿ, ವಾಸು ನಾಯಕ, ಆಕಾಶ ಕಟ್ಟಿಮನಿ, ಬಾಗೇಶ ಯಾಳಗಿ, ರಾಹುಲ್ ಹೆಚ್ ಮತ್ತು ಶರಣಪ್ಪ ಕರಡಿ ಸತ್ಯಂಪೇಟ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago