ಬಿಸಿ ಬಿಸಿ ಸುದ್ದಿ

ಬಬಲಾದ ಮಠದಲ್ಲಿ 148ನೇ ಶಿವಾನುಭವ ಗೋಷ್ಟಿ

ಕಲಬುರಗಿ: ಸುಳ್ಳಿನಿಂದ ಪಡೆದ ಸ್ಥಾನ, ದರ್ಪದಿಂದ ಸಂಪಾದಿಸಿದ ಗೌರವ, ಮೋಸದಿಂದ ಗಳಿಸಿದ ಹಣ ಎಂದು ಶಾಶ್ವತವಲ್ಲ ನಾವು ಮಾಡಿದ ಒಳ್ಳೆಯ ಕಾರ್ಯವೆ ಶಾಶ್ವತವಾಗಿರುತ್ತದೆ ಎಂದು ಶಿಕ್ಷಕರಾದ ಮಲ್ಲಿನಾಥ ಮುನ್ನೋಳಿ ಹೇಳಿದರು.

ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 148ನೇ ಶಿವಾನುಭವ ಗೋಷ್ಟಿ  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಸಹನೆ ಇದ್ದರೆ ಸಮಯ ಕೂಡ ಸಹಕರಿಸುತ್ತದೆ, ತಾಳ್ಮೆಯನ್ನು ಮೈಗೂಡಿಸಿಕೊಂಡು  ಮಾನವೀಯ ಮೌಲ್ಯಗಳೊಂದಿಗೆ  ಸಮೃದ್ಧ ಸಮಾಜ ಕಟ್ಟಬೇಕು. ತಮ್ಮ ಜೀವನವನ್ನು ತ್ಯಾಗ ಮಾಡಿ ರಾಷ್ಟ್ರಕ್ಕೆ ಅರ್ಪಣೆ ಮಾಡಿದ ರಾಷ್ಟ್ರ ಭಕ್ತರು ನಮ್ಮ ಆದರ್ಶ ವ್ಯಕ್ತಿಗಳಾಗಬೇಕು. ಬಿದ್ದಾಗ ನೋಡಿ ನಗುವ ನೂರು ಸಂಬಂಧಿಕರಿಗಿಂತ, ಕೈ ಹಿಡಿದು ಮೇಲೆ ಎತ್ತುವ ಒಬ್ಬ ಹೃದಯವಂತನೇ ಶ್ರೇಷ್ಠ. ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲ್ಲಿರುವ ಹಲವಾರು ಪ್ರತಿಭೆಗಳಿಗೆ ಶ್ರೀ ಮಠವು ಪ್ರತಿವಾರ ವೇದಿಕೆ ಕೊಡುವುದರೊಂದಿಗೆ ಈ ಭಾಗದ ಕವಿ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರಾಜಕುಮಾರ ಬಿರಬಿಟ್ಟೆ ಆಗಮಿಸಿದರು. ಛಾಯಾ, ಪೂಜಾ ಪ್ರಾರ್ಥಿಸಿದರು. ಮಾಣಿಕ್ ಮಿರ್ಕಲ್ ಸ್ವಾಗತಿಸಿದರು. ಸಂಗಮೇಶ ನಾಗೂರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶರಣು ಮಾಲಿ ಪಾಟೀಲ, ಸಿದ್ದಣ ವಾಡಿ, ಗುರುರಾಜ ಹಸರಗುಂಡಗಿ, ಮಾಣಿಕ ಗುತ್ತೇದಾರ, ಬಸವರಾಜ ಮಗಲಿ, ಶರಣಬಸಪ್ಪ ಕಲ ಹಿಪ್ಪರಗಿ, ಮಲ್ಲಿನಾಥ ಗುತ್ತೇದಾರ, ಶಾಂತಲಿಂಗ,ದಯಾನಂದ ಹೇಮಾಜಿ,ಮಲ್ಲಿಕಾರ್ಜುನ ಬೋರಂಪಳ್ಳಿ, ಜಗನ್ನಾಥ ಸಜ್ಜನ ಸೇರಿದಂತೆ ಹಲವಾರು ಜನ ಭಾಗವಹಿಸಿದರು.

emedialine

Recent Posts

ಶ್ರೀಮತಿ ವಿ. ಜಿ. ಪದವಿ ಪೂರ್ವ ಕಾಲೇಜಿನಲ್ಲಿ – ಸಂವಿಧಾನ ದಿನ

ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…

6 mins ago

ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ

ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…

9 mins ago

ಅರಿವಿಂಗೆ ಹಿರಿದು ಕಿರಿದುಂಟೆ ?: ತಿಂಗಳ ಬಸವ ಬೆಳಕು 120 ವಿಶೇಷ ಉಪನ್ಯಾಸ

ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…

14 mins ago

ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…

19 mins ago

ಸರ್ವರಿಗೂ ಬದುಕುವ ಮೂಲಭೂತ ಹಕ್ಕನ್ನು ನೀಡಿದ್ದು ಸಂವಿಧಾನ: ಮೇತ್ರಿ

ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…

21 mins ago

ಸಂವಿಧಾನ ಮೌಲ್ಯ ಅರಿತು ನಡೆದರೆ ದೇಶ ಉನ್ನತ ಸ್ಥಾನದಲ್ಲಿರುತ್ತದೆ: ನಿಂಗಣ್ಣ

ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…

23 mins ago