ಕಲಬುರಗಿ: ಜೇವರ್ಗಿ ತಾಲೂಕಿಗೆ ಹೆಚ್ಚಿನ ನೀರಾವರಿ ಸವಲತ್ತು ಒದಗಿಸುವ ಮಹತ್ವಾಕಾಂಕ್ಷಿ ಮ¯್ಲÁಬಾದ್ ಏತ ನೀರಾವರಿ ಯೋಜನೆಯ ಲಿಫ್ಟ್ 1 ಮತ್ತು ಲಿಫ್ಟ್ 2 ರ ವಿತರಣಾ ಕಾಲುವೆಯಡಿಯಲ್ಲಿ ಬರುವ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ 330. 40 ಕೋಟಿ ರುಪಾಯಿ ಭಾರಿ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದೆ.
ಬೆಂಗಳೂರಲ್ಲಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆದಂತಹ ಕೆಬಿಜೆಎನ್‍ಎಲ್ ಮಂಡಳಿ ಸಭೆಯಲ್ಲಿ ಈ ಅನುಮೋದನೆ ದೊರಕಿದೆ. ಇದಕ್ಕಾಗಿ ಸಿಎಂ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ್ ಹಾಗೂ ಸರ್ಕಾರಕ್ಕೆ ಜೇವರ್ಗಿ ಶಾಸಕರು, ವಿರೋಧ ಪಕ್ಷ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಅಭಿನಂದಿಸಿದ್ದಾರೆ.
ಯೋಜನೆಯ ಉಳಿದ ಕಾಮಗಾರಿಗಳನ್ನು ಮಾಡಿ ಮುಗಿಸಲು ಹಣಕಾಸಿನ ಅನುಮೋದನೆ ದೊರಕಿರೋದು ತುಂಬ ಮಹತ್ವದ್ದು, ಇದರಿಂದಾಗಿ ಜೇವರ್ಗಿಯಲ್ಲಿ ಹೆಚ್ಚುವರಿ ನೀರಾವರಿ ಸಾಮಥ್ರ್ಯ ಸೃಷ್ಟಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಹರುಷ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಜಯ್ ಸಿಂಗ್ ಅಗತ್ಯ ಅನುದಾನವಿಲ್ಲದೆ ಮಲ್ಲಾಬಾದ್ ನೀರಾವರಿ ಯೋಜನೆ ಅಪೂರ್ಣವಾಗಿತ್ತು. ಕಳೆದ 3 ವರ್ಷದಿಂದ ತಾವು ಸದನದ ಒಳಗೆ, ಹೊರಗೆ ಸತತ ಬೆನ್ನುಬಿದ್ದು ಹೆಚ್ಚಿನ ಅನುದಾನಕ್ಕಾಗಿ ಆಗ್ರಹಿಸಿದ್ದೆ. ಸಿಎಂ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ್ ಅವರು ತುಂಬ ಕಾಳಜಿಹಿಸಿ ನಮ್ಮ ಆಗ್ರಹಕ್ಕೆ ಸ್ಪಂದಿಸಿ ಯೋಜನೆಯ ಉಳಿದ ಕಾಮಗಾರಿ ಪೂರ್ಣ ಗೊಳಿಸಲು 330. 40 ಕೋಟಿ ರು ಅನುದಾನಕ್ಕೆ ಮಂಜೂರಾತಿ ನೀಡಿದ್ದು ಅದಕ್ಕಾಗಿ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಹಾಗೂ ಸರ್ಕಾರಕ್ಕೆ ಜೇವರ್ಗಿ ಜನತೆಯ ಪರವಾಗಿ ಧನ್ಯವಾದ ಹೇಳಿದ್ದಾರೆ.
ಮ¯್ಲÁಬಾದ್ ಏತ ನೀರಾವರಿಯ ಲಿಪ್ಟ್ 1 ರಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 6 ರಿಂದ 9 ರ ವರೆಗಿನ ಹಾಗೂ ವಿತರಣಾ ಕಾಲುವೆ ಸಂಖ್ಯೆ 3 ರಡಿಯಲ್ಲಿ ಬರುವ ಲ್ಯಾಟರಲ್ ನಿರ್ಮಾಣ ಪ್ಯಾಕೇಜ್ ಕಾಮಗಾರಿಗಳು, ಲಿಫ್ಟ್ 2 ರಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 1 ರಿಂದ 13 ಹಾಗೂ ವಿತರಮಾ ಕಾಲುವೆ ಬಿಡಿ 1 ಮತ್ತು ಬಿಡಿ 2 ರ ಲ್ಯಾಟರಲ್ ಒಳಗೊಂಡ ಪ್ಯಾಕೇಜು ಕಾಮಗಾರಿಗಳು ಸೇರಿದಂತೆ 330. 40 ಕೋಟಿ ರುಪಾಯಿಅನುದಾನ ಮಂಜೂರಾಗಿದೆ.
ಇವೆಲ್ಲ ಕಾಮಗಾರಿಗಳು ಇದೀಗ ಕೆಬಿಜೆಎನ್‍ಎಲ್‍ನಿಂದ ಅನುಮೋದನೆಗೊಳಗಾಗಿರೋದರಿಂದ ಜೇವರ್ಗಿಯ 42 ಹಳ್ಳಿ, ಶಹಾಪುರದ- 17 ಹಾಗೂ ಸುರಪುರದ 8 ಹಳ್ಳಿ ಸೇರಿದಂತೆ ಒಟ್ಟು 72 ಹಳ್ಳಿಗಳ ಜನತೆಗೆ ನೀರಾವರಿ ಸವಲತ್ತು ದೊರಕಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…