ಬಿಸಿ ಬಿಸಿ ಸುದ್ದಿ

ಒಡಲೆಂಬ ಬಂಡಿಗೆ ಶರಣರ ಸೂಳ್ನುಡಿ ಅವಶ್ಯ: ಪತ್ರಕರ್ತ ಸತ್ಯಂಪೇಟೆ

ಕಲಬುರಗಿ: 12ನೇ ಶತಮಾನ ಕನ್ನಡ ಇತಿಹಾಸದ ಬೆಳಕಿನ ಸಂಪುಟ. ಸತ್ಯ ಶುದ್ಧ ಕಾಯಕ- ದಾಸೋಹದ ಮೂಲಕ ಜನಮಾನಸದಲ್ಲಿ ಇಂದಿಗೂ ಬೇರೂರಿರುವ ಶರಣರ ಚಿಂತನೆಗಳು 21ನೇ ಶತಮಾನಕ್ಕೂ ಪ್ರಸ್ತುತ ಎಂದು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಮಹಾತ್ಮ ಬಸವೇಶ್ವರ ನಗರದ ಬಡಾವಣೆಯಲ್ಲಿ ವಚನೋತ್ಸವ ಸಮಿತಿ ಶ್ರಾವಣ ಮಾಸದ ಅಂಗವಾಗಿ ಬಸವೇಶ್ವರ ಕಾಲೋನಿಯ ಬಾಬುರಾವ ಮಠಪತಿ ಅವರ ಮನೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶರಣರ ವಚನಗಳ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ‘ ಕಡೆಗೀಲಿಲ್ಲದ ಬಂಡಿ’ ವಚನ ವಿಶ್ಲೇಷಣೆ ಮಾಡಿ ಮಾತನಾಡಿದ ಅವರು, ನಡೆ-ನುಡಿ ಒಂದಾಗಿಸಿಕೊಂಡಿದ್ದ ಶರಣರ ವಚನಗಳು ಅಧರಕ್ಕೆ ಕಹಿಯಾಗಿ ಕಂಡು ಬಂದರೂ ಉದರಕ್ಕೆ ಸಿಹಿಯಾಗಿವೆ ಎಂದು ಹೇಳಿದರು.

ವಿದ್ಯೆಯೊಂದೇ ದೇವನೊಲಿಸುವ ಸಾಧನವೆಂದು ಹೇಳುವ ಈ ದೇಶದಲ್ಲಿ ಉದ್ಯೋಗ ಕೂಡ ದೇವನೊಲಿಸುವ ಸಾಧನವೆಂದು ಕಾಯಕದ ಘನತೆ ಹೆಚ್ಚಿಸಿದ ಶರಣರು, ‘ನಿನೊಮ್ಮೆ ಎನ್ನಂತೆ ಒಡಲುಗೊಂಡು ನೋಡು! ಎಂದು ಸವಾಲು ಹಾಕಿದವರು ಮಾತ್ರವಲ್ಲ; ದೇವರಿಗೆ ಕನ್ನಡ ಕಲಿಸಿದವರು ಎಂದು ಹೇಳಬಹುದು.
                                                                                       – ಸತ್ಯಪ್ರಿಯ

ವಿದ್ಯೆಯೊಂದೇ ದೇವನೊಲಿಸುವ ಸಾಧನವೆಂದು ಹೇಳುವ ಈ ದೇಶದಲ್ಲಿ ಉದ್ಯೋಗ ಕೂಡ ದೇವನೊಲಿಸುವ ಸಾಧನವೆಂದು ಕಾಯಕದ ಘನತೆ ಹೆಚ್ಚಿಸಿದ ಶರಣರು, ‘ನಿನೊಮ್ಮೆ ಎನ್ನಂತೆ ಒಡಲುಗೊಂಡು ನೋಡು! ಎಂದು ಸವಾಲು ಹಾಕಿದವರು ಮಾತ್ರವಲ್ಲ; ದೇವರಿಗೆ ಕನ್ನಡ ಕಲಿಸಿದವರು ಎಂದು ಹೇಳಬಹುದು.-ಸತ್ಯಪ್ರಿಯ

ಬದುಕು ಮೂರಾಬಟ್ಟೆಯಾಗದಂತೆ ಕಾಪಾಡಲು ಶಿವಶರಣರ ಹಿತವಚನಗಳ ಕಡಡಗೀಲು ಬೇಕು. ಆದ್ಯರ ವಚನ ಬಿಟ್ಟು ಅನ್ಯಬಾವಿಯ ನೀರು ಕುಡಿದ ರೀತಿಯಲ್ಲಿ ಬೇರೆ ಕಡೆ ಸಾಗಿರುವ ನಾವುಗಳು ನಮ್ಮ ವಚನ ತವನಿಧಿಯ ಲಾಭ ಪಡೆದುಕೊಳ್ಳಬೇಕು. ಜನಮೆಚ್ಷಿಸಲು ಬದುಕುವುದಕ್ಕಿಂತ ಮನಮೆಚ್ಚಿ ನಡೆಯಬೇಕು ಎಂದು ವಿವರಿಸಿದರು. ಕನ್ನಡದ ವಚನ ಮುಂಗೋಳಿ ಎಂದು ಗುರುತಿಸಲಾಗುವ ದೇವರ ದಾಸಿಮಯ್ಯನವರು, ಎತ್ತಿನ ಬಂಡಿಗೆ ಯಾವ ರೀತಿ ಕಡೆಗೀಲು ಅವಶ್ಯಕವಿದೆಯೋ ಹಾಗೆಯೇ ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣವೇ ಕಡೆಗೀಲು ಎಂಬುದನ್ನು ತುಂಬಾ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.

ಕೆಲಸ-ಕಾಯಕ, ಮಾತು-ಮಂತ್ರ, ಅನ್ನ-ಪ್ರಸಾದ, ಜೀವ-ಶಿವ, ನರ-ಹರ, ಮಾನವ-ಮಹಾದೇವನನ್ನಾಗಿ ಪರಿವರ್ತಿಸಿದ ಶರಣರು, ಸಮಾಜದಲ್ಲಿ ನೆಮ್ಮದಿ, ಸಮಾನತೆ ನೆಲೆಗೊಳಿಸಿದರು ಎಂದು ವಿವರಿಸಿದರು.
ರಾಮನಾಥ ಅಂಕಿತದಲ್ಲಿ ದಾಸಿಮಯ್ಯ ಬರೆದ 150 ವಚನಗಳು ದೊರಕಿದ್ದು, ಸರಳ ಭಾಷೆ, ತಾತ್ವಿಕ ಚಿಂತನೆ, ಸಾಮಾಜಿಕ ವಿಡಂಬನೆ, ಉದಾತ್ತ ಚಿಂತನೆಗಳನ್ನು ಇವರ ವಚನದಲ್ಲಿ ಕಾಣಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಬದುಕಿನ ಇಂದಿನ ತಲ್ಲಣಗಳಿಗೆ ಸೂಕ್ತ ಪರಿಹಾರ ಸೂಚಿಸುವ ವಚನಗಳ ಆಂತರ್ಯವನ್ನು ಅರಿತು ಅರಗಿಸಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಬಸವಾದಿ ಶರಣರ ಅರಿವಿನ ಪ್ರಜ್ಞೆಯನ್ನು ವಿಸ್ತರಿಸುವ ಕಾರ್ಯ ಮತ್ತೆ ಕಲ್ಯಾಣ ಕಾರ್ಯಕ್ರಮ ಆ. 29 ರಂದು ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ. ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈರಣ್ಣ ತೊರವಿ ನಿರೂಪಿಸಿದರು. ಬಾಬುರಾವ ಮಠಪತಿ ಸ್ವಾಗತಿಸಿದರು. ನಾಗಣ್ಣ ಗಣಜಲಖೇಡ ವಂದಿಸಿದರು.
ಸೋಮಣ್ಣ ಕೊಳಾರ, ರುದ್ರಪ್ಪ ಪಾಟೀಲ, ಪ್ರಭಾಕರ ನೆಲೋಗಿ, ಬಸವರಾಜ ಆವಂಟಿ, ಜಿತೇಂದ್ರ ಏರಿ, ಸೋಮು ಕುಂಬಾರ, ಚಿತ್ರಶೇಖರ ಶೀಲವಂತ ಇತರರಿದ್ದರು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago