ಕಲಬುರಗಿ: ನಗರದ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸಾಯಿಟಿ ವತಿಯಿಂದ ಗರಗದ ಮಡಿವಾಳೇಶ್ವರ ಸ್ವಾಮಿಗಳ ಪುರಾಣ ಪ್ರವಚನದಲ್ಲಿ ಮಡಿವಾಳೇಶ್ವರ ತೊಟ್ಟಿಲು ಕಾರ್ಯಕ್ರಮ ಸುತ್ತ-ಮುತ್ತಲಿನ ಬಡಾವಣೆಯ ನೂರಾರು ಭಕ್ತರು ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು.
ನಗರದ ಬಸವೇಶ್ವರ ಆಸ್ಪತ್ರೆ ಎದುರಗಡೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಿತ್ತೂರಿನ ರಾಣಿ ಚನ್ನಮ್ಮನ ಆಶ್ರಯದಲ್ಲಿ ರಾಜ ಮನೆತನದ ವೈಭವದಲ್ಲಿ ಆಯಾ ಪ್ರದೇಶದ ಸುತ್ತ-ಮುತ್ತಲಿನ ಗ್ರಾಮದ ಸಣ್ಣ ಸಣ್ಣ ರಾಜರು ಹಾಗೂ ಅಸಂಖ್ಯಾತ ಸೈನಿಕರ ಸಮ್ಮುಖದಲ್ಲಿ ಸಕಲ ರಾಜಮರ್ಯಾದೆಯಿಂದ ತೊಟ್ಟಿಲು ಕಾರ್ಯಕ್ರಮ ನಡೆದಿರುವಂತಹ ಸನ್ನಿವೇಶದಲ್ಲಿ ನಮ್ಮ
ಪೂಜ್ಯ ಚನ್ನಮಲ್ಲ ಸ್ವಾಮಿಜಿಗಳು ಪ್ರತಿನಿತ್ಯ ಸಾಯಂಕಾಲ ೬.೩೦ ರಿಂದ ೮.೩೦ರವರೆಗೆ ಪುರಾಣ-ಪ್ರವಚನ ಮಾಡುತ್ತಿದ್ದಾರೆ. ಜಗದೀಶ ನಗನೂರ, ಮತ್ತು ಜಗದೀಶ ಸಿದ್ದಣ್ಣಾ ದೇಸಾಯಿ ಕಲ್ಲೂರ ಸಂಗೀತ ಸೇವೆ ನೀಡುತ್ತಿದ್ದಾರೆ. ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಉಪಸ್ಥಿತರಿರುವರು.
ಸಂತೋಷ ಡಿಗ್ಗಿ ಹರಸೂರ ಅವರು ತೊಟ್ಟಿಲು ಸೇವೆ ಮಾಡಿದರು ಶ್ರೀಮತಿ ಅರ್ಚನಾ, ರಾಜು ಮುಗಳನಾಗಾಂವ ಇವರು ತೊಟ್ಟಿಲ ಕೆಳಗೆ ಕುಂತು ಸೇವೆ ಮಾಡಿದರು ಸಭಾಷ ಮಂಠಾಳೆ ಪ್ರಸಾದ ಸೇವೆ ಮಾಡಿದರು ನಿರ್ಮಲಾ ದೋತ್ರಿ, ನಾಗರಾಜ ಹೆಬ್ಬಾಳ ಮಹಾದೇಪ್ಪಾ ಪಾಟೀಲ್ ಆಯೇರಿ ಪಟ್ಟಿ ಬರೆದರು ಕಮಲಾಬಾಯಿ ಹೆಬ್ಬಾಳ ಹಾಗೂ ಕಲ್ಲಮ್ಮ ಹೆಬ್ಬಾಳ ಸಂಪ್ರದಾಯದ ತೊಟ್ಟಿಲು ಹಾಡುಗಳು ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದು ಕೊಟ್ಟರು.
ಕಟಗೀಯ ತೊಟ್ಟಿಲ ನೂಲಿನ ಹಗ್ಗ
ಜೋ ಜೋ ಎನ್ನೀರೇ
ಅಕ್ಕ ನಿನ್ನ ಮಗನ ಹೆಸರೇನಿಸಬೇಕು
ಜೋ ಜೋ ಎನ್ನೀರೇ
ಅಕ್ಕ ನಿನನ್ ಮಗನ ಹೆಸರೇನಿಡಬೇಕು
ಜೋ ಜೋ ಎನ್ನೀರೇ
ಗರಗದ ಮಡಿವಾಳನೆಂದು ಕರೆಯಿರವ್ವ
ಜೋಜೋ ಎನ್ನೀರೇ
ಮಡಿವಾಳೇಶ ಮಡಿವಾಳೇಶ ಕೂರ
ಎಂದು ಸುಮಂಗಲಾ ನಾಗಶೆಟ್ಟಿ, ವಿಜಯಲಕ್ಷ್ಮಿ ರಟಕಲ್, ಉಮಾದೇವಿ ಹೆಬ್ಬಾಳ, ಅನೀತಾ ಪಾಟೀಲ್, ಜಗದೇವಿ ಡಿಗ್ಗಿ, 5 ಜನ ಮಹಿಳೆಯರು ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. ತರುಣಾ ಸಂಘದ ಸದಸ್ಯರು ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮದ ನಂತರ ತರುಣಶೇಖರ ಬಿರೆದಾರ, ಮಹಾದೇವ ತಂಬಾಕೆ, ಡಾ. ಸಂತೋಷ ಪಾಟೀಲ್, ದರ್ಮರಾಜ ಹೆಬ್ಬಾಳ, ಶ್ರೀವತ್ಸ ಸಂಗೋಳಗಿ, ಸಿದ್ದೇಶ ಹೆಬ್ಬಾಳ, ರಾಜಶೇಖರ ತಂಬಾಕೆ, ಅನೀಲಕುಮಾರ ನಾಗೂರ, ಸಂತೋಷ ನಿಂಬೂರ, ರಮೇಶ ಪಾಟೀಲ್, ಗೌಡಪ್ಪಗೌಡ ಪಾಟೀಲ್, ಗುರು ಮಂಠಾಳೆ, ವಿಶ್ವನಾಥ ಮಠಪತಿ, ಸಂತೋಷ ಪ್ಯಾಟಿ, ಪ್ರಸಾದ ವಿತರಣೆ ಸೇವೆ ಮಾಡದ್ದಾರೆಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…