ಕಲಬುರಗಿ: ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡುವ ಸಾಮಾಜಿಕ ಕಳಕಳಿಯಿಂದ ಪರೋಪಕಾರಿ ಪ್ರಭಾಕರ ಛಪ್ಪರಬಂದಿ ಸ್ಮರಣಾರ್ಥ ಧನ್ವಂತರಿ ಆಸ್ಪತ್ರೆ ಹಾಗೂ ಶ್ರೀ ಕೃಪಾ ಕ್ಲಿನಿಕ್ ಸಂಯುಕ್ರಾಶ್ರಯದಲ್ಲಿ ಆ.15 ರಂದು ಬೆಳಗ್ಗೆ 11 ಗಂಟೆಗೆ ಫಿಲ್ಟರ್ ಬೆಡ್ ರಸ್ತೆಯಲ್ಲಿರುವ ಶ್ರೀ ಕೃಪಾ ಕ್ಲಿನಿಕ್ ಆವರಣದಲ್ಲಿ ಒಂದು ದಿನದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಶರಣರಾಜ್ ಛಪ್ಪರಬಂದಿ ತಿಳಿಸಿದ್ದಾರೆ.
ಜಿಪಂ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗುರುರಾಜ ಛಪ್ಪರಬಂದಿ ಅಧ್ಯಕ್ಷತೆ ವಹಿಸಲಿದ್ದಾರೆ.
ಯುವ ಮುಖಂಡರಾದ ಚಂದು ಬಿ.ಜಿ.ಪಾಟೀಲ, ಡಾ.ಅಲೋಕ ಸಿ.ಪಾಟೀಲ ರೇವೂರ, ಹಿರಿಯ ನ್ಯಾಯವಾದಿ ಜಿ.ಎಸ್.ಬಿರಾದಾರ, ಹಿರಿಯ ವೈದ್ಯ ಡಾ.ರಾಜಶೇಖರ ಛಪ್ಪರಬಂದಿ, ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಯುವ ಮುಖಂಡರಾದ ನಾಸೀರ್ ಹುಸೇನ್ ಉಸ್ತಾದ್, ಶರಣಬಸಪ್ಪ ಹಾಗರಗಿ, ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಮುಖರಾದ ಮಲ್ಲಿಕಾರ್ಜುನ ಹೀರಾಪುರಸಿ, ಮಹಾಂತೇಶ ಪಾಟೀಲ ಅಷ್ಟಗಿ, ಜನಪರ ಹೋರಾಟಗಾರ ಹಣಮಂತರಾಯ ಅಟ್ಟೂರ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನುರಿತ ವೈದ್ಯರಾದ ಡಾ.ರಾಹುಲ್ ಮಂದಕನಳ್ಳಿ, ಡಾ.ಗಿರೀಶ ರೋಣದ್, ಡಾ.ಸೌಮ್ಯ ಹತ್ತಿ ಪಾಟೀಲ, ಡಾ.ಮಹಾಂತೇಶ, ಡಾ.ವಿಶ್ವನಾಥ ಮುಗಳಿ, ಡಾ.ನವೀನ ಆವಟಿ ಸೇರಿ ಅನೇಕ ವೈದ್ಯರು ಭಾಗವಹಿಸಲಿದ್ದಾರೆ.
ಹಾಗಾಗಿ, ಗ್ರಾಮೀಣ ಪ್ರದೇಶದ ಜನರು ಇದರ ಲಾಭ ಪಡೆದುಕೊಳ್ಳಲು ಅವರು ಕೋರಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…