ಶಹಾಪುರ : ಮನುಷ್ಯ ಜನ್ಮವೆಂಬುದು ಅತ್ಯಪೂರ್ವವಾದುದು. ಇದು ಮತ್ತೆ ಮತ್ತೆ ಹುಟ್ಟಿ ಬರುತ್ತದೋ ಇಲ್ಲ ಗೊತ್ತಿಲ್ಲ.ಆದರೆ ಇರುವಾಗಲೆ ಇದರ ಸದ್ಭಳಕೆ ಮಾಡಿಕೊಳ್ಳಬೇಕು. ನಾವು ಜೀವಿಸುವಷ್ಟು ವರ್ಷವೂ ಪರೋಪಕಾರಿಯಾಗಿ ಬದುಕುಬೇಕು. ಶರಣರ ವಿಚಾರಧಾರೆ ಇಂಬಿಟ್ಟುಕೊಂಡು ನಡೆದರೆ ಬದುಕಿನ ಬಂಡಿ ಎಂದಿಗೂ ಹಳಿಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಶರಣ ಸಾಹಿತಿ , ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಅವರು ನಗರದ ಫಕೀರೇಶ್ವರ ಆವರಣದಲ್ಲಿ ಏರ್ಪಡಿಸಿದ್ದ ಗುರಣ್ಣ ಮದರಿಯವರ ವಯೋ ನಿವೃತ್ತಿ ಹಾಗೂ ಅವರ ಪಷ್ಠಿಪೂರ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಬದುಕಿನ ಉದ್ದಕ್ಕೂ ಹರೆಯದಿಂದ, ಚೈತನ್ಯದಿಂದ ಇರಲು ಸಾಧ್ಯವಿಲ್ಲ. ಮೈಕೈ ಗಟ್ಟಿಮುಟ್ಟಿ ಇದ್ದಾಗಲೆ ಕಾಯಕವನ್ನು ಮಾಡಬೇಕು. ನಾವು ಮಾಡುವ ಕಾಯಕ ಕೇವಲ ನನ್ನ ಹೆಂಡತಿ ಮಕ್ಕಳಿಗಾಗಿ ಮಾತ್ರ ಮೀಸಲಾಗದೆ ಸಾರ್ವಜನಿಕರಿಗೂ ಅನುಕೂಲ ಆಗಬೇಕು.
ಯಾವ ವ್ಯಕ್ತಿ ಸಾರ್ವಜನಿಕ ತುಡಿತ ಇಟ್ಟುಕೊಳ್ಳುತ್ತಾನೋ ಆತ ಚರಿತ್ರೆಯ ಪುಟದಲ್ಲಿ ದಾಖಲಾಗುತ್ತಾನೆ. ಜೊತೆಗೆ ಸ್ವತಃ ಆ ವ್ಯಕ್ತಿಗೂ ಆತ್ಮ ಸಂತೃಪ್ತಿ ಎಂಬುದು ಇರುತ್ತದೆ. ಗುರಣ್ಣ ಮದರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದಾನೆ. ಆರೋಗ್ಯ ಕೇಂದ್ರದಲ್ಲಿ ಆತನ ಕೆಲಸ ನೋಡಿ ಮೆಚ್ಚದವರೆ ಇಲ್ಲ. ಸರಕಾರದ ನೌಕರಿಯ ಜೊತೆ ಜೊತೆಗೆ ಸಾರ್ವಜನಿಕ ಕೆಲಸಗಳಲ್ಲಿಯೂ ಗುರಣ್ಣ ಮದರಿ ಆಸಕ್ತಿಯಿಂದ ತನ್ನನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾನೆ ಎಂದು ಅಭಿಪ್ರಾಯ ಪಟ್ಟರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಮೇಶ ಗುತ್ತೇದಾರ ಮಾತನಾಡಿ, ಗುರಣ್ಣ ಮದರಿಯಂತಹ ಪ್ರಾಮಾಣಿಕ ಮತ್ತು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಹಯಿಸುತ್ತಿದ್ದ ವ್ಯಕ್ತಿಯನ್ನು ಕಳಕೊಂಡಂತಾಗಿದೆ ಎಂದು ಹಳಹಳಿ ಪಟ್ಟರು. ತಾಲೂಕು ಆರೋಗ್ಯ ಇಲಾಖೆಯ ಡಾ.ಮಲ್ಲಪ್ಪ , ಭೀಮರಾಯನಗುಡಿಯ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ರಾಜಕುಮಾರ ಜಾಮಗೊಂಡ ಮಾತನಾಡಿದರು. ಸಾನಿಧ್ಯವಹಿಸಿದ್ದ ಗುರುಮಿಠಕಲ್ ಖಾಸಾಮಠದ ಪೂಜ್ಯ ಶ್ರೀ.ಶಾಂತವೀರ ಸ್ವಾಮೀಜಿ ಮಾತನಾಡಿ ಮನುಷ್ಯ ಮನಸ್ಸು ಮಾಡಿದರೆ ಆತನಿಗೆ ಯಾವ ಕೆಲಸವೂ ಹೊರೆ ಅಲ್ಲ. ನಗು ನಗುತ್ತಲೇ ಎಲ್ಲವನ್ನೂ ಮಾಡಲು ಸಾಧ್ಯ. ಸಾಧಿಸುವ ಛಲವೊಂದು ನಮ್ಮಲ್ಲಿ ಇರಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಫಕಿರೇಶ್ವರ ಮಠದ ಪೂಜ್ಯ ಶ್ರೀ.ಗುರುಪಾದ ಸ್ವಾಮೀಜಿ ವಹಿಸಿದ್ದರು.
ಇದೆ ಸಂದರ್ಭದಲ್ಲಿ ಗುರಣ್ಣ ಮದರಿ ದಂಪತಿಗಳಿಗೆ ಬಂಧು ಬಳಗದವರು, ಸ್ನೇಹಿತರು ಗೌರವಿಸಿ, ಸನ್ಮಾನಿಸಿದರು. ಮಡಿವಾಳಪ್ಪ ಪಾಟೀಲ ಹೆಗ್ಗಣದೊಡ್ಡಿ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರ್ವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…