ಬಿಸಿ ಬಿಸಿ ಸುದ್ದಿ

ಮೊಬೈಲ್ ಕಾರಣದಿಂದ ಭ್ರಮಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ: ಡಾ. ಸಿ.ಆರ್.ಚಂದ್ರಶೇಖರ

ಕಲಬುರಗಿ:  ಪ್ರಪಂಚದಲ್ಲಿ ಮೊಬೈಲ್ ಬಂದಾಗಿನಿಂದ ಪರಸ್ಪರ ಮುಖ ನೋಡಿ ಮಾತನಾಡುವ ಸಂಸ್ಕೃತಿ ಮಾಯವಾಗಿದ್ದು ಕೇವಲ ಭ್ರಮಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ.  ಇದರಿಂದ ಸಂಬಂಧಗಳು ತೆಳುವಾಗಿ ಹೋಗುತ್ತಿವೆ ಎಂದು ನಾಡಿನ ಖ್ಯಾತ ಮನೋರೋಗ ತಜ್ಞ ಡಾ. ಸಿ.ಆರ್.ಚಂದ್ರಶೇಖರ ಪ್ರತಿಪಾದಿಸಿದರು.

ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ಕಲಬುರಗಿ ಮತ್ತು ಡಾ. ಎಸ್.ಎಸ್.ಸಿದ್ದಾರೆಡ್ಡಿ ಫೌಂಡೇಶನ್ ಬೀದರ-ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ ಯುವಜನತೆ ಆಧುನಿಕ ತಂತ್ರಜ್ಞಾನ ಹಾಗೂ ಮನೋಸ್ಥಿತಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ನಮ್ಮ ದೇಶದಲ್ಲಿ ಪ್ರಸ್ತುತ ೧೩೦ ಕೋಟಿ ಜನಸಂಖ್ಯೆ ಇದ್ದು ೪೫ ಕೋಟಿ ಸ್ಮಾರ್ಟ ಫೋನ್ ಬಳಕೆದಾರರಿದ್ದಾರೆ.  ಪ್ರತಿ ಮೂರು ಜನಕ್ಕೊಬ್ಬರು ಸ್ಮಾರ್ಟ ಫೋನ ಬಳಕೆ ಮಾಡುತ್ತಿದ್ದು ಅದರಲ್ಲಿಯೂ ಯುವಜನತೆಗೆ ಮೊಬೈಲ್ ಮತ್ತು ಇಂಟರನೆಟ್ ಗೀಳು ಹೆಚ್ಚಾಗಿ ಹೋಗಿದ್ದು ಆಧುನಿಕ ತಂತ್ರಜ್ಞಾನವನ್ನು ಯುವ ಸಮೂಹ ಜ್ಞಾನಾರ್ಜನೆ, ಮನೋರಂಜನೆ, ವ್ಯಕ್ತಿತ್ವ ವಿಕಾಸಕ್ಕೆ ಬಳಸಿಕೊಳ್ಳುವ ಬದಲಾಗಿ ನಕಾರಾತ್ಮಕವಾದ ಮತ್ತು ವಿಕೃತವಾದ ಆಶ್ಲೀಲವಾದ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಇದು ಹೀಗೆ ಸಾಗಿದರೆ ಬಹುದೊಡ್ಡ ಬೆಲೆ ತೆತ್ತಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೊಬೈಲ್‌ನಿಂದ ಬಿಡುವಿನ ಆರೋಗ್ಯಕರವಾದ ಸಂಘಟಿತ ಸಮೂಹದ ಆಟ-ಪಾಠಗಳು, ಶ್ರಮ ಸಂಸ್ಕೃತಿ ಕಣ್ಮರೆಯಾಗಿದ್ದು, ಕೇವಲ ಹಣ ಗಳಿಕೆ, ಟೈಮ ಪಾಸ್, ಒಂಟಿತನ ನಿವಾರಣೆಗಾಗಿ ಬಳಕೆ ಮಾಡುವುದು ಹೆಚ್ಚಾಗಿ ಹೋಗುತ್ತಿದ್ದು ಮನಿಷ್ಯನ ನೈಜವಾದ ಬದುಕಿನ ಸಂಸ್ಕೃತಿ ಮಾಯವಾಗಿ ಆಹಾರ ವಿಹಾರದಲ್ಲಿಯೂ ವ್ಯತ್ಯಾಸವಾಗುತ್ತಿರುವುದರಿಂದ ಆರೋಗ್ಯದ ಮೆಲೆ ಅತ್ಯಂತ ದುಷ್ಪರಿಣಾಮ ಬೀರುತ್ತಿದ್ದು ಇದರಿಂದ ವಿದ್ಯಾರ್ಥಿ ಮತ್ತು ಯುವಜನಾಂಗ ಮನೋರೋಗ ಸೇರಿದಂತೆ ಅನೇಕ ದೈಹಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ಉಧಾರಣೆ ಸಮೇತ ವಿವರಿಸಿದರು.  ವಾರದಲ್ಲಿ ಹತ್ತಾರು ಜನ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ನನ್ನ ಹತ್ತಿರ ಬಂದು ಇವರಿಗೆ ಆಪ್ತ ಸಮಾಲೋಚನೆ ಮಾಡಿ ಎಂದು ಹೇಳುತ್ತಾರೆ.

ಇಳಿ ವಯಸ್ಸಿನಲ್ಲಿಯೇ ಮಕ್ಕಳು ಹೀಗೆ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದರು.  ಅಳುವ, ಹಟ ಮಾಡುವ ಮಕ್ಕಳನ್ನು ತಾಯಿ ಸಂತೈಸುವ ಬದಲು ಅವರ ಕೈಗೆ ಮೊಬೈಲ್ ಕೊಟ್ಟು ಬಿಡುವುದು ಅತ್ಯಂತ ಅನಾರೋಗ್ಯಕರವಾಗಿದ್ದು ಸಂತೈಸುವ ಗುಣ ತಾಯಿ ಮರೆತುಹೋಗಿದ್ದು ಇದರಿಂದ ಬಾಲ್ಯದಲ್ಲೇ ಅಂದ, ಚೆಂದ, ಬಲ್ಯದ ಸವಿ ಪಡೆಯಬೇಕಾದ  ಮಕ್ಕಳು  ಕೇವಲ  ಮೊಬೈಲ್, ಟಿ. ವಿ. ಗಳಲ್ಲಿ  ಮುಳುಗಿ   ಹೋಗುತ್ತಿರುವುದುಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಅತಿಯಾದ ಮೊಬೈಲ್ ಬಳಕೆಯಿಂದ ಅಪರಾಧವೂ ಸೇರಿದಂತೆ ಅನೇಕ ವಿಕೃತತನಗಳು ಸಮಾಜದಲ್ಲಿ ನಡೆಯುತ್ತಿರುವುದು ನಾವು ದಿನನಿತ್ಯ ನೋಡುತ್ತೇವೆ.  ಅಗತ್ಯಕ್ಕೆ ತಕ್ಕಷ್ಟು ಮಾತ್ರ ತಂತ್ರಜ್ಞಾನ ಮಾಡಿಕೊಂಡು, ವ್ಯಕ್ತಿತ್ವ ವಿಕಾಸನ ರೂಪಿಸಿಕೊಂಡು ಸಾಗುವಂತೆ ಕರೆ ನೀಡಿದರು.  ಪಾಲಕರು ಯಾವುದೇ ಕಾರಣಕ್ಕೂ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಮೊಬೈಲ್ ಕೊಡದಂತೆ ಮನವಿ ಮಾಡಿದ ಅವರು ಕುಟುಂಬಸ್ಥರೆಲ್ಲರೂ ಕುಳಿತು ಪರಸ್ಪರ ಸಮಾಲೋಚನೆ, ಆಟ-ಪಾಠ ಕ್ರೀಯಾತ್ಮಕವಾದ ಕೆಲಸ ಕಾರ್ಯಗಳನ್ನು ಕೈಗೊಂಡು ಮನೆಯ ವಾತಾವರಣ ಸಂಭ್ರಮದಿಂದ ಇರುವಂತೆ ನೋಡಿಕೊಳ್ಳಬೇಕೆಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ: ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿ ತಂತ್ರಜ್ಞಾನದಿಂದ ನೇರವಾಗಿ ಧಾರ್ಮಿಕ ಸಂಸ್ಕೃತಿಯ ಮೆಲೆ ಪರಿಣಾಮ ಬೀರಿದ್ದು ಶ್ರದ್ಧೆಯಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಜನ ಸಮೂಹ ಈಗ ಕಡಿಮೆಯಾಗುತ್ತಿರುವುದು ಮತ್ತು ಕೇವಲ ಯಾಂತ್ರಿಕವಾಗಿ ಭಾಗವಹಿಸುತ್ತಿರುವುದು ನೋವಿನ ಸಂಗತಿಯಾಗಿದ್ದು ಅದರಲ್ಲೂ ಯುವ ಸಮೂಹ ಧಾರ್ಮಿಕ ಆಚರಣೆಯಿಂದ ಬಹುದೂರ ಸಾಗುತ್ತಿದೆ.  ಸಂಸ್ಕೃತಿ, ಸಂಸ್ಕಾರ ಇಲ್ಲದವರಿಗೆ ಆಭದ್ರತೆ, ಆತಂಕ ಮತ್ತು ಮಾನಸಿಕ ರೋಗದಿಂದ ಬಳಲುತ್ತಾರೆಂದು ನುಡಿದರು.

ಇದೇ ಸಂದರ್ಭದಲ್ಲಿ ಡಾ. ಸಿ.ಆರ್. ಚಂದ್ರಶೇಖರ ರವರು ಬರೆದ ಸಮಾಧಾನ ಚಿತ್ತರಾಗಿರಿ ಕೃತಿಯನ್ನು ಖ್ಯಾತ ನೇತ್ರ ತಜ್ಞೆ ಶ್ರೀಮತಿ ಡಾ. ವೀಣಾ ವಿಕ್ರಮ ಸಿದ್ದಾರೆಡ್ಡಿ ಅವರು ಲೋಕಾರ್ಪಣೆ ಮಾಡಿದರು. ಯುವ ಮುಖಂಡರಾದ ರುದ್ರಯ್ಯ ಹಿರೇಮಠ ಕೊಡಲಹಂಗರಗಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕು: ಮಹಾದೇವಿ ನರೋಣಿ ಪ್ರರ್ಥಿಸಿದರು, ಎನ್.ಎಸ್.ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.  ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.  ಸಮಾರಂಭದಲ್ಲಿ ಡಾ: ಎಸ್.ಎಸ್.ಹಿರೇಮಠ, ಭೀಮಾಶಂಕರ ಚಕ್ಕಿ, ಬಿ.ಎಂ.ರಾವೂರ, ಶಿವಶರಣಪ್ಪ ಚಿದ್ರಿ, ವಿಶ್ವನಾಥ ಪಾಟೀಲ ಗೌನಳ್ಳಿ ಸಿದ್ರಾಮಯ್ಯ ಪುರಾಣಿಕ, ಸಂತೋಷ ಆಡೆ, ಸಂಗಯ್ಯ ಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago