ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಎಸ್.ಬಿ.ಪಾಟೀಲ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಗುಲ್ಬರ್ಗ ದಾಲ್‌ಮಿಲ್ ಅಸೋಸಿಯೇಷನ್ ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ತೊಗರಿ ಬೇಳೆ ಕಳುಹಿಸುವ ಸಂಬಂಧ ಗುಲ್ಬರ್ಗ ದಾಲ್‌ಮಿಲ್ ಸೋಶಿಯೇಷನ್ ಅಧ್ಯಕ್ಷ ಶರಣಪ್ಪ ನಿಗ್ಗುಡಗಿ ಮಾತನಾಡಿದರು.
ಪ್ರವಾಹದಿಂದ ಸಂತ್ರಸ್ತರಾದವರಿಗೆ ಗುಲ್ಬರ್ಗ ದಾಲ್‌ಮಿಲ್ ಸಂಸ್ಥೆ 100 ಕ್ವಿಂಟಲ್ ತೊಗರಿ ಬೇಳೆ ನೀಡಿದೆ ಈಗಾಗಲೇ ಈ ತೊಗರಿ ಬೇಳೆ ಸಂಗ್ರಹಿಸಿದ್ದು, ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಅವರು ಯಾವ ಜಿಲ್ಲೆಗೆ ಕಳುಹಿಸಬೇಕು ಎಂದು ಸೂಚಿಸುತ್ತಾರೋ ಅಲ್ಲಿಗೆ ಕಳುಹಿಸಲಾಗುವುದು ಎಂದು ನಿಗ್ಗುಡಗಿ ತಿಳಿಸಿದ್ದಾರೆ.
ಸಂಘದ ಕಾರ್ಯದರ್ಶಿ ಶರಣಬಸಪ್ಪ ಮಚೆಟ್ಟಿ, ಉಪಾಧ್ಯಕ್ಷರಾದ ಚಂದ್ರಶೇಖರ್ ಕೋಬಾಳ, ಚಂದ್ರಶೇಖರ್ ತಳ್ಳಳ್ಳಿ, ಜಂಟಿ ಕಾರ್ಯದರ್ಶಿ ನಾಗಣ್ಣ ಕಲಶೆಟ್ಟಿ, ಖಜಾಂಚಿ ಹಣಮಂತರಾಯ ತೋಟ್ನಳ್ಳಿ, ಸದಸ್ಯರಾದ ಲಿಂಗಬಸಪ್ಪ ರೈನದ್, ಶಿವರಾಜ್ ಪಾಟೀಲ್, ಶಿವಶರಣಪ್ಪ ಹೂಗಾರ, ನದಿಸಿನ್ನೂರ, ಅಮೃತ ಮದುಗುಣಕಿ, ನಿಜಾಮುದ್ದಿಣ್ ತೇಲಿ ಮತ್ತಿತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…