ಬಿಸಿ ಬಿಸಿ ಸುದ್ದಿ

ಶಹಾಬಾದ; ಪೂರ್ವ ಭಾವಿ ಆಯವ್ಯಯ ಸಭೆ | ಸಾರ್ವಜನಿಕರಿಂದ ದೂರಿನ ಸುರಿಮಳೆ

ಕಲಬುರಗಿ: ಶಹಾಬಾದ ನಗರದ ನಗರಸಭೆಯ ಸಭಾಂಗಣದಲ್ಲಿ ಬುಧವಾರದಂದು 2023-24ನೇ ಸಾಲಿನ ಸಾರ್ವಜನಿಕ ಬಜೆಟ್ ಪೂರ್ವಭಾವಿ ಸಭೆಯನ್ನು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ ಕೋರೆ ಮಾತನಾಡಿ ನಗರದಲ್ಲಿ ಸಾರ್ವಜನಿಕರ ಶೌಚಾಲಯಗಳ ಕೊರತೆ ಇದೆ. ಮಹಿಳೆಯರಿಗೆ, ವೃದ್ಧರಿಗೆ, ಸಕ್ಕರೆ ಕಾಯಿಲೆ ಇದ್ದವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಶೌಚಾಲಯ, ಮೂತ್ರಾಲಯ ನಿರ್ಮಿಸಿ ಕೊಡಬೇಕು ಎಂದರು.

ಗೋವಾ ಬಾಬು ಮಾತನಾಡಿ, ನಗರದಲ್ಲಿ ಉದ್ಯಾನವನಗಳ ಜಾಗ ಅತಿಕ್ರಮಣ ಮಾಡಲಾಗುತ್ತಿದೆ.ತಕ್ಷಣವೇ ಅಭಿವೃದ್ಧಿ ಪಡಿಸಬೇಕು ಎಂದರು. ನಗರದ ರಸ್ತೆಗಳನ್ನ ಒತ್ತುವರಿ ಮಾಡಿ, ಚರಂಡಿಗೆ ಮಳೆಯ ನೀರು ಹರಿದು ಹೋಗದ ಹಾಗೆ ಪಾದಚಾರಿಗಳ(ಪುಟ್ ಪಾತ್) ದಾರಿ ಮಾಡಿದ್ದಾರೆ ಎಂದು ರಾಕೇಶ ಪವಾರ ಆಕ್ರೋಶ ವ್ಯಕ್ತ ಪಡಿಸಿದರು.

ಎಲ್ಲಾ ಕಡೆ ಹೈಮಾಸ್ಟ ಕಂಬಗಳು ಹಾಕಲಾಗಿದೆ ಆದರೆ ಹಳೇ ಶಹಾಬಾದನ ಡಾ. ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ ಮಾತ್ರ ಹಾಕದೆ ಇರುವದು ಹಾಸ್ಯಾಸ್ಪದವಾಗಿದೆ ಎಂದು ಸ್ನೇಹಲ್ ಜಾಯಿ ದೂರಿದರು. ನಗರ ಸಭೆಗೆ ಆದಾಯ ಬರುವಂತಹ ತೈಬಜಾರ ಹರಾಜನ್ನು ಕೈ ಬಿಟ್ಟಿದ್ದು ಯಾಕೆ ಎಂದು ರಾಮು ಕುಸಾಳೆ ಪ್ರಶ್ನೆ ಮಾಡಿದರು. ಹಲವಾರು ಸಮಾಜದ ಮುಖಂಡರು ತಮ್ಮ ತಮ್ಮ ಸಮಾಜಕ್ಕೆ ಸ್ಮಶಾನ ಭೂಮಿಗಾಗಿ ಮತ್ತು ರಸ್ತೆಗಾಗಿ ಬೇಡಿಕೆ ಇಟ್ಟರು. ಅಂಗವಿಕಲರ ಬದುಕಿಗಾಗಿ ಅವರಿಗೆ ಪ್ರತ್ಯೇಕವಾಗಿ ಹೊಲಿಗೆ ಯಂತ್ರ, ಡಬ್ಬಾ ಅಂಗಡಿಗಳು ಮತ್ತು ತ್ರಿಚಕ್ರ ವಾಹನಗಳಿಗಾಗಿ ಬಜೆಟ್‍ನಲ್ಲಿ ಮೀಸಲಿಡಬೇಕು ಎಂದು ಮಲ್ಲೇಶಿ ಭಜಂತ್ರಿ ಪ್ರಸ್ತಾಪಿಸಿದರು.

ನಾಯಿಗಳ ಕಡಿತ, ಹಂದಿಗಳ ಹಾವಳಿಯಿಂದ ನಗರದಲ್ಲಿ ಹಲವಾರು ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಇಲ್ಲಿಯವರೆಗೂ ನಾಯಿಗಳನ್ನಾಗಲಿ ಅಥವಾ ಹಂದಿಗಳನ್ನು ಹಿಡಿದು ನಗರದಿಂದ ದೂರ ಕಳಿಸುವ ಕೆಲಸ ನಗರ ಸಭೆ ಮಾಡಿಲ್ಲ ಎಂದು ಭೀಮಾಶಂಕರ ಕಾಂಬಳೆ ಕಳವಳ ವ್ಯಕ್ತಪಡಿಸಿದರು.

ಎಮಡಿ.ಬಾಕ್ರೋದ್ದಿನ, ಕಿರಣ ಕೋರೆ, ನಾಗರಾಜ ಮುದ್ನಾಳ, ನಾಗೇಂದ್ರ ನಾಟೇಕಾರ, ಮಲ್ಕಣ್ಣ ಮುದ್ದಾ, ಶರಣ ಗೌಡ ಪಾಟೀಲ, ರಾಜೇಶ ಯನಗುಂಟಿ, ನಗರ ಸಭೆಯ ಸದಸ್ಯರಾದ ರವಿ ರಾಠೋಡ, ಸಾಬೇರಾ ಬೇಗಂ, ಪಾರ್ವತಿ ಪವಾರ, ನಿಂಗಣ್ಣ ಪೂಜಾರಿ, ರಹೀಮ ಸಾಹೇಬ ಉಪಸ್ಥಿತಿರಿದ್ದರು.

ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ, ಎಇಇ ಶರಣು ಪೂಜಾರ ಇವರು ಸಲಹೆ ಸೂಚನೆಗಳನ್ನು ಆಲಿಸಿದರು.ನಂತರ ನಿಮೆಮೆಲ್ಲರ ಸಲಹೆ ಸೂಚನೆಗಳನ್ನು ಸಂಗ್ರಹಿಸಿ ಆದಷ್ಟು ಬೇಗನೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೆವೆ ಎಂದು ತಿಳಿಸಿದರು.

ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ ಸ್ವಾಗತಿಸಿದರು, ನಾರಾಯಣ ರೆಡ್ಡಿ ಪೂರ್ವ ಭಾವಿ ಬಜೆಟ್ ಮಂಡಿಸಿದರು, ಸುನೀಲಕುಮಾರ ವೀರಶೆಟ್ಟಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago