ಬಿಸಿ ಬಿಸಿ ಸುದ್ದಿ

ಶಾಸಕನಾಗಿ ಐದು ವರ್ಷದಲ್ಲಿ 95 ಸಾವಿರ ಎಕರೆಗೆ ನೀರು ಒದಗಿಸಿರುವೆ; ರಾಜುಗೌಡ

ಸುರಪುರ: 2021-22ನೇ ಸಾಲಿನ ರಾಜ್ಯ ಸರಕಾರದ ಅನುದಾನದಲ್ಲಿ 210 ಕೋಟಿ ರೂ ವೆಚ್ಚದಲ್ಲಿ ಕಂಪಾಪುರ ಬಳಿ ಇರುವ ಕೃಷ್ಣಾ ನದಿಯ ಮೂಲದಿಂದ ಸುರಪುರ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ 24*7 ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಗುಡಿಹಾಳ ಗ್ರಾಮದ ಬಳಿ ನಿರ್ಮಿಸಿರುವ ಮೊರಾರ್ಜಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಏತ ನೀರಾವರಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಕಾರ್ಯಕ್ರಮದ ಅಂಗವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಸುದ್ದಿಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ,ಇದೇ 18ನೇ ತಾರೀಖು ಶನಿವಾರದಂದು ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ ಸೇರಿದಂತೆ ವಿವಿಧ ಏತ ನೀರಾವರಿ ಕಾಮಗಾರಿಗಳಿ ಅಡಿಗಲ್ಲು ಸಮಾರಂಭ ನಡೆಯಲಿವೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹನಾಯಕ ತಿಳಿಸಿದರು. ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಕುಡಿಯುವ ನೀರು ಯೋಜನೆಯನ್ನು ಉದ್ಘಾಟಿಸುವರು ಹಾಗೂ ಒಟ್ಟು 127ಕೋ.ರೂ ಅಂದಾಜು ವೆಚ್ಚದ ದೇವತ್ಕಲ್, ಕೆ.ತಳ್ಳಳ್ಳಿ, ಏದಲಬಾವಿ ಹಾಗೂ ಬೈರಿಮರಡಿ ಏತ ನೀರಾವರಿ ಕಾಮಗಾರಿಗಳನ್ನು ನೀರಾವರಿ ಸಚಿವ ಗೋವಿಂದ ಕಾರಜೋಳ ಅಡಿಗಲ್ಲು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ನೀರಾವರಿಯಿಂದ ವಂಚಿತಗೊಂಡಿರುವ ಕಾಲುವೆ ಕೊನೆ ಭಾಗದ ವಿವಿಧ ಗ್ರಾಮಗಳ 56,156ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕೆಬಿಜೆಎನ್‍ಎಲ್ ಅನುದಾನದಲ್ಲಿ 127.07ಕೋ ರೂ ವೆಚ್ಚದಲ್ಲಿ ದೇವತ್ಕಲ್, ಕೆ.ತಳ್ಳಳ್ಳಿ ಹಾಗೂ ಏದಲಬಾವಿ ಏತ ನೀರಾವರಿ ಯೋಜನೆಗಳ ಅಡಿಗಲ್ಲು ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನೆರವೇರಿಸಲಾಗುವುದು ಎಂದು ಶಾಸಕ ನರಸಿಂಹನಾಯಕ ತಿಳಿಸಿದರು.
91ಕೋಟಿ ರೂ ವೆಚ್ಚದಲ್ಲಿ ದೇವತ್ಕಲ್ ಏತ ನೀರಾವರಿ ಯೋಜನೆಯು ದೇವತ್ಕಲ್, ಹಾಲಬಾವಿ, ಗೋಡಿಹಾಳ, ಚನ್ನಪಟ್ಟಣ, ಶಾಂತಪುರ, ತಿಂಥಣಿ, ಅರಳಹಳ್ಳಿ, ಕಂಪಾಪುರ, ದೇವಾಪುರ, ಕೋನಾಳ, ಹಂದ್ರಾಳ ಹಾಗೂ ನಾಗರಾಳ ಗ್ರಾಮಗಳ 24,963 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಲಿದೆ.

11ಕೋ.ರೂ ವೆಚ್ಚದಲ್ಲಿ ಕೆ.ತಳ್ಳಳ್ಳಿ ಏತ ನೀರಾವರಿ ಯೋಜನೆಯು ಚಿಕ್ಕನಳ್ಳಿ, ಕೆ.ತಳ್ಳಳ್ಳಿ, ಗೋನಾಲ.ಎಸ್‍ಡಿ, ಬಾಚಿಮಟ್ಟಿ ಹಾಗೂ ಮಂಗಿಹಾಳ ಗ್ರಾಮಗಳ 8,371 ಎಕರೆ ಜಮೀನಿಗೆ ನೀರಾವರಿ ಕಲ್ಪಿಸಲಿದೆ.

13.60ಕೋರೂ ವೆಚ್ಚದ ಏದಲಬಾವಿ ನೀರಾವರಿ ಯೋಜನೆಯು ಏದಲಬಾವಿ, ಏದಲಬಾವಿ ತಾಂಡಾ ಹಾಗೂ ಹಣಮನಾಳ ಗ್ರಾಮಗಳ 2,377 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ ಹಾಗೂ 12ಕೋರೂ ವೆಚ್ಚದಲ್ಲಿ ಬೈರಿಮರಡಿ ಕೆರೆಯ ಮುಖಾಂತರ ನೀರಾವರಿ ಯೋಜನೆಯು ರತ್ತಾಳ, ದೇವಿಕೇರಾ, ಅರಕೇರಾ(ಕೆ), ಬಿಜಾಸಪುರ, ವಣಕಿಹಾಳ, ಶಖಾಪುರ ಎಸ್‍ಎಚ್, ಹಾಲಗೇರಾ ಹಾಗೂ ಹೇಮನೂರು ಗ್ರಾಮಗಳ 20,644 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಲಿದೆ ಎಂದು ತಿಳಿಸಿದರು.

ಮೂರನೇ ಬಾರಿ ಶಾಸಕರಾದ ನಂತರ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಕ್ಷೇತ್ರದ 95ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಬೂದಿಹಾಳ-ಪೀರಾಪುರ ನೀರಾವರಿ ಯೋಜನೆ ಮುಕ್ತಾಯದ ಹಂತದಲ್ಲಿ ಹೊಸ ತಂತ್ರಜ್ಞಾನ ಆಧಾರಿತ ಈ ಯೋಜನೆಯಲ್ಲಿ 25-50ಎಕರೆಗೆ ಯೂನಿಟ್ ಮಾಡಲಾಗಿದೆ ಎಂದು ತಿಳಿಸಿದ ಅವರು ಸುರಪುರ ನಗರಕ್ಕೆ ನೀರು ಪೂರೈಸುವ ನೂತನ ಶಾಶ್ವತ ಕುಡಿಯುವ ನೀರು ಯೋಜನೆ ಕೂಡಾ ಹೊಸ ತಂತ್ರಜ್ಞಾನ ಆಧಾರಿತವಾಗಿದ್ದು ಈ ಯೋಜನೆ ಕಾರ್ಯಗತಗೊಳ್ಳುವದರಿಂದ ಬಹಳ ವರ್ಷಗಳಿಂದ ಇದ್ದ ಸುರಪುರ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಕಂಪ್ಯೂಟರ್ ಸ್ಕ್ವಾಡಾ ಗೇಟ್ ಆಧಾರಿತ ನೀರು ಪೂರೈಕೆ ಹಾಗೂ ನೂತನ ತಂತ್ರಜ್ಞಾನ ಆಧಾರಿತವಾಗಿರುವ ನೀರು ಶುದ್ಧೀಕರಣ ಕೇಂದ್ರ ಹೊಂದಿರುವ ಈ ಯೋಜನೆಯನ್ನು ಅತಿ ಕಡಿಮೆ ಸಮಯದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು, ಈಗಾಗಲೇ ನಗರದ ಎಲ್ಲಾ ವಾರ್ಡುಗಳಲ್ಲಿ ನೀರು ಪೂರೈಸುವ ಟ್ರಯಲ್ ಕೆಲಸ ಪ್ರಗತಿಯಲ್ಲಿದ್ದು ಮನೆಗಳಿಗೆ ಸಾಕಷ್ಟು ಪ್ರೆಶರ್‍ನಲ್ಲಿ ನೀರು ಪೂರೈಕೆಗೊಳ್ಳುತ್ತಿದೆ ಸಾರ್ವಜನಿಕರು ಕೂಡಾ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ನಗರಕ್ಕೆ ಹತ್ತಿರದಲ್ಲಿರುವ ಗುಡಿಹಾಳ ಗ್ರಾಮದ ಬಳಿ 20.14ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಎಸ್‍ಟಿ) ನೂತನ ಕಟ್ಟಡ ಉದ್ಘಾಟಿಸಲಾಗುವುದು ಎಂದು ತಿಳಿಸಿದ ಅವರು ಇದೇ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ 25ಲಕ್ಷ ರೂ ವೆಚ್ಚದಲ್ಲಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣ, 80ಲಕ್ಷ ರೂ ವೆಚ್ಚದಲ್ಲಿ ಮೇದಾಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ಕೋಣೆಗಳ ನಿರ್ಮಾಣ ಹಾಗೂ 20ಕೋಟಿ ರೂ ವೆಚ್ಚದಲ್ಲಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಅಡಿ ತಿಂಥಣಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳ ಅಡಿಗಲ್ಲು ನೆರವೇರಲಿದೆ ಎಂದು ಹೇಳಿದರು.

ಮುಖಂಡರಾದ ರಾಜಾ ಹನುಮಪ್ಪ ನಾಯಕ, ಡಾ.ಸುರೇಶ ಸಜ್ಜನ್, ಬಲಭೀಮನಾಯಕ ಬೈರಿಮಡ್ಡಿ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago