ಬಿಸಿ ಬಿಸಿ ಸುದ್ದಿ

‘ಕಲೆ,ಸಾಹಿತ್ಯ,ಸಾಂಸ್ಕøತಿಕ ಚಟುವಟಿಕೆಗಳು ನಿರಂತರವಾಗಿ ಜರುಗಲಿ’

ಕಲಬುರಗಿ: ನಾಡು, ದೇಶದ ಭವ್ಯ ಪರಂಪರೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಮುಟ್ಟಿಸಲು ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳು ನಿರಂತರವಾಗಿ ಜರುಗಬೇಕು. ಇದಕ್ಕೆ ಪ್ರೋತ್ಸಾಹ ನೀಡುವುದು ಅಗತ್ಯ. ನಮ್ಮ ಭಾಗದ ಯುವಕರು ಕೀಳರಿಮೆ, ಮೈಗಳ್ಳತನದಿಂದ ಹೊರಬಂದು ಉನ್ನತವಾದ ಸಾಧನೆಯನ್ನು ಮಾಡಬೇಕು. ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹೇಳಿದರು.

ನಗರದ ಕನ್ನಡ ಸುವರ್ಣ ಭವನದಲ್ಲಿ ಭಾನುವಾರ ಜರುಗಿದ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಲಾ ಸಂಘದ ದ್ವಿತೀಯ ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ, ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಹಾಪುರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಡಾ.ಶರಣು ಬಿ.ಗದ್ದುಗೆ ಮಾತನಾಡಿ, ಪ್ರತಿಯೊಬ್ಬರಲ್ಲಿ ನಾಡು-ನುಡಿಯ ಬಗ್ಗೆ ಅಪಾರವಾದ ಗೌರವವಿರಬೇಕು. ಕನ್ನಡ ಸಂಸ್ಕøತಿ, ಪರಂಪರೆ ಉಳಿಸುವ ಸ್ವಭಿಮಾನಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕಾಗಿದೆ. ಮಹಿಳೆಯರಿಗೆ ಗೌರವದ ಸ್ಥಾನ ನೀಡಬೇಕು. ಕಲಾವಿದರ ಅಭಿವೃದ್ಧಿಗಾಗಿ ‘ಕಲಾವಿದರ ಅಭಿವೃದ್ಧಿ ನಿಗಮ’ ಸ್ಥಾಪಿಸಿ, ಕಲಾವಿದರಿಗೆ ಸೂಕ್ತ ಆರ್ಥಿಕ ಭದ್ರತೆಯನ್ನು ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ವಿಶೇಷ ಉಪನ್ಯಾಸ ನೀಡಿದ ಪಿಡಿಎ ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕಿ ಡಾ.ಗೀತಾ ಪಾಟೀಲ, ಮಹಿಳೆ ಎಂದರೆ ಶಾಂತಿ, ಸಹನೆ, ತ್ಯಾಗ, ಪರಿಶ್ರಮದ ಸಂಕೇತವಾಗಿದ್ದಾಳೆ. ಮಹಿಳೆಯ ಬಗ್ಗೆ ಅನುಕಂಪ ತೋರಿದರೆ ಸಾಲದು. ಜೊತೆಗೆ ಅವಕಾಶಗಳನ್ನು ನೀಡಬೇಕು. ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ದ್ವಿತೀಯ ದರ್ಜೆ ನಾಗರಿಕ ಎಂದು ಪರಿಗಣಿಸುವುದು ಸಲ್ಲದು. ಮಹಿಳೆಯರು ಮೌಢ್ಯತೆಗಳಿಂದ ಹೊರಬನ್ನಿ. ಸಮಾಜ ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಬೇಕು. ಮಹಿಳೆಯರ ರಕ್ಷಣೆಗ ಕಠಿಣ ಕಾಯ್ದೆ-ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಸಾಕಷ್ಟು ದೃಷ್ಟಾಂತಗಳೊಂದಿಗೆ ವಿವರಿಸಿದರು.

ಡಾ.ಸುನೀಲಕುಮಾರ ಎಚ್.ವಂಟಿ, ಎಚ್.ಬಿ.ಪಾಟೀಲ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿವರಾಜ ಅಂಡಗಿ, ಸುರೇಶ ಬಡಿಗೇರ, ಗುಂಡಣ್ಣ ಡಿಗ್ಗಿ, ರೇವಣಸಿದ್ದಪ್ಪ ದಂಡಿನ್, ನಂದಕುಮಾರ, ಶಾಮಸುಂದರ ಕುಲಕರ್ಣಿ, ಪ್ರೊ.ರಮೇಶ ಯಾಳಗಿ, ಯಲ್ಲಾಲಿಂಗ ದಂಡಿನ್, ಅಭಯ ಪ್ರಕಾಶ, ಬಸವರಾಜ ಎಸ್.ಪುರಾಣೆ, ಶಿವಯೋಗಪ್ಪ ಬಿರಾದಾರ, ವೆಂಕಟೇಶ ರಂಗಂಪೇಟ್ ಸೇರಿದಂತೆ ಮತ್ತಿತರರಿದ್ದರು.

ವಿವಿಧ ಕ್ಷೇತ್ರದ ಸಾಧಕ ಪ್ರಶಸ್ತಿ ಮತ್ತು ಸನ್ಮಾನ ಪುರಷ್ಕøತರು : ರಾಜಕುಮಾರಿ ಸುಕೃತರಾಜ್, ರಾಜಶೇಖರ ಎಸ್.ಮುಸ್ತಾರಿ, ರವಿ ಎ.ಸಿಂಗೆ, ಬಾಲಾಜಿರಾವ ವಿ.ಪಾಟೀಲ, ಸಂತೋಷ ಜವಳಿ, ಮಹಾದೇವಯ್ಯ ವಿ.ಮಠಪತಿ, ಯಶೋಧಾ ಸಿ.ಕಟ್ಟಿಮನಿ, ಡಾ.ಢಾಕಪ್ಪ ರಾಠೋಡ, ಡಾ.ಪ್ರತ್ವಿ ಎನ್., ನಂದಪ್ಪ ನಾಯಕ್, ಸಂತೋಷ ನಗನೂರ, ಜಯಶ್ರೀ ಎಸ್.ವಂಟಿ, ಸುಜಾತಾ ವಿ.ರಂಗಂಪೇಟ್, ಜಯಸುಧಾ ಆರ್.ಗೌನಳ್ಳಿ, ಶಾಂತಾಬಾಯಿ ಎಂ.ಅಗಸ್ಥ್ಯತೀರ್ಥ, ವಾಣಿ ಎಂ.ಅಗ್ನಿಹೋತ್ರಿ, ಪ್ರೀಯಾ ಆರ್.ಹಿಪ್ಪರಗಿ, ಆಕಾಂಕ್ಷಾ ಪಿ.ಪುರಾಣಿಕ, ಚಂದ್ರಕಲಾ ಜಮಾದಾರ, ಸಹನಾ, ಸ್ಪಂದನಾ, ರಾಮ, ಶರಣು ಯಾಳಗಿ, ಪದ್ಮಾವತಿ, ಸುಧಾರಾಣಿ, ಸಾಕ್ಷಿ, ದೇವಿಂದ್ರ ಧೋತ್ರೆ, ಧನಸಿಂಗ ಬಿ.ಜಾಧವ, ರಾಜಶೇಖರ ಹೂಕ್ರಾಣಿ, ಬಸವರಾಜ ಎನ್.ಸೈದಾಪುರ, ಗಣಪತಿ ಜಿ.ದೇವಕತ್ರೆ, ಜಗದೀಶ್ವರಿ ದೊಡ್ಮನಿ, ಉದಯ ಸಿ.ಪಡಸಾವಳಿ ಅವರಿಗೆ ಪ್ರಶಸ್ತಿ ಮತ್ತು ಸನ್ಮಾನಿಸಿ ಗೌರವಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago