ಕಲಬುರಗಿ/ ಜೇವರ್ಗಿ: ಜೇವರ್ಗಿ ತಾಲೂಕಿನ ಕೊಳಕೂರ್ ಗ್ರಾಮದಲ್ಲಿ ಸುಮಾರು 16 ಕೋಟಿ 65 ಲP್ಷÀ ವೆಚ್ಚದಲ್ಲಿ ಶ್ರೀಮತಿ ಇಂದಿರಾಗಾಂದಿ ವಸತಿ ಶಾಲೆ (ಪರಿಶಿಷ್ಟ ಜಾತಿ) ಕಟ್ಟಡ ಕಾಮಗಾರಿ ಹಾಗೂ ವಿವಿಧ ಕಾಮಗಾರಿಗಳಿಗೆ ಜೇವರ್ಗಿ ಶಾಸಕರು ಹಾಗೂ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಜೇವರ್ಗಿಯಲ್ಲಿ ಶೈಕ್ಷಣಿಕವಾಗಿ ಮೂಲ ಸೌಕರ್ಯ ಹುಟ್ಟು ಹಾಕುವ ಕೆಲಸಕ್ಕೆ ತಾವು ಶಾಸಕರಾಗಿ ಹೆಚ್ಚಿನ ವೇಗ ನೀಡಿದ್ದಾಗಿ ಹೇಳಿದರಲ್ಲದೆ ಬರುವ ದಿನಗಳಲ್ಲಿ ಇಡೀ ಜೇವರ್ಗಿ ಮತಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕವಾದಂತಹ ಉತ್ತಮ ಪರಿಸರ ಹುಟ್ಟುಹಾಕುವ ಕನಸು ತಮ್ಮದಾಗಿದೆ, ಜನರ ಸಹಕಾರ ಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಅಜಯ್ ಸಿಂಗ್ ಕೊಳಕೂದ ಗ್ರಾಮದಲ್ಲಿರುವ ಇಂದಿರಾಗಾಂದಿ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲಿಟ್ಟರು. ಕೋಳಕೂರ ಗ್ರಾಮದಲ್ಲಿ 2 ಸರ್ಕಾರಿ ಶಾಲಾ ಕೊಠಡಿ, ಹರಿಜನವಾಡದಲ್ಲಿ ಇರುವ ಕಿರಿಯ ಪಾರಕ ಶಾಲೆಯಲ್ಲಿ 3 ಶಾಲಾ ಕೊಠಡಿ, ಬಿಸಿ ಊಟದ ಕೊರಡಿ ಮತ್ತು ಶೌಚಾಲಯ ಹಾಗೂ ಕೋಳಕೂರು ಸಿದ್ದಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಯ 20 ಲಕ್ಷ ರು ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಭಂದಪಟ್ಟ ಅಧಿಕರಿಗಳು, ಶಾಲಾ ಪ್ರಾಂಶುಪಾಲರು, ಪP್ಷÀದ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ, ನೀಲಕಂಠ ಅವುಂಟಿ, ಮೊಹಮ್ಮದ್ ನೂರಿ, ಚಂದ್ರಶೇಖರ ಹರಾನಾಳ್, ರವಿ ಕೊಳಕೂರ್, ಬಸಣ್ಣ ಸರ್ಕಾರ, ರಾಜು ಕೂಡಿ, ಸಿದ್ದು ಹೊನ್ನಕೇರಿ, ಮಲ್ಲಿಕಾರ್ಜುನ ಹೊನ್ನಕೇರಿ, ಶರಣು ಖಾನಾದಲ್, ಬಸವರಾಜ್ ಕೊನಿನ್, ಈರಣ್ಣ ಯಾದವ್, ಸಿದ್ರಾಮೇಶ್ವ ಮಡಿವಾಳ,ರಿಯಾಜ್ ಪಟೇಲ್ ಜಾವಿದ್ ಪಟೇಲ್, ವಿನೋದ್ ಜಾದವ್ ಶಿP್ಷÀಕ ವೃಂದದವರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…