ಬಿಸಿ ಬಿಸಿ ಸುದ್ದಿ

ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ

ಕರ್ನಾಟಕ ಎದ್ದೇಳುವುದಕ್ಕೂ ಮೊದಲು ಕಾಂಗ್ರೆಸ್ ಎದ್ದೇಳಬೇಕು. ಕಾಂಗ್ರೆಸ್ ನ ಒಳಗಿರುವ ಆರ್ ಎಸ್ ಎಸ್ ನವರನ್ನು ಒದ್ದೋಡಿಸಬೇಕು. ಇಲ್ಲದಿದ್ದರೆ ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ.

ಚುನಾವಣೆಯ ನಿಮಿತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರವರು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗುವುದಿತ್ತು. ಇದರ ಉಸ್ತುವಾರಿಯನ್ನು ಈ ಹಿಂದೆ ಬಿಜೆಪಿ ಸಚಿವರ ಪಿಎ ಆಗಿದ್ದುಕೊಂಡೇ ಕಾಂಗ್ರೆಸ್ ನಿಂದ ಎಂಎಲ್ ಸಿ ಆಗಿದ್ದವರು ವಹಿಸಿದ್ದರು‌.

ಕೆಲ ಪತ್ರಿಕೆಗಳು ಮತ್ತು ಟಿವಿ ಸಂಸ್ಥೆಗಳ ಮುಖ್ಯಸ್ಥರನ್ನು ಅವರ ಕಚೇರಿಯಲ್ಲಿ ಸುರ್ಜೇವಾಲ ಭೇಟಿಯಾಗಿದ್ದರೆ ಕೋಮುವಾದಿ ಪತ್ರಕರ್ತರನ್ನು ಅವರ ನಿವಾಸದಲ್ಲಿ ಉಪಹಾರದೊಂದಿಗೆ ಭೇಟಿ ಮಾಡಿಸಲಾಯಿತು. ದಿನಬೆಳಗಾದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಅಶ್ಲೀಲ ಪದಗಳಲ್ಲಿ ಅವಹೇಳನ ಮಾಡುವ ಕೋಮುವಾದಿ ಸಂಪಾದಕರಿಗೆ ಕಾಂಗ್ರೆಸ್ ನೀಡಿದ ಪ್ರಾಮುಖ್ಯತೆ ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ.

ಎಲ್ಲಾ ಪತ್ರಿಕಾ ಸಂಪಾದಕರನ್ನು ಅವರವರ ಕಚೇರಿಯಲ್ಲೇ ಭೇಟಿಯಾದಂತೆ ಕೋಮುವಾದಿ ಸಂಪಾದಕರನ್ನೂ ಅವರ ಕಚೇರಿಯಲ್ಲೇ ಭೇಟಿಯಾಗಿಸಬಹುದಿತ್ತು. ಆದರೆ ಕೋಮುವಾದಿ ಸಂಪಾದಕರ ಮನೆಗೇ ಸುರ್ಜೇವಾಲರನ್ನು ಕರೆದುಕೊಂಡು ಹೋಗಿ ಉಪಹಾರದೊಂದಿಗೆ ಮಾತುಕತೆ ನಡೆಸಿರುವುದು, ಆ ಕೋಮುವಾದಿ ಪತ್ರಕರ್ತರ ನಿಲುವುಗಳನ್ನು ಕಾಂಗ್ರೆಸ್ ನ ಅಮಾಯಕ ಕಾರ್ಯಕರ್ತರು ನಂಬುವ ವಾತಾವರಣವನ್ನು ಸೃಷ್ಟಿಸುವುದಿಲ್ಲವೇ ? ನಮ್ಮ ರಾಷ್ಟ್ರೀಯ ನಾಯಕರೇ ಅವರ ಮನೆಗೆ ತೆರಳಿ ಉಪಹಾರ ಸ್ವೀಕರಿಸುತ್ತಾರೆ ಎಂದರೆ ಅಂತಹ ಕೋಮುವಾದಿ ಸಂಪಾದಕರ ಬಗ್ಗೆ “ತಪ್ಪಾದ ವಿಶ್ವಾಸಾರ್ಹತೆ” ಹುಟ್ಟಿಕೊಳ್ಳುವುದಿಲ್ಲವೇ ?

ಮೊದಲು ಕಾಂಗ್ರೆಸ್ ನೊಳಗೆ “ಎದ್ದೇಳು ಕಾಂಗ್ರೆಸ್” ಅಭಿಯಾನ ನಡೆಯಲಿ. ಆ ಬಳಿಕ ಜನಪರರು “ಎದ್ದೇಳು ಕರ್ನಾಟಕ” ಅಭಿಯಾನದಲ್ಲಿ ತನ್ನಿಂತಾನೇ ಭಾಗಿಯಾಗುತ್ತಾರೆ.

– ನವೀನ್ ಸೂರಿಂಜೆ
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago