ಬಿಸಿ ಬಿಸಿ ಸುದ್ದಿ

ಇನ್ಮುಂದೆ ಉಪನೋಂದಣಿ ಕೆಲಸ ಕಾರ್ಯಗಳು ಜನಸ್ನೇಹಿ: ಕುಂಬಾರ

ಎರಡನೇ ಹಂತದಲ್ಲಿ ಮಂಡ್ಯ, ಬೆಳಗಾವಿ ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು. ಮನೆಯಲ್ಲಿಯೇ, ಡಿಟಿಪಿ ಕೇಂದ್ರಗಳಲ್ಲಿದ್ದುಕೊಂಡು ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಕಚೇರಿಗೆ ಬಂದು ಕಾಯುವ ಅವಶ್ಯಕತೆಯಿಲ್ಲ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಡಿಜಿಟಲ್‍ಕರಣ ಮಾಡಲಾಗುತ್ತಿದೆ. ಏಪ್ರಿಲ್ 1 ರಿಂದ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಜನ ಸ್ನೇಹಿ ಆಡಳಿತ ನೀಡಲು ಆದ್ಯತೆ ವಹಿಸಲಾಗಿದೆ. ಮೊಹ್ಮದ್ ಅಬ್ದುಲ್ ಹಸೀಬ್, ಕಲಬುರಗಿ ಉಪನೋಂದಣಾಧಿಕಾರಿ ಹಾಗೂ ವಿಭಾಗೀಯ ನೋಡಲ್ ಅಧಿಕಾರಿ.

ಕಲಬುರಗಿ: ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾವೇರಿ 2.0 ಹೊಸ ಸಾಫ್ಟವೇರ್ ಪರಿಚಯಿಸಿದ್ದು, ಇದರಿಂದ ಆಸ್ತಿ ನೋಂದಣಿ ಕಾಲಾವಕಾಶ ಇಳಿಸುತ್ತದೆ ಎಂದು ಚಿಂಚೋಳಿ ಉಪನೋಂದಣಾಧಿಕಾರಿ ವಿಠಲ್ ಕುಂಬಾರ ಹೇಳಿದರು.

ಇಲ್ಲಿನ ಗೋಲ್ಡ್ ಹಬ್ ಸಭಾಂಗಣದಲ್ಲಿ ಕ್ರೇಡೈ ಸಂಸ್ಥೆ ಆಯೋಜಿಸಿದ ಕಾವೇರಿ 2.0 ಸಾಫ್ಟವೇರ್ ತರಬೇತಿ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿತೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ಆಸ್ತಿ ನೋಂದಣಿ, ಮುಟೇಷನ್ ಹೀಗೆ ಎಲ್ಲ ನೋಂದಣಿಗಳು ಸುಲಲಿತವಾಗಿ ನಡೆಯಲಿವೆ. ಸರ್ವರ್ ಸಮಸ್ಯೆ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇದು ನೆರವಾಗಲಿದೆ ಎಂದು ಮಾಹಿತಿ ನೀಡಿದರು.

ಕ್ರೇಡೈ ಅಧ್ಯಕ್ಷ ಮಹ್ಮದ್ ನಜೀಬ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ಉಪ ನೋಂದಣಿಧಿಕಾರಿ ಬಿ. ಶ್ರೀಕಾಂತ, ಸತೀಶಕುಮಾರ, ಉತ್ತರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸಂಜೋಗ ರಾಠಿ, ಉಪಾಧ್ಯಕ್ಷ ಬಸವರಾಜ ಮಾಲಿಪಾಟೀಲ್, ಪೋಷಕ ಮಹ್ಮದ್ ರಫೀಯೋದ್ದಿನ್, ನಾಗಾರ್ಜುನ ಮೈಲಾಪುರ, ಎಂಡಿ ಶಫೀಕ್, ಕೃಷ್ಣಾಜೀ ಘನಾತೆ, ಇಫ್ತಿಖಾರ್ ಅಹ್ಮದ್, ಗಣೇಶ ತಾಪಡೀಯಾ, ಮಹಾದೇವ ಪಾಟೀಲ್, ಸಂಗಮೇಶ ಮಹಾಗಾಂವಕರ್, ವಿವೇಕಾನಂದ ಪವಾರ, ಅನತ್ ಮುಚಾಳೆ ಇದ್ದರು.

ಇಡೀ ರಾಜ್ಯದಲ್ಲಿ ಚಿಂಚೋಳಿಯಲ್ಲಿ ಪ್ರಥಮ ಬಾರಿಗೆ ಕಾವೇರಿ 2.0 ಹೊಸ ಸಾಫ್ಟವೇರ್ ಜಾರಿ ಮಾಡಲಾಗಿದ್ದು, ನಂತರ ಬೆಳಗಾವಿ, ರಾಮನಗರ ಜಾರಿ ಬಳಿಕ ಏಪ್ರಿಲ್ 1 ರಿಂದ ಕಲಬುರಗಿಯಲ್ಲಿ ಜಾರಿಯಾಗಲಿದೆ. ಮುಂದಿನ ಜೂನ್ ತಿಂಗಳವರೆಗೆ ರಾಜ್ಯ ವ್ಯಾಪಿ ಜಾರಿಯಾಗಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago