ಎರಡನೇ ಹಂತದಲ್ಲಿ ಮಂಡ್ಯ, ಬೆಳಗಾವಿ ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು. ಮನೆಯಲ್ಲಿಯೇ, ಡಿಟಿಪಿ ಕೇಂದ್ರಗಳಲ್ಲಿದ್ದುಕೊಂಡು ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಕಚೇರಿಗೆ ಬಂದು ಕಾಯುವ ಅವಶ್ಯಕತೆಯಿಲ್ಲ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಡಿಜಿಟಲ್‍ಕರಣ ಮಾಡಲಾಗುತ್ತಿದೆ. ಏಪ್ರಿಲ್ 1 ರಿಂದ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಜನ ಸ್ನೇಹಿ ಆಡಳಿತ ನೀಡಲು ಆದ್ಯತೆ ವಹಿಸಲಾಗಿದೆ. ಮೊಹ್ಮದ್ ಅಬ್ದುಲ್ ಹಸೀಬ್, ಕಲಬುರಗಿ ಉಪನೋಂದಣಾಧಿಕಾರಿ ಹಾಗೂ ವಿಭಾಗೀಯ ನೋಡಲ್ ಅಧಿಕಾರಿ.
ಕಲಬುರಗಿ: ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾವೇರಿ 2.0 ಹೊಸ ಸಾಫ್ಟವೇರ್ ಪರಿಚಯಿಸಿದ್ದು, ಇದರಿಂದ ಆಸ್ತಿ ನೋಂದಣಿ ಕಾಲಾವಕಾಶ ಇಳಿಸುತ್ತದೆ ಎಂದು ಚಿಂಚೋಳಿ ಉಪನೋಂದಣಾಧಿಕಾರಿ ವಿಠಲ್ ಕುಂಬಾರ ಹೇಳಿದರು.
ಇಲ್ಲಿನ ಗೋಲ್ಡ್ ಹಬ್ ಸಭಾಂಗಣದಲ್ಲಿ ಕ್ರೇಡೈ ಸಂಸ್ಥೆ ಆಯೋಜಿಸಿದ ಕಾವೇರಿ 2.0 ಸಾಫ್ಟವೇರ್ ತರಬೇತಿ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿತೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಆಸ್ತಿ ನೋಂದಣಿ, ಮುಟೇಷನ್ ಹೀಗೆ ಎಲ್ಲ ನೋಂದಣಿಗಳು ಸುಲಲಿತವಾಗಿ ನಡೆಯಲಿವೆ. ಸರ್ವರ್ ಸಮಸ್ಯೆ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇದು ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಕ್ರೇಡೈ ಅಧ್ಯಕ್ಷ ಮಹ್ಮದ್ ನಜೀಬ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ಉಪ ನೋಂದಣಿಧಿಕಾರಿ ಬಿ. ಶ್ರೀಕಾಂತ, ಸತೀಶಕುಮಾರ, ಉತ್ತರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸಂಜೋಗ ರಾಠಿ, ಉಪಾಧ್ಯಕ್ಷ ಬಸವರಾಜ ಮಾಲಿಪಾಟೀಲ್, ಪೋಷಕ ಮಹ್ಮದ್ ರಫೀಯೋದ್ದಿನ್, ನಾಗಾರ್ಜುನ ಮೈಲಾಪುರ, ಎಂಡಿ ಶಫೀಕ್, ಕೃಷ್ಣಾಜೀ ಘನಾತೆ, ಇಫ್ತಿಖಾರ್ ಅಹ್ಮದ್, ಗಣೇಶ ತಾಪಡೀಯಾ, ಮಹಾದೇವ ಪಾಟೀಲ್, ಸಂಗಮೇಶ ಮಹಾಗಾಂವಕರ್, ವಿವೇಕಾನಂದ ಪವಾರ, ಅನತ್ ಮುಚಾಳೆ ಇದ್ದರು.
ಇಡೀ ರಾಜ್ಯದಲ್ಲಿ ಚಿಂಚೋಳಿಯಲ್ಲಿ ಪ್ರಥಮ ಬಾರಿಗೆ ಕಾವೇರಿ 2.0 ಹೊಸ ಸಾಫ್ಟವೇರ್ ಜಾರಿ ಮಾಡಲಾಗಿದ್ದು, ನಂತರ ಬೆಳಗಾವಿ, ರಾಮನಗರ ಜಾರಿ ಬಳಿಕ ಏಪ್ರಿಲ್ 1 ರಿಂದ ಕಲಬುರಗಿಯಲ್ಲಿ ಜಾರಿಯಾಗಲಿದೆ. ಮುಂದಿನ ಜೂನ್ ತಿಂಗಳವರೆಗೆ ರಾಜ್ಯ ವ್ಯಾಪಿ ಜಾರಿಯಾಗಲಿದೆ.