ಕಾಡಿಗೆ ರೋಗವು ಕಬ್ಬಿನ ಗಿಡದ ಸುಳಿ ಭಾಗದ ಎಲೆಗಳ ಬೆಳವಣಿಗೆ ಆಗದಂತೆ ತಡೆಗಟ್ಟುವುದರಿಂದ ಎಲೆಗಳು ಒಣಗುವ ಸಾಧ್ಯತೆ ಹೆಚ್ಚು.ಸುಳಿಯಿಂದ ತೆಳ್ಳನೆಯ ಉದ್ದವಾದ ಪೊರೆಯಿಂದ ಮುಚ್ಚಿದ ಕಾಡಿಗೆ ಶಿಲೀಂದ್ರದ ರೋಗಾಣು ಗಿಡದ ಮೇಲ್ಭಾಗದ ಎಲೆ ಸುತ್ತಲು ಕಾಣುವುದರಿಂದ ಈ ರೋಗವನ್ನು ಗುರುತಿಸಬಹುದು.
ಈ ರೋಗವು ನಾಟಿಯಾಗಿ ಎರಡು ತಿಂಗಳಿನಿಂದ ಬೆಳೆ ಬೆಳವಣಿಗೆ ಹಂತದವರೆಗೂ ಕಂಡುಬರುವುದು.ರೋಗದ ಹತೋಟಿ ನಿರ್ಲಕ್ಷವಾದಲ್ಲಿ ಕಬ್ಬಿನಲ್ಲಿ ಸಕ್ಕರೆ ಉತ್ಪಾದನಾ ಅಂಶ ಬ್ರಿಕ್ಸ್ ಶುದ್ಧತೆ ಮೇಲೆ ಹಾಗೂ ಸರಾಸರಿಇಳುವರಿ ಕೂಡಕಡಿಮೆಯಾಗುವುದು. ಹೆಚ್ಚಿನ ಸಾರಜನಕ, ರಸಸಾರಯುಕ್ತಗೊಬ್ಬರ ಬಳಕೆ, ನೀರಿನಏರುಪೇರು, ಕ್ಷಾರೀಯ ಮಣ್ಣಿನರಸಸಾರರೋಗದತೀವ್ರತೆ ಮೇಲೆ ಪರಿಣಾಮ ಬೀಳುವುದೆಂದು ಕಲಬುರಗಿ ಕೆವಿಕೆಯ ಸಸ್ಯರೋಗ ತಜ್ಞರಾದ ಜಹೀರ್‍ಅಹಮ್ಮದ್‍ರವರು ತಿಳಿಸಿದ್ದಾರೆ. ಈ ರೋಗದ ಹತೋಟಿಗೆ ಕೆಲವು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು.
ಕಾಡಿಗೆರೋಗ ಕಾಣಿಸಿಕೊಂಡ ತಕ್ಷಣ ಒಂದೇ ವಾರದಲ್ಲಿ ಕಾರ್ಬೆಂಡೈಜಿಮ್ 1.5 ಗ್ರಾಂ.ಅಥವಾ ವೈಟಾವ್ಯಾಕ್ಸ್ 1 ಗ್ರಾಂ.ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ನಾಟಿಗಾಗಿ ಬಳಸುವ ಗಣಿಕೆತುಂಡುಗಳು ರೋಗರಹಿತಕಬ್ಬಿನ ಹೊಲದಿಂದ ಆಯ್ಕೆ ಮಾಡುವುದು ಅತ್ಯಗತ್ಯ. ಅತಿ ಹೆಚ್ಚು ಕೂಳೆ ಕಬ್ಬಿಗೆ ಪ್ರಾತಿನಿದ್ಯ ನೀಡಬಾರದು. ರೋಗ ಪೀಡಿv Àಕಪ್ಪುಕಾಡಿಗೆಒಣಗಿದ ಎಲೆಗಳನ್ನು ಹೊಲದಿಂದ ಬೇರ್ಪಡಿಸಿ ನಾಶಪಡಿಸಬೇಕು.
ಇದರಿಂz Àಅಪಾರ ಸಂಖ್ಯೆಯ ಕಪ್ಪು ಶಿಲೀಂದ್ರದ ರೋಗಾಣುಗಳನ್ನು ಕಡಿಮೆ ಮಾಡಬಹುದು.ಗಿಡದ ಬೆಳವಣಿಗೆ ಹಂತದಲ್ಲಿ ಮುಖ್ಯ ಪೋಷಕಾಂಶ ಪೊಟ್ಯಾಷ್ ಜೊತೆಗೆ ಕಬ್ಬಿಣ, ಝಿಂಕ್, ಮ್ಯಾಗ್ನೀಶಿಯಂ ಹಾಗೂ ಬೋರಾನ್ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.ವಿವಿಧ ಬೆಳೆ ಹಂತಗಳಲ್ಲಿ ಕಬ್ಬಿನಗಣಿಕೆ ಕಣ್ಣುಗಳು ಉತ್ತಮ ಗಾತ್ರ ಹಾಗೂ ಬೆಳವಣಿಗೆಯನ್ನು ಗಮನಿಸುತ್ತಿರಬೇಕು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…