ಕಬ್ಬಿನಲ್ಲಿ ಕಾಡಿಗೆ ರೋಗ ನಿರ್ವಹಣಾ ಕ್ರಮ

0
13

ಕಾಡಿಗೆ ರೋಗವು ಕಬ್ಬಿನ ಗಿಡದ ಸುಳಿ ಭಾಗದ ಎಲೆಗಳ ಬೆಳವಣಿಗೆ ಆಗದಂತೆ ತಡೆಗಟ್ಟುವುದರಿಂದ ಎಲೆಗಳು ಒಣಗುವ ಸಾಧ್ಯತೆ ಹೆಚ್ಚು.ಸುಳಿಯಿಂದ ತೆಳ್ಳನೆಯ ಉದ್ದವಾದ ಪೊರೆಯಿಂದ ಮುಚ್ಚಿದ ಕಾಡಿಗೆ ಶಿಲೀಂದ್ರದ ರೋಗಾಣು ಗಿಡದ ಮೇಲ್ಭಾಗದ ಎಲೆ ಸುತ್ತಲು ಕಾಣುವುದರಿಂದ ಈ ರೋಗವನ್ನು ಗುರುತಿಸಬಹುದು.

ಈ ರೋಗವು ನಾಟಿಯಾಗಿ ಎರಡು ತಿಂಗಳಿನಿಂದ ಬೆಳೆ ಬೆಳವಣಿಗೆ ಹಂತದವರೆಗೂ ಕಂಡುಬರುವುದು.ರೋಗದ ಹತೋಟಿ ನಿರ್ಲಕ್ಷವಾದಲ್ಲಿ ಕಬ್ಬಿನಲ್ಲಿ ಸಕ್ಕರೆ ಉತ್ಪಾದನಾ ಅಂಶ ಬ್ರಿಕ್ಸ್ ಶುದ್ಧತೆ ಮೇಲೆ ಹಾಗೂ ಸರಾಸರಿಇಳುವರಿ ಕೂಡಕಡಿಮೆಯಾಗುವುದು. ಹೆಚ್ಚಿನ ಸಾರಜನಕ, ರಸಸಾರಯುಕ್ತಗೊಬ್ಬರ ಬಳಕೆ, ನೀರಿನಏರುಪೇರು, ಕ್ಷಾರೀಯ ಮಣ್ಣಿನರಸಸಾರರೋಗದತೀವ್ರತೆ ಮೇಲೆ ಪರಿಣಾಮ ಬೀಳುವುದೆಂದು ಕಲಬುರಗಿ ಕೆವಿಕೆಯ ಸಸ್ಯರೋಗ ತಜ್ಞರಾದ ಜಹೀರ್‍ಅಹಮ್ಮದ್‍ರವರು ತಿಳಿಸಿದ್ದಾರೆ. ಈ ರೋಗದ ಹತೋಟಿಗೆ ಕೆಲವು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು.

Contact Your\'s Advertisement; 9902492681

ಕಾಡಿಗೆರೋಗ ಕಾಣಿಸಿಕೊಂಡ ತಕ್ಷಣ ಒಂದೇ ವಾರದಲ್ಲಿ ಕಾರ್ಬೆಂಡೈಜಿಮ್ 1.5 ಗ್ರಾಂ.ಅಥವಾ ವೈಟಾವ್ಯಾಕ್ಸ್ 1 ಗ್ರಾಂ.ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ನಾಟಿಗಾಗಿ ಬಳಸುವ ಗಣಿಕೆತುಂಡುಗಳು ರೋಗರಹಿತಕಬ್ಬಿನ ಹೊಲದಿಂದ ಆಯ್ಕೆ ಮಾಡುವುದು ಅತ್ಯಗತ್ಯ. ಅತಿ ಹೆಚ್ಚು ಕೂಳೆ ಕಬ್ಬಿಗೆ ಪ್ರಾತಿನಿದ್ಯ ನೀಡಬಾರದು. ರೋಗ ಪೀಡಿv Àಕಪ್ಪುಕಾಡಿಗೆಒಣಗಿದ ಎಲೆಗಳನ್ನು ಹೊಲದಿಂದ ಬೇರ್ಪಡಿಸಿ ನಾಶಪಡಿಸಬೇಕು.

ಇದರಿಂz Àಅಪಾರ ಸಂಖ್ಯೆಯ ಕಪ್ಪು ಶಿಲೀಂದ್ರದ ರೋಗಾಣುಗಳನ್ನು ಕಡಿಮೆ ಮಾಡಬಹುದು.ಗಿಡದ ಬೆಳವಣಿಗೆ ಹಂತದಲ್ಲಿ ಮುಖ್ಯ ಪೋಷಕಾಂಶ ಪೊಟ್ಯಾಷ್ ಜೊತೆಗೆ ಕಬ್ಬಿಣ, ಝಿಂಕ್, ಮ್ಯಾಗ್ನೀಶಿಯಂ ಹಾಗೂ ಬೋರಾನ್ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.ವಿವಿಧ ಬೆಳೆ ಹಂತಗಳಲ್ಲಿ ಕಬ್ಬಿನಗಣಿಕೆ ಕಣ್ಣುಗಳು ಉತ್ತಮ ಗಾತ್ರ ಹಾಗೂ ಬೆಳವಣಿಗೆಯನ್ನು ಗಮನಿಸುತ್ತಿರಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here