ಕಲಬುರಗಿ; ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ರಾಜ್ಯದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮುಸ್ಲಿಂಮರಿಗೆ ಈಗಲೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ. 13% ಇರುವ ಮುಸ್ಲಿಮರಿಗೆ ಅಲ್ಪಸಂಖ್ಯಾತರೊಟ್ಟಿಗೆ 4% ಮೀಸಲಾತಿ ನೀಡಲಾಗಿತ್ತು. ಈಗ ಅದನ್ನೂ ಕಿತ್ತುಹಾಕಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು, ವರದಿಯಿಲ್ಲದೆ ಯಾವ ವರ್ಗವನ್ನು ಮೀಸಲಿನಿಂ ಕೈ ಬಿಡದಾಗಲಿ, ಸೇರಿಸೋದಾಗಲಿ ಮಾಡಲಾಗದು. ಹೀಗಿದ್ದರೂ ಬಿಜೆಪಿ ಮನಸೋ ಇಚ್ಚೆಯಿಂದ ಮುಸ್ಲೀಂಮರ ಮೀಸಲು ರದ್ದು ಮಾಡಿದೆ ಎಂದು ಜೇವರ್ಗಿ ಶಾಸಕರು, ವಿಧಾನ ಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಾಚಾರ್ ಕಮೀಷನ್ ವರದಿಯಲ್ಲಿ ಮುಸ್ಲಿಂ ಸಮುದಾಯ ತುಂಬ ಹಿಂದುಳಿದಿದೆ ಎಂಬ ಉಲ್ಲೇಖವಾಗಿದ್ದರೂ ಸರ್ಕಾರ ಈ ಸಮುದಾಯದ 2 ಬಿ ಮೀಸಲಾತಿ ರದ್ದು ಮಾಡಿದೆ. ಇದು ಅನ್ಯಾಯದ ಪರಮಾವಧಿಯಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.
1992 ರ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟು ಮೀಸಲಾತಿ ಶೇ. 50 ಮೀರಬಾರದು ಎಂದಿದೆ. ರಾಜ್ಯದಲ್ಲಿ ಮೀಸಲಾತಿ ಈಗ ಶೇ. 50 ಇದೆ. ನ್ಯಾಯಾಲಯದ ತೀರ್ಪು ಬದಲಾಗಬೇಕಾದರೆ ಸಂವಿಧಾನದ 9 ನೇ ಶೆಡ್ಯೂಲ್‍ಗೆ ಸೇರಿಸಬೇಕು. ಇಲ್ಲಿ ಇದ್ಯಾವುದನ್ನೂ ಮಾಡದೆ ಬಿಜೆಪಿ ಸರ್ಕಾರ ಮೀಸಲಾತಿಯಂತಹ ಮಹತ್ವದ ಹಾಗೂ ಸೂಕ್ಷ್ಮ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಗಿಮಿಕ್ ಮಾಡುತ್ತಿದೆ ಎಂದು ಡಾ. ಅಜಯ್ ಸಿಂಗ್ ದೂರಿದ್ದಾರೆ.
ಮುಸ್ಲೀಂಮರಿಗೆ ಶೇ. 10 ಇಡಬ್ಲೂಎಸ್ ಮೀಸಲಾತಿಯಡಿ ಸೇರಿಸುವುದಾಗಿ ಬೊಮ್ಮಾಯಿ ಹೇಳುತ್ತಿದ್ದಾರೆ. ಪ್ರವರ್ಗದ ಕೋಟನೇ ಬೇರೆ, ಆರ್ಥಿಕ ಹಿಂದುಳಿದವರ ಮೀಸಲಾತಿಯೇ ಬೇರೆ. ಬೊಮ್ಮಾಯಿಯವರು ಚುನಾವಣೆ ಗಿಮಿಕ್ ಮಾಡಿ ಮೀಸಲಾತಿ ವಿಚಾರದಲ್ಲಿ ಅವೈe್ಞÁನಿಕ ನೀತಿ ಅನುಸರಿಸಿದ್ದಾರೆ. ಇದು ಮುಸ್ಲಿಂ, ಲಿಂಗಾಯಿತ, ಎಸ್ಸಿ, ಎಸ್ಟಿ ಎಲ್ಲರಿಗೂ ಅನ್ಯಾಯವಾದಂತಾಗಿದೆ.
ಈಗಾಗಲೇ ಕಾಗ್ರೆಸ್ ಪಕ್ಷ (ಕೆಪಿಸಿಸಿ) ತೆಗೆದುಕೊಂಡ ನಿಲುವಿನಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಕ್ಷಣವೇ ಮೀಸಲಾತಿ ಯಥಾಸ್ಥಿತಿ ಕಾಪಾಡೋದಲ್ಲದೆ ಮುಸ್ಲಿಮರು, ಎಸ್ಸಿ, ಎಸ್ಟಿ, ಲಿಂಗಾಯಿತರು, ಒಕ್ಕಲಿಗರು ಎಲ್ಲರ ಹಿತ ಕಾಪಾಡುವಂತಹ ನಿಲುವಿಗೆ ಬದ್ಧವಾಗಿರಲಿದೆ. ಚುನಾವಣೆ ಸಮಯದಲ್ಲಿ ಜನರ ದಾರಿ ತಪ್ಪಿಸಲು ಹಾಗೂ ತನ್ನ ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನೇ ಬೇಕಾಬಿಟ್ಟಿಯಾಗಿ ಹೊಂದಿಸುವ ಮೂಲಕ ಬಿಜೆಪಿ ಜನದ್ರೋಹಿ ಕೆಲಸ ಮಾಡುತ್ತಿದೆ. ಇಂತಹ ಮಹಾಮೋಸ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ಬರುವ ಚುನಾವಣೆಯಲ್ಲಿ ಪಾಠ ಕಲಿಸೋದು ನಿಶ್ಚಿತ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…