ಬಿಸಿ ಬಿಸಿ ಸುದ್ದಿ

30, 31 ರಂದು ಎರಡು ದಿನ ಸೋಲಾಪುರದಲ್ಲಿ 3ನೇ ಕನ್ನಡ ಸಾಹಿತ್ಯ ಸಮ್ಮೇಳ

ಸೊಲ್ಲಾಪುರ : ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟç ಗಡಿನಾಡು ಘಟಕದ ವತಿಯಿಂದ ೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಮಾರ್ಚ್ ೩೦ ಮತ್ತು ೩೧ ರಂದು ಜತ್ತ ತಾಲ್ಲೂಕಿನ ಸಂಖ ಗ್ರಾಮದ ಶ್ರೀ ಗುರುಬಸವ ವಿದ್ಯಾಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದು, ಈ ಭಾಗದ ಕನ್ನಡಿಗರಿಗೆ ಸಾಹಿತ್ಯದ ರಸದೌತಣ ಸಿಗಲಿದೆ. ಈಗಾಗಲೇ ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು ಪೂರ್ಣ ಗೊಂಡಿದೆ. ಆದ್ದರಿಂದ ಎಲ್ಲ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಡಬೇಕೆAದು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸೋಮಶೇಖರ ಜಮಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟç ಮತ್ತು ಕರ್ನಾಟಕ ಗಡಿಭಾಗದ ಜತ್ತ ತಾಲ್ಲೂಕಿನ ಸಂಖದಲ್ಲಿ ಮಾರ್ಚ್ ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮಾರ್ಚ ೩೦ ರಂದು ಬೆಳಿಗ್ಗೆ ೮.೩೦ ಗಂಟೆಗೆ ತಹಸೀಲ್ದಾರ ಎಸ್. ಆರ್. ಮಾಗಡೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಯುವ ನಾಯಕ ಕಿರಣ ಪಾಟೀಲ ಮಹಾದ್ವಾರ ಉದ್ಘಾಟಿಸುವರು. ವಿಜಯಕುಮಾರ ಬಿರಾದಾರ ಶರಣೆ ದಾನಮ್ಮ ದಾಸೋಹ ಮನೆ ಉದ್ಘಾಟಿಸುವರು. ಸಂಖ ವಿರಕ್ತಮಠದ ಪೂಜ್ಯ ಮಹೇಶ ದೇವರ ಸಾನಿಧ್ಯದಲ್ಲಿ ಬೆಳಿಗ್ಗೆ ೯.೦೦ ಗಂಟೆಗೆ ಶ್ರೀ ಮಹಾತ್ಮಾ ಬಸವೇಶ್ವರ ವೃತ್ತದಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮಾಜಿ ಕ್ಷೇತ್ರಶಿಕ್ಷಣಾಧಿಕಾರಿ ಜಿ. ಡಿ. ರಾಠೋಡ (ಲಮಾಣ) ಅವರು ಉದ್ಘಾಟಿಸುವರು.

ಮುಂಜಾನೆ ೧೧.೦೦ ಗಂಟಗೆ ನಾಗಣಸೂರಿನ ಪೂಜ್ಯ ಶ್ರೀ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಬಾಲಗಾಂವ ಗುರುದೇವಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ|| ಮಹೇಶ ಜ್ಯೋಶಿಯವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಚಿವ ಸುರೇಶ (ಭಾವು) ಖಾಡೆ, ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷ ಎಮ್.ಎಸ್. ಸಿಂಧೂರ ಅವರು ಸಮ್ಮೇಳಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಸಾಂಗಲಿ ಸಂಸದ ಸಂಜಯ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಡಾ. ಶಶಿಕಾಂತ ಪಟ್ಟಣ ಅವರು ರಚಿಸಿದ ‘ಬೇಲಿ ಮೇಲಿನ ಹೂವು’ ಕವನ ಸಂಕಲನ ಕೃತಿಯನ್ನು ಮಾಜಿ ಸಚಿವೆ ಡಾ. ಲೀಲಾದೇವಿ ಪ್ರಸಾದ್ ಅವರು ಲೋಕಾರ್ಪಣೆಗೊಳಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಮಧುಮಾಲ ಲಿಗಾಡೆ ಅವರು ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಅಲ್ಲದೆ ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಅಂದು ಮಧ್ಯಾಹ್ನ ೧೨.೩೦ ಗಂಟೆಗೆ ಅಕ್ಕಲಕೋಟ ವಿರಕ್ತ ಮಠದ ಪೂಜ್ಯ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಡಾ. ಬಿ. ಬಿ. ಪೂಜಾರಿ ಅಧ್ಯಕ್ಷತೆಯಲ್ಲಿ ‘ಕನ್ನಡ ಮತ್ತು ಮರಾಠಿ ಸಾಹಿತ್ಯ, ಸಂಸ್ಕೃತಿ : ಸಾಮರಸ್ಯ ಕುರಿತು ಮೊದಲನೆ ಗೋಷ್ಠಿ ನಡೆಯಲಿದೆ.

ಮಧ್ಯಾಹ್ನ ೨.೩೦ ಗಂಟೆಗೆ ಕಕಮರಿ ಗುರುದೇವಾಶ್ರಮದ ಪೂಜ್ಯ ಆತ್ಮಾನಂದ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಾಹಿತಿ-ಚಿಂತಕರಾದ ಡಾ. ಶಶಿಕಾಂತ ಪಟ್ಟಣ ಅವರ ಅಧ್ಯಕ್ಷತೆಯಲ್ಲಿ ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಸಾಯಂಕಾಲ ೪.೩೦ ಗಂಟೆಗೆ ಸಾಹಿತಿ ಡಾ. ರಾಜಶೇಖರ ಮಠಪತಿ (ರಾಗಂ) ಅಧ್ಯಕ್ಷತೆಯಲ್ಲಿ ‘ಕವಿಗೋಷ್ಠಿ, ಸಂಜೆ ೭ ಗಂಟೆಗೆ ಗೊಂದಳವಾಡಿಯ ಪೂಜ್ಯ ತುಕಾರಾಮ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಸಾಂಗಲಿ ಜಿಲ್ಲಾ ಮಾಧ್ಯಮಿಕ ಶಿಕ್ಷಕ ಬ್ಯಾಂಕಿನ ಮಾಜಿ ಚೇರಮನ್ ಗುರುಬಸವ ಪಾಟೀಲರ ಅಧ್ಯಕ್ಷತೆಯಲ್ಲಿ ಹಾಸ್ಯ ಮಂಜರಿ, ಭರತ ನಾಟ್ಯ, ಜಾನಪದ ಸಂಭ್ರಮ, ಸಂಗೀತ ಸಂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಮಾರ್ಚ ೩೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಾಗಣಸೂರ ವಿರಕ್ತಮಠದ ಪೂಜ್ಯ ಡಾ.ಅಭಿನವ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಡಾ. ಕೆ. ಕೆ. ಪತ್ತಾರ ಅವರ ಅಧ್ಯಕ್ಷತೆಯಲ್ಲಿ ಮಹಾಕನ್ನಡಿಗರ ಸ್ಥಿತಿ-ಗತಿ, ಮಧ್ಯಾಹ್ನ ೧೨.೩೦ ಗಂಟೆಗೆ ಉದಯವಾಣಿ ವಿಜಯಪುರ ಜಿಲ್ಲಾ ಪತ್ರಕರ್ತರಾದ ಜಿ. ಎಸ್. ಕಮತರ ಅವರ ಅಧ್ಯಕ್ಷತೆಯಲ್ಲಿ ‘ಸಾಹಿತ್ಯದ ಬದುಕಿಗೆ ಮಾಧ್ಯಮದ ಬೆಳಕು, ಮಧ್ಯಾಹ್ನ ೨.೩೦ ಗಂಟೆಗೆ ಮುಗಳಿ ಬಸವ ಮಂಟಪದ ಪೂಜ್ಯ ಮಹಾನಂದಾತಾಯಿ ಹಿರೇಮಠ ಅವರ ಸಾನಿಧ್ಯದಲ್ಲಿ ಹಾಗೂ ವಿಜಯಪುರದ ಸಂಶೋಧಕಿ ಸೀಮಾ ತಕನ್ನವರ್ ಅಧ್ಯಕ್ಷತೆಯಲ್ಲಿ ‘ಮಹಿಳಾ ಸಬಲಿಕರಣ ಹಾಗೂ ಸಾಧಕ ಮಹಿಳೆಯರಿಗೆ ಸನ್ಮಾನ, ಸಂಜೆ ೪ ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ.

ತದನಂತರ ಸಂಜೆ ೫ ಗಂಟೆಗೆ ತೆಲಸಂಗ ಹಿರೇಮಠದ ಪೂಜ್ಯ ವಿರೇಶ್ವರ ದೇವರು ಸಾನಿಧ್ಯದಲ್ಲಿ ಹಾಗೂ ಶಾಸಕ ವಿಕ್ರಮ್ ಸಾವಂತ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಸೇರಿದಂತೆ ಒಟ್ಟು ೬ ಗೋಷ್ಠಿಗಳು ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ಎಮ್. ಎಸ್. ಸಿಂಧೂರ ಅವರ ಉಪಸ್ಥಿತಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಆರ್. ಕೆ. ಪಾಟೀಲ ಅವರು ಸಮಾರೋಪ ನುಡಿಗಳನ್ನಾಡುವರು.

ಮಹಾರಾಷ್ಟç ಮತ್ತು ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಮತ್ತು ಕನ್ನಡಿಗರು ಎರಡು ರಾಜ್ಯಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕನ್ನಡಿಗ ಮತ್ತು ಮರಾಠಿಗರು ಒಟ್ಟಾಗಿ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಇಂಥಹ ಕಾರ್ಯಕ್ರಮಗಳ ಮೂಲಕ ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ವೃಧ್ದಿಯಾಗಲಿದೆ ಎಂದು ಕಸಾಪ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಮಹಾರಾಷ್ಟç ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಯುವ ಸಾಹಿತಿ ಗಿರೀಶ ಜಕಾಪುರೆ, ಉಪಾಧ್ಯಕ್ಷ ರಾಜಶೇಖರ ಉಮರಾಣಿಕರ, ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ವಿದ್ಯಾಧರ ಗುರವ, ಪ್ರಶಾಂತ ವಗ್ಗೋಲಿ ಸೇರಿದಂತೆ ಮೊದಲಾದವರು ಇದ್ದರು..

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

7 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

7 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

7 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

7 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

7 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

7 hours ago