ಬಿಸಿ ಬಿಸಿ ಸುದ್ದಿ

ಮತ್ತೆ ಕಲ್ಯಾಣ ಅಭಿಯಾನ:ಬಸವಣ್ಣನವರು ವಿಶ್ವದ ಬಹುದೊಡ್ಡ ಜ್ಞಾನ ರತ್ನ: ಸತ್ಯಂಪೇಟೆ

ಶಹಾಪುರ:  ಬಸವಣ್ಣನವರು ವಿಶ್ವದ ಬಹುದೊಡ್ಡ ಜ್ಞಾನ ರತ್ನ. ಸದುವಿನಯ ಸಂಪನ್ನ. ಸಮ ಸಮಾಜದ ಕನಸುಗಳನ್ನು ಬಿತ್ತಿ ಬೆಳೆದ ಗಾರುಡಿಗ. ಜನ ಸಾಮಾನ್ಯರು ನಿತ್ಯ ಮಾಡುವ ಕೆಲಸವನ್ನು ಕಾಯಕ ತತ್ವಕ್ಕೇರಿಸಿ ಉದಾರಿಕರಿಸಿದರು ಎಂದು ಮತ್ತೆ ಕಲ್ಯಾಣ ವೇದಿಕೆಯ ಚಿಂತಕ, ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಸ್ಥಳೀಯ ಎಸ್.ಎಂ.ಸಿ. ಜೈನ್ ಶಾಲೆಯಲ್ಲಿ ಸಮಸಮಾಜದಿಂದ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಒಂದು ದೇಶದ ಪ್ರಧಾನಿಯಾಗಿಯೂ ಆ ಹಮ್ಮು ತಲೆಯೊಳಗೆ ಬಿಟ್ಟುಕೊಳ್ಳಲಿಲ್ಲ. ವೈಜ್ಞಾನಿಕವಾಗಿ, ವೈಚಾರಿಕವಾಗಿ ಸಮಾಜವನ್ನು ಕಟ್ಟಬೇಕು ಎಂಬ ತುಡಿತ ಹೊಂದಿದ ಮಹಾನೀಯ. ಜಾತಿ ಮತ ಪಂಥವೆನ್ನದೆ ಹೆಣ್ಣು ಗಂಡು ಎಂಬ ಭೇದವನ್ನು ಪರಿಗಣಿಸದೆ ಎಲ್ಲರಿಗೂ ಒಳಿತಾಗಲಿ ಎಂದು ಬಯಸಿದರು. ನೋವಿರುವ ಕಡೆಗೆ ಸದಾ ನಾಲಿಗೆ ಹರಿಯುವಂತೆ ದೀನ ದಲಿತರು ದುಃಖಿತರೆಡೆಗೆ ಅವರ ಮನಸ್ಸು ಹಾತೊರೆಯುತ್ತಿತ್ತು. ಸರಳವಾದ ವಚನ ರಚನೆಯ ಮೂಲಕ ಸಮಾಜದಲ್ಲಿ ಬೇರುಬಿಟ್ಟ ಅಸಮಾನತೆಯನ್ನು ಕಿತ್ತೊಗೆಯಲು ಅಹರ್ನಿಶಿ ಪ್ರಯತ್ನಿಸಿದರು. ಹನ್ನೆರಡನೆಯ ಶತಮಾನದಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಮನದ ಕೊಳೆಯನ್ನು ತೊಳೆಯುವ, ನಮ್ಮೊಳಗೆ ಮೂಡಿರುವ ಅಂಧಕಾರವನ್ನು ಕಿತ್ತೊಗೆಯುವ ಶಕ್ತಿ ವಚನಗಳಿಗೆ ಇದೆ ಎಂದು ವಿವರಿಸಿದರು.

ಬಸವಾದಿ ಶರಣರ ವಚನಗಳನ್ನು ಓದುತ್ತಿದ್ದರೆ ನಮಗರಿವಿಲ್ಲದೆ ನಮ್ಮೊಳಗೆ ಇರುವ ಕಲ್ಮಶ ತಂತಾನೆ ಕಿತ್ತು ಹೋಗುತ್ತದೆ. ಇವನಾರವ ಎನ್ನದೆ ಇವ ನಮ್ಮವ ಎಂದು ಎಲ್ಲರನ್ನೂ ತಬ್ಬಿಕೊಳ್ಳುವ ಭಾವ ಉಂಟಾಗುತ್ತದೆ ಎಂದು ಶರಣರ ವಚನಗಳನ್ನು ಉದಾಹರಿಸಿ ಬಣ್ಣಿಸಿದರು. ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಬಸವಮಾರ್ಗ ಪ್ರತಿಷ್ಠಾನದ ಸಂಚಾಲಕ ಶಿವಣ್ಣ ಇಜೇರಿ, ಜೀವನವನ್ನು ನಾವು ಯಾರೂ ಕಡೆಗಣಿಸಬಾರದು. ಬಾಲ್ಯ ಯೌವ್ವನ, ಹಾಗೂ ವೃದ್ದ್ಯಾಪ್ಯಗಳು ನಮಗೆ ಅರಿವಿಲ್ಲದೆ ಬಂದು ಹೋಗುತ್ತವೆ. ಮಸಣಕ್ಕೆ ಹೋಗುವ ಸಂದರ್ಭದಲ್ಲಿ ಅರಿವಿಗೆ ಒಳಗಾಗಿ ಪರಿತಪಿಸುವುದಕ್ಕಿಂತ ಚಿಕ್ಕವರಿದ್ದಾಗಿನಿಂದಲೆ ಶರಣರ ವಚನಗಳ ಓದು ಮಾಡಬೇಕು. ಬದುಕಿಗೆ ವಚನಗಳು ಸಂಜೀವಿನಿಯಂತೆ ಇವೆ. ಮಕ್ಕಳಿಗೆ ತಿಳಿದರೂ ತಿಳಿಯದೆ ಇದ್ದರೂ ವಚನಗಳನ್ನು ಒತ್ತಾಯದಿಂದಾದರೂ ಓದಿಸಬೇಕು. ಇಂದು ವಚನಗಳನ್ನು ಓದಿದ ಮಗು ಮುಂದೊಂದು ದಿನ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಾನೆ.

ಶರಣರ ವಚನಗಳು ಅತ್ಯಂತ ಸರಳ ಮತ್ತು ನೇರವಾಗಿವೆ. ಸಮಾಜದ ಡೊಂಕುಗಳನ್ನು ತಿದ್ದುತ್ತಲೆ ಅವು ನಮ್ಮನ್ನೂ ಸಹ ತಿದ್ದುತ್ತ ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಮತ್ತೆ ಕಲ್ಯಾಣವೆಂದರೆ ಬಸವ ಕಲ್ಯಾಣಕ್ಕೆ ಹೋಗುವುದಲ್ಲ. ಸಕಲ ಜೀವರಾಶಿಗೂ ಒಳಿತಾಗಲಿ ಎಂದು ಹಾರೈಸುವುದು ಮತ್ತು ಅದರಂತೆ ಬದುಕುವುದು ಎಂದು ವಿವರಿಸಿದರು.

ವೇದಿಕೆಯ ಮೇಲೆ ಪಂಪಣ್ಣಗೌಡ ಮಾಲಿ ಪಾಟೀಲ ಮಳಗ ಉಪಸ್ಥಿತರಿದ್ದರು. ಎಸ್.ಎಂ.ಸಿ. ಜೈನ್ ಶಾಲೆಯ ಪ್ರಾಚಾರ್ಯರಾದ ಭಾವಿಕಾ ಎಸ್.ಲಾಡ್ ಅಧ್ಯಕ್ಷ ವಹಿಸಿದ್ದರು. ಗಂಗಾಧರ ಹೊಟ್ಟಿ ವಚನ ಪ್ರಾರ್ಥನೆ ಮಾಡಿದರು. ಹಣಮಂತ ಚೆನ್ನೂರ ನಿರ್ವಹಿಸಿದರು. ವೆಂಟೇಶ ತುಳೇರ ವಂದಿಸಿದರು. ಜ್ಯೋತಿ ಕುಲ್ಕರ್ಣಿ ಸ್ವಾಗತಿಸಿದರು. ಸಭೆಯಲ್ಲಿ ಜೈನ ಶಾಲೆಯ ರಾಜೇಶ್ವರಿ, ಅನ್ನಪೂರ್ಣ, ಪಾರ್ವತಿ,ಅನಿಲ, ಪಾಂಡುರಂಗ, ಪ್ರವೀಣ ಕುಲ್ಕರ್ಣಿ ಮೊದಲಾದವರು ಹಾಗೂ ಶಾಲೆಯ ನೂರಾರು ಮಕ್ಕಳು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago