ಬಸವ ಜಯಂತಿ ಉತ್ಸವ ನಿಮಿತ್ತ ರಕ್ತದಾನ ಶಿಬಿರ

0
34
ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ 890ನೆಯ ಬಸವ ಜಯಂತಿ ಉತ್ಸವ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳಲಾಯಿತು. ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಡಾ.ಶಿವಶೇಟ್ಟಿ, ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವೀರಣ್ಣ ಹೊನ್ನಳ್ಳಿ, ಉಪಾಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ, ಶರಣಬಸಪ್ಪ ಉಪಳಾಂವ, ಸಿದ್ದರಾಮೇಶ್ವಶ ಕುಸನೂರ, ಗುರುಭೀಮ ಬೂದಿ, ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ, ನೀಲಕಂಠರಾವ ಮೂಲಗೆ, ಶರಣು ಭೂಸನೂರ, ದಯಾನಂದ ಪಾಟೀಲ ಸೇರಿದಂತೆ ಇತರರು ಇದ್ದರು.

ವಿಭೂತಿ ಕೊಡುವ ಕೈಗಳು ದಾರ ಕೊಡುತ್ತಿವೆ. ರುದ್ರಾಕ್ಷಿ ಕೊಡುವ ಕೈಗಳು ತಾಯಿತ ಕೊಡುತ್ತಿವೆ. ಲಿಂಗ ಕೊಡುವ ಕೈಗಳು ನಿಂಬೆಹಣ್ಣು ಕೊಡುತ್ತಿರುವುದು ಸುರ್ದೈವದ ಸಂಗತಿ. – ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕಲಬುರಗಿ.

ಕಲಬುರಗಿ: ಬಸವಣ್ಣನವರ ವಾರಸುದಾರರು ಎಂದು ಕರೆಯಿಸಿಕೊಳ್ಳುವ ಲಿಂಗಾಯತರಷ್ಟು ನಿರಭಿಮಾನಿಗಳು ಯಾರೂ ಇಲ್ಲ ಎಂದು ಶ್ರೀಶೈಲಂ ಸಾರಂಗ ಮಠ ಹಾಗೂ ಸುಲಫಲ ಮಠದ ಜಗದ್ಗುರು ಸಾರಂಗಧರ ಸ್ವಾಮೀಜಿ ನುಡಿದರು.

Contact Your\'s Advertisement; 9902492681

ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಬಸವೇಶ್ವರ ವೃತ್ತದಲ್ಲಿ ಭಾನುವಾರ ಜರುಗಿದ ಬಸವ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಸಮಾನತೆ, ಭ್ರμÁ್ಟಚಾರ ತುಂಬಿ ತುಳುಕಾಡುತ್ತಿರುವ ಇಂದಿನ ಸಮಾಜಕ್ಕೂ ಬಸವತತ್ವ ಅಗತ್ಯವಿದೆ ಎಂದು ಅವರು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಇವನಾರವ ಎಂದು ದೂರಿಕರಿಸದೆ ಇವ ನಮ್ಮವ ಎಂದು ಅಪ್ಪಿಕೊಳ್ಳುವ ಧರ್ಮ ಬಸವ ಧರ್ಮವಾಗಿದ್ದು, ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಚನ ಸಾಹಿತ್ಯ ಪ್ರಚಾರ, ಪ್ರಸಾರವಾಗದಂತೆ ಷಢ್ಯಂತ್ರ ಹೂಡಿದ್ದ ಪಟ್ಟಭದ್ರಶಕ್ತಿಗಳು ಲಿಂಗಾಯತರನ್ನು ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಕುಮಾರ ಮೋದಿ , ಸಮಿತಿ ಗೌರವಾಧ್ಯಕ್ಷ ಕಲ್ಯಾಣಪ್ಪ ಪಾಟೀಲ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು. ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವೀರಣ್ಣ ಹೊನ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಡಾ. ಶ್ರೀಶೈಲ ಘೂಳಿ,ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಮಲ್ಲಿಕಾರ್ಜುನ ಪಾಟೀಲ ಕಾಳಗಿ, ಶರಣು ಭೂಸನೂರ,
ಶರಣಗೌಡ ಪಾಳಾ. ವೀರಣ್ಣ ಗೋಳೆದ, ಡಾ.ನಾಗವೇಣಿ ಪಾಟೀಲ ರೇವೂರ ಇದ್ದರು.

ಬಸವ ಜಯಂತಿ ಅಂಗವಾಗಿ 165 ಜನ ರಕ್ತದಾನ ಮಾಡಿದರು. ನಂತರ ನಗರದ ನಗರೇಶ್ವರ ಶಾಲೆಯಿಂದ ಬಸವೇಶ್ವರ ವೃತ್ತದವರೆಗೆ ಬಸವಣ್ಞನವರ ಭಾವ ಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here