ಗೃಹ ಇಲಾಖೆ ಬಿಜೆಪಿ ಅಭ್ಯರ್ಥಿ ಬಗ್ಗೆ ಆರೋಪಿಸಿದೆ: ಪ್ರಿಯಾಂಕ್ ಖರ್ಗೆ

0
45

ಕಲಬುರಗಿ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಅಕ್ಕಿ ಕಳ್ಳ, ಡಿಸೇಲ್ ಕಳ್ಳ ಹಾಗೂ ಹಾಲಿನ ಪುಡಿ ಕಳ್ಳತನ ಮಾಡಿ ಮಾರಾಟ ಮಾಡುತ್ತಾನೆ ಎಂದು ನಾನು ಅಥವಾ ಕಾಂಗ್ರೆಸ್ ನವರು ಹೇಳಿಲ್ಲ. ಹೇಳಿದ್ದು ಬಿಜೆಪಿ ಸರ್ಕಾರದ ಗೃಹ ಇಲಾಖೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ದಿಗ್ಗಾಂವ ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅವರು ಮಾತನಾಡಿ ಹಾಲಿನ ಪುಡಿ ಅಕ್ರಮ ಮಾರಾಟ ಮಾಡಿದ ಆರೋಪ ಸಾಬೀತಾಗಿ ಯಾದಗಿರಿ ನ್ಯಾಯಾಲಯ ‌ಒಂದು‌ ವರ್ಷ ಜೈಲು ಶಿಕ್ಷೆ ಕೂಡಾ ವಿಧಿಸಿದೆ. ಚಿತ್ತಾಪುರದ ಅಭಿವೃದ್ದಿಯಾಗಬೇಕಾದರೆ ನಿಮ್ಮ ಮಕ್ಕಳ ಶೈಕ್ಷಣಿಕ ಉನ್ನತಿಯಾಗಬೇಕಾದರೆ ನನಗೆ ಮತ ನೀಡಿ ನಿಮ್ಮ ಮಕ್ಕಳು ಮಣಿಕಂಠನಂತೆ ಆಗಬೇಕೆಂದರೆ ಅವನಿಗೆ ಮತ ಹಾಕಿ ಎಂದರು.

Contact Your\'s Advertisement; 9902492681

ಮೊನ್ನೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಬಂದು ಚಾವಲ್ ಚೋರ್ ನ ಪರ ಮತಯಾಚನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಪ್ರಧಾನಿ‌ ಹಾಗೂ ಮಧ್ಯಪ್ರದೇಶ ಸಿಎಂ ಬರಬೇಕಿತ್ತು. ಯಾಕೋ ಅವರು ಬರುವುದು ರದ್ದಾಗಿದೆ ಎಂದರು.

ಬರ ನೆರೆ ಬಂದಾಗ ತೊಗರಿಗೆ ನೆಟೆ ರೋಗ ಬಂದಾಗ ಬರದ ಸಿಎಂ ಬೊಮ್ಮಾಯಿ ಅಕ್ಕಿ ಕಳ್ಳನ ಪರ ಮತಯಾಚನೆ ಮಾಡಲು ಬಂದಿದ್ದಾರೆ‌ ಇದು ದುರಂತ.

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂದು ಘೋಷಿಸಿದ ಅವರು ಇನ್ನೇನು ಒಂದು ವಾರದಲ್ಲಿ ‌ಚುನಾವಣೆ ಮುಗಿಯಲಿದೆ. ಕಾಂಗ್ರೆಸ್ ಪಕ್ಷ 130 ಕ್ಕೂ ಹೆಚ್ಚು ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬಂದು ಅಭಿವೃದ್ದಿ ಮಾಡಲಾಗುವುದು. ವಿಧಾನಸೌಧದಲ್ಲಿ ಗುಡುಗಬೇಕೆಂದರೆ ನೀವು ಪ್ರಿಯಾಂಕ್ ನಿಗೆ ಮತನೀಡಿ‌ ಎಂದು ಮನವಿ ಮಾಡಿದರು.

ಪಿಎಸ್ ಐ, ಎಇಇ, ಜೆಇ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ರಾಜ್ಯದ ಇತಿಹಾಸದಲದಲೇ ಮೊದಲ ಬಾರಿಗೆ ಹಾಗೂ ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ.

ಇಡೀ ತಾಲೂಕಿನಲ್ಲೇ ದಿಗ್ಗಾಂವ ಗ್ರಾಮ‌ ಅತಿ ಹೆಚ್ಚು ಲೀಡ್ ಕೊಡುತ್ತೇವೆ ಎಂದು ಜನರು ಕೂಗಿ ಹೇಳಿದರು.‌ ಇದಕ್ಕೆ ಪ್ರತಿಯಾಗಿ ಮಾತನಾಡಿದ ಪ್ರಿಯಾಂಕ್, ನೀವು ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸಿದರೆ ಹೆಚ್ಚಿನ ಅನುದಾನ ತರುತ್ತೇನೆ, ಅಭಿವೃದ್ದಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here