ಪೊಲೀಸ್ ಪೇದೆ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

0
89

ಕಲಬುರಗಿ; ಮರಳು ಸಾಗಣೆ ಟ್ಯಾಕ್ಟರ್ ಹರಿಸಿ ಹೆಡ್ ಕಾನ್ಸ್ ಟೇಬಲ್ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರು ಗುಂಡು ಹೊಡೆದು  ಗಾಯಗೊಂಡ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಟ್ಯಾಕ್ಟರ್ ಮಾಲಿಕನಾದ ಸಾಯಿಬಣ್ಣ ಕರಜಗಿ ಬಂಧಿತ ಪ್ರಮುಖ ಎರಡನೇ ಆರೋಪಿಯಾಗಿದ್ದಾನೆ. ಸಾಯಿಬಣ್ಣ ಒರ್ವ ರೌಡಿ ಶೀಟರ್ ಆಗಿದ್ದು, ಇವನ ಮೇಲೆ ಕೊಲೆಗೆ ಯತ್ನ ದರೋಡೆ ಸೇರಿದಂತೆ ಹಲವು ಪ್ರಕರಣಗಳು ಇವೆ ಎಂದು ಎಸ್.ಪಿಇ ಇಶಾ ಪಂತ್ ತಿಳಿಸಿದ್ದಾರೆ.

Contact Your\'s Advertisement; 9902492681

15ರಂದು ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾನ್ (51) ಜೇವರ್ಗಿ ಅವರನ್ನು ತಾಲೂಕಿನ ಹುಲ್ಲೂರ್ ಚೆಕ್ಪೋಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಸಿದ್ದಪ್ಪನನ್ನು ಬಂಧಿಸಲಾಗಿತ್ತು.

ಮತ್ತೋರ್ವ ಆರೋಪಿ ಸಾಯಿಬಣ್ಣ ಕರಜಗಿ ತಲೆಮರೆಸಿಕೊಂಡಿದ್ದು ಶನಿವಾರ ಸಂಜೆ ವಿಜಯಪುರ ಜಿಲ್ಲೆಯ ಅಲಮೇಲ ಬಳಿ ಆತ ಅಡಗಿರುವುದನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿ ತರುವ ವೇಳೆ ಯಡ್ರಾಮಿ ಪಿಎಸ್ಐ ಮೇಲೆ ಚಾಕುವಿನಿಂದ ಹಲ್ಲೆಗೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆಯಲ್ಲಿ ಆತ್ಮರಕ್ಷಣೆ ಹಿನ್ನೆಲೆಯಲ್ಲಿ ಪಿಎಸ್ಐ ಸಂಗಮೇಶ್ ಅಂಗಡಿ ಅವರು ಆರೋಪಿ ಸಾಯಿಬಣ್ಣ ಕರಜಗಿ ಎಡಗಾಲಿನ ಮೇಲೆ ಗುಂಡು ಹಾರಿ ಆರೋಪಿಯನ್ನು ಬಂಧಿಸಿದ್ದಾರೆ.

ಗುಂಡೆಟ್ಟಿಗೆ ಯಾಗಗೊಂಡ ಸಾಯಿಬಣ್ಣನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾನೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಇಶಾ ಪಂತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here