ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲರವರಿಗೆ ಅವರ ನಿವಾಸಕ್ಕೆ ನಿಯೋಗದ ಮೂಲಕ ಭೇಟಿ ಮಾಡಿ ಕಲಬುರಗಿ ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಮಿತಿಯಿಂದ 21 ಮಹತ್ವದ ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿ ಚರ್ಚಿಸಲಾಯಿತು.
ಕಲಬುರಗಿ ಮಹಾನಗರದ ರಚನಾತ್ಮಕ ಪ್ರಗತಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಲ್ಲಿಸಿದ ಮಹತ್ವದ ಅಂಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರ ಜೊತೆ ಸಮಿತಿಯ ಮುಖಂಡರ ಉಪಸ್ಥಿತಿ ಯಲ್ಲಿ ಚರ್ಚಿಸಿ ಈ ಮಹತ್ವದ ಅಂಶಗಳ ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕರಾದ ಅಲ್ಲಮಪ್ರಭು ಪಾಟೀಲರವರು ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಡಾ.ಮಾಜಿದ್ ದಾಗಿ ಜ್ಞಾನಮಿತ್ರ ಸಾಮವೆಲ್, ಕಲ್ಯಾಣರಾವ ಪಾಟೀಲ, ಅಬ್ದುಲ ರಹೀಮ್ ಭೀಮರಾಯ ಕಂದಳ್ಳಿ, ಅಸ್ಲಂ ಚೌಂಗೆ, ಶಿವಾನಂದ ಬಿರಾದಾರ, ಮಲ್ಲಿನಾಥ ಸಂಗಶೆಟ್ಟಿ,ಸಾಲೋಮನ್ ದಿವಾಕರ್, ಸಾಬಿರ್ ಅಲಿ, ಮಲ್ಲಿಕಾರ್ಜುನ ಭೂಸನೂರ, ಸಾಜಿದ್ ಅಲಿ ರಂಜೋಳಿ,ಬೀಮಶೆಟ್ಟಿ ಮುಕ್ಕಾ, ಶಿವಾನಂದ ಕಾಂದೆ ,ಶರಣಬಸಪ್ಪಾ ಕುರಿಕೋಟಾ, ಗೌತಮ್ ಕಾಂಬಳೆ,ಮೈತಾಬ್ ಸಾಬ್, ಮಹ್ಮದ್ ಗೌಸ್, ಮಹ್ಮದ್ ಪಾಶಾಮಿಯಾ,ಜಿಲಾನಿ ಖಾದ್ರಿ ಸೇರಿದಂತೆ ಸಮಿತಿಯ ಅನೇಕರು ಉಪಸ್ಥಿತರಿದ್ದರು.