ಗೋವು ಶಾಲೆಗಳಲ್ಲಿ ಆಕ್ರಮ: ವಶಪಡಿಸಿಕೊಂಡ ಗೋವುಗಳ ಬಿಡುಗಡೆಗೆ ದಲಿತ ಸೇನೆ ಆಗ್ರಹ

0
39

ಕಲಬುರಗಿ: ಕಳೆದ ಬಕ್ರೀದ್ ಹಬ್ಬದಲ್ಲಿ 26 ಗೋವುಗಳು ಪೊಲೀಸರು ವಶಪಡಿಸಿಕೊಂಡು ಹಿನ್ನೆಲೆಯಲ್ಲಿ ನ್ಯಾಯಲದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಲಯ ಗೋವುಗಳು ಬಿಡುಗಡೆ ಮಾಡಬೇಕೆಂದು ನ್ಯಾಯಲಯ ಆದೇಶದ ಪ್ರಕಾರ ವಶಪಡಿಸಿಕೊಂಡ ಗೋವು ಬಿಡುಗಡೆ ಮಾಡಬೇಕೆಂದು ದಲಿತ ಸೇನೆ ಅಧ್ಯಕ್ಷ ಹಾಗೂ ನ್ಯಾಯವಾದಿ ಹಣುಮಂತ ಯಳಸಂಗಿ ಆಗ್ರಹಿಸಿದ್ದಾರೆ.

ಸೋಮವಾರ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು 2022ರಲ್ಲಿ ಮೊಹ್ಮದ್ ಜಾವೀದ್ ಎಂಬ ರೈತನ ಜಮೀನಿಗೆ ನೂಗ್ಗಿ ವಿಶ್ವ ವಿದ್ಯಾಲಯದ ಪೊಲೀಸರು 26 ಗೋವುಗಳನ್ನು ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಜಪ್ತಿ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಗೋವುಗಳ ಬಂಧಿಸಿರುವ ಕುರಿತು ಜಾವೀದ್ ನ್ಯಾಯಲದ ಮೇಟ್ಟಿಲೇರಿದ್ದು, ನ್ಯಾಯಲದ ಜಾವೀದ್ ಅವರಿಗೆ ಸೇರಿದ ಗೋವುಗಳು ಬೀಡುಗಡೆ ಮಾಡಬೇಕೆಂದು ಒಂದು ತಿಂಗಳ ಹಿಂದೆ ಆದೇಶ ನೀಡಿದೆ. ಒಂದು ತಿಂಗಳಿಂದ ವಿಶ್ವ ವಿದ್ಯಾಲಯದ ಪೊಲೀಸರಿಗೆ ಆದೇಶ ಪತ್ರ ನೀಡಿ ಗೋವು ಬಿಡುಗಡೆಗೆ ಮಾಡುವಂತೆ ಕೇಳಿದ್ದಾಗ ಗೋವು ಶಾಲೆಗೆ ರವಾನಿಸಿರುವ ಬಗ್ಗೆ ತಿಳಿಸಿದ್ದಾರೆ.

ಗೋವು ಶಾಲೆಗೆ ಕೇಳಿದರೆ ಗೋವುಗಳು ಸತ್ತಿವೆ 5 ಗೋವುಗಳು ಮಾತ್ರ ಉಳಿದಿವೆ ಎಂದು ಸುಳ್ಳು ನೆಪವನ್ನು ನೀಡುತ್ತಿದ್ದಾರೆ. ಗೋವುಗಳು ಸತ್ತಿವೆ ಎಂದಾದರೆ ಅವುಗಳ ವರಿ ನ್ಯಾಯಲಯಕ್ಕೆ ನೀಡಿಲ್ಲ. ಗೋವುಗಳನ್ನು ಪೊಲೀಸರು ಮತ್ತು ಗೋವು ಶಾಲೆಯವರು ಕಸಾಯಿ ಖಾನೆಗೆ ಮತ್ತು ಬೆರೆ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಲದ ಆದೇಶದಂತೆ ವಶಪಡಿಸಿಕೊಂಡ ಗೋವುಗಳನ್ನು ಪತ್ತೆ ಹಚ್ಚಿ ಬಿಡಗಡೆ ಮಾಡಬೇಕು ಇಲ್ಲಾಂದ್ರ ಪೊಲೀಸರ ವಿರುದ್ಧ ನ್ಯಾಯಲದ ತೀರ್ಪು ಉಲ್ಲಂಘಿಸಿರುವ ಪ್ರಕರಣ ದಾಖಲಿಸಿ ರೈತನಿಗೆ ನ್ಯಾಯ ಒದಗಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆ ದಲಿತ ಸೇನೆಯ ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here