ಕಸಾಪದಿಂದ ಭಾಷೆ-ಸಂಸ್ಕøತಿ-ಕಲೆಯ ಸಂಭ್ರಮದ `ಸಂಸ್ಕøತಿ ವೈಭವ

0
21

ಕಲಬುರಗಿ: ಇಂದು ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗುವ ಮೂಲಕ ನಮ್ಮ ಮೂಲ ದೇಶೀಯ ಸಂಸ್ಕøತಿ ಮರೆಯಾಗುತ್ತಿದೆ. ನಮ್ಮ ಭಾರತೀಯ ಸಾಂಸ್ಕøತಿಕ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ವೈದ್ಯ ಚಿಂತಕಿ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ ಭಾಷೆ-ಸಂಸ್ಕøತಿ-ಕಲೆಯ ಸಂಭ್ರಮದ `ಸಂಸ್ಕøತಿ ವೈಭವ-2023′ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನು ತನ್ನ ಜೀವನದಲ್ಲಿ ಸಂಸ್ಕøತಿಯನ್ನು ಮೈಗೂಡಿಸಿಕೊಂಡರೆ ಸುಸಂಸ್ಕøತನಾಗುತ್ತಾನೆ. ಹಾಗಾಗಿ ಇಂದಿನ ಯುವ ಪೀಳಿಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ನಾಗರೀಕನಾಗಬೇಕೆಂದು ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳು ಸಹಬಾಳ್ವೆಯ ಪ್ರತೀಕವಾಗಿವೆ. ಎಲ್ಲೆಡೆ ಶಾಂತಿ, ಸ್ನೇಹ, ವಿಶ್ವಾಸ ನೆಲೆಸಲು ಕನ್ನಡ ಭಾಷೆ ಸಹಕಾರಿಯಾಗಿದೆ. ಕನ್ನಡ ಭಾಷೆ ಬರೀ ನುಡಿಯಲ್ಲ, ಅದು ನಮ್ಮೆಲ್ಲರ ಜೀವನಾಡಿಯಾಗಿದೆ. ಹಾಗಾಗಿ, ಭಾಷೆ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕøತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಸಾಂದರ್ಭಿಕವಾಗಿ ವಿಶೇಷ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ಛಾಪು ಮೂಡಿಸಲಾಗುತ್ತಿದೆ ಎಂದರು.

ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿ, ಅಪಾರ ಸಾಹಿತ್ಯ ಸಂಪತ್ತು ಹೊಂದಿರುವ ದೇಶ ನಮ್ಮದು. ಭವ್ಯ ಇತಿಹಾಸ, ಪರಂಪರೆ, ಕಲೆ, ಸಂಸ್ಕøತಿ, ಅನೇಕತೆಯಲ್ಲಿ ಏಕತೆಯ ಪರಿಚಯ ನಮಗೆ ಸಾಹಿತ್ಯದಿಂದ ಮಾತ್ರ ಆಗುತ್ತದೆ. ಇಂಥ ಸಾಹಿತ್ಯದ ಮೌಲ್ಯಗಳೇ ನಮ್ಮ ಮಕ್ಕಳು ಓದುವ ಶಿಕ್ಷಣದಲ್ಲಿರಬೇಕಾದ ಅನಿವಾರ್ಯತೆ ಇಂದು ಇದೆ. ಇಂದಿನ ಮಕ್ಕಳು ತಮ್ಮ ಅಂಕ ಗಳಿಕೆಗೆ ಮಾತ್ರ ಪ್ರಾಶಸ್ತ್ಯವನ್ನು ನೀಡದೇ, ಮನಷ್ಯತ್ವಕ್ಕೆ ಮತ್ತು ಸಾಮಾಜಿಕ ಚಿಮತನೆಗೆ ಹೆಚ್ಚಿನ ಆದ್ಯತೆ ಕೊಡಬೇಕಾದುದು ಅವಶ್ಯವಿದೆ ಎಂದರು.

ಶ್ರೀನಿವಾಸ ಸರಡಗಿಯ ಶ್ರೀ ಅಪ್ಪಾರಾವ ದೇವಿ ಮುತ್ಯಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಇಂದಿನ ಮಕ್ಕಳಿಗೆ ಸಂಸ್ಕøತಿ, ಸಂಸ್ಕಾರ ಕಲಿಸುವ ಕೆಲಸ ಆಗಬೇಕಿದೆ. ಪೋಷಕರು ಈ ನಿಟ್ಟಿನಲ್ಲಿ ಗಂಭಿರವಾಗಿ ಯೋಚನೆ ಮಾಡಬೆಕು. ಮಕ್ಕಳನ್ನು ಸಾಂಸ್ಕøತಿಕವಾಗಿ ಬೆಲೆಸಲು ಪಣ ತೊಡಬೇಕೆಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ದೇವಯ್ಯಾ ಗುತ್ತೇದಾರ, ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ, ಪ್ರತಿಭಾನ್ವಿತ ಬಸವಪ್ರಭು ಮುಡುಬಿ ಮಾತನಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳದ ಶಿವರಾಜ ಎಸ್ ಅಂಡಗಿ, ಯಶ್ವಂತರಾಯ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಡಾ. ಕೆ.ಗಿರಿಮಲ್ಲ, ಹಣಮಂತ ಅಟ್ಟೂರ, ಗೀತಾ, ಶಕುಂತಲಾ ಪಾಟೀಲ, ಧರ್ಮಣ್ಣಾ ಹೆಚ್. ಧನ್ನಿ, ಬಸ್ವಂತರಾಯ ಕೋಳಕೂರ, ಜಗದೀಶ ಮರಪಳ್ಳಿ, ವಿಶ್ವನಾಥ ತೊಟ್ನಳ್ಳಿ, ಸಿದ್ಧಾರಾಮ ಹಂಚನಾಳ, ಸುರೇಶ ದೇಶಪಾಂಡೆ, ಎಸ್.ಕೆ.ಬಿರಾದಾರ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಪ್ರಭುಲಿಂಗ ಮೂಲಗೆ, ಮಲ್ಲಿನಾಥ ಸಂಗಶೆಟ್ಟಿ, ರಾಘವೇಂದ್ರ, ರವಿ ಶಹಾಪೂರಕರ್, ಶಿವಶರಣ ಹಡಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸಮಾಜದ ವಿವಿಧ ಕ್ಷೇತ್ರದ ಪ್ರಮುಖರಾದ ಎಂ.ಬಿ.ನಿಂಗಪ್ಪ, ಭಾನುಕುಮಾರ ಗಿರೇಗೋಳ, ಮಹೇಶ ಚಿಂತನಪಳ್ಳಿ, ದಯಾನಂದ ಹೊಸಮನಿ ಕಾಳಗಿ, ಶರಣಬಸಪ್ಪ ಕಟ್ಟಿಮನಿ, ಶರಣರೆಡ್ಡಿ ನಾಗರೆಡ್ಡಿ, ಕಲ್ಯಾಣಪ್ಪ ವಾಗ್ಧರ್ಗಿ, ಅನೀಲಕುಮಾರ ಮುಗಳಿ, ಮಹಾಂತೇಶ ರೋಢಗಿ, ಸಂಗನಬಸಯ್ಯಾ ಸಾಲಿಮಠ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ನಗರದ ಡಾನ್ ಬಾಸ್ಕೋ ವಸತಿ ನಿಲಯ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಂಸ್ಕøತಿ ಸೌರಭ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here