ಶಹಾಬಾದ: ಸರಿಯಾದ ತಿಳುವಳಿಕೆ ಇಲ್ಲದೆ ಯಾವುದೇ ಅಪಾಯಕಾರಿ ವಸ್ತುಗಳನ್ನು ಬಳಸಿದರೆ ಅಪಾಯ ತಪ್ಪಿದ್ದಲ್ಲ. ವಿಶೇಷವಾಗಿ ಮಹಿಳೆಯರು ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಗಳನ್ನು ಬಳಸಿ ನಿತ್ಯವೂ ಕೆಲಸ ಮಾಡುತ್ತಿರುತ್ತಾರೆ ಅವರಿಗೆ ಅದರ ಸರಿಯಾದ ಬಳಕೆಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಇದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಆಪರೇಟರ್ ಸೋಮನಾಥ ಹೇಳಿದರು.
ಅವರು ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚಿತ್ತಾಪೂರದ ಗುರು ಗ್ಯಾಸ್ ಏಜೆನ್ಸಿಯ ಎಲ್ ಪಿಜಿ ಸೇಪ್ಟಿ ಕ್ಲಿನಿಕ್ ವತಿಯಿಂದ ಹಮ್ಮಿಕೊಂಡಿದ್ದ ಇಂದನದ ಉಳಿತಾಯ ಮತ್ತು ಸುರಕ್ಷಿತ ಬಳಕೆಯ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದರು.
ದಿನನಿತ್ಯ ದೇಶದಲ್ಲಿ ಒಂದಿಲ್ಲ ಒಂದು ಕಡೆ ಗ್ಯಾಸ್ sಸ್ಫೋಟದ ದುರಂತಗಳು ನಡೆಯುತ್ತಿವೆ. ನಮ್ಮ ಅಜಾಗರುಕತೆಯಿಂದ ಅಥವಾ ತಿಳುವಳಿಕೆಯ ಕೊರತೆಯಿಂದ ಇಂತಹ ಅವಗಢಗಳು ಸಂಭವಿಸುತ್ತಿವೆ. ಆದ್ದರಿಂದ ವಿಧ್ಯಾರ್ಥಿನಿಯರು ಈ ಹಂತದಲ್ಲಿಯೇ ಸೂಕ್ತ ತಿಳುವಳಿಕೆ ಪಡೆದರೆ ಹೆಚ್ಚು ಅನುಕೂಲ ಹಾಗೂ ನಿಮ್ಮ ಪಾಲಕರಿಗೆ ಹೇಳಿ ಎಂದರು. ಗ್ಯಾಸ್ ಬಳಕೆ ಹಾಗೂ ಸುರಕ್ಷತೆಯ ವಿಧಾನಗಳನ್ನು ಪ್ರಾತ್ಯಕ್ಷಿಕತೆ ಮೂಲಕ ತಿಳಿಸಿಕೊಟ್ಟರು.ಮತ್ತು ಮಕ್ಕಳ ಹಾಗೂ ಶಿಕ್ಷಕರ ಸಂದೇಶಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ವಿಧ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಶಿವಕುಮಾರ ಸರಡಗಿ, ಸುಗುಣಾ ಕೋಳ್ಕೂರ, ಭುವನೇಶ್ವರಿ.ಎಂ, ರಾಧಾ ರಾಠೋಡ, ಮಂಜುಳಾ ಪಾಟೀಲ, ಭಾರತಿ ಪರೀಟ, ಜ್ಯೋತಿ ತೆಗನೂರ ಉಪಸ್ಥಿತರಿದ್ದರು.