ಶಹಾಬಾದ: ಅಹಿಂಸಾ ಮಾರ್ಗವೇ ಭಾವೈಕ್ಯತೆ ಮತ್ತು ಭಾತೃತ್ವಕ್ಕೆ ಪ್ರೇರಣೆ.ಶತಮಾನಗಳಿಂದÀ ದಾಸ್ಯದಿಂದ ಬಳಲಿದ ಭಾರತಕ್ಕೆ ಮಾಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯ ಗಳಿಸಿದ ಪ್ರಪಂಚದ ಏಕೈಕ ರಾಷ್ಟ್ರ ಭಾರತ ಎಂದು ನಗರಸಭೆಯ ಪೌರಯುಕ್ತೆ ಪಂಕಜಾ ಹೇಳಿದರು.
ಅವರು ಮಂಗಳವಾರ ನಗರಸಭೆಯ ಕಚೇರಿಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದಲ್ಲಿ ಭ್ರಷ್ಟಾಚಾರ,ಅನೈತಿಕತೆಗಳು ತಾಂಡವವಾಡುತ್ತಿದ್ದು ಇದನ್ನು ತೊಲಗಿಸಿ ಮಾನವೀಯ ಗುಣಗಳನ್ನು ಬೆಳೆಸಬೇಕು.ಅನ್ಯಾಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.
ಗಣ್ಯರಾದ ಡಾ.ರಶೀದ್ ಮರ್ಚಂಟ, ಸಲೀಮಾಬೇಗಂ,ಹಾಷಮ್ ಖಾನ್, ಕಿರಣ ಚವ್ಹಾಣ,ನಗರಸಭೆಯ ಎಇಇ ಶರಣು ಪೂಜಾರಿ,ಜೆಇ ಸೋಮಪೂರೆ,ವ್ಯವಸ್ಥಾಪಕರಾದ ಶರಣಗೌಡ ಪಾಟೀಲ, ಸಾಯಿಬಣ್ಣ ಸುಂಗಲಕರ್, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ರಘುನಾಥ ನರಸಾಳೆ,ನಾರಾಯಣ ರೆಡ್ಡಿ,ಅನೀಲ ಹೊನಗುಂಟಿಕರ್,ಹುಣೇಶ ದೊಡ್ಡಮನಿ, ಅರುಣ ಜಾಯಿ ಸೇರಿದಂತೆ ಅನೇಕರು ಇದ್ದರು.