ಶಹಾಬಾದ: ಈ ದೇಶದ ಸ್ವಾತಂತ್ರ್ಯ ಬರಿ ಶಾಂತಿ ಮಂತ್ರದ ಹೋರಾಟದಿಂದ ಸಿಕ್ಕಿದೆ ಎಂಬುದು ಪೂರ್ಣ ಸತ್ಯವಲ್ಲ. ಅದಕ್ಕೂ ಮೊದಲು ಅಸಂಖ್ಯ ಜನ ಹೋರಾಟಗಾರರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತ-ಜೀವತರ್ಪಣ ಗೈದಿರುವರೆಂಬುದನ್ನು ಭಾರತೀಯರು ಮರೆಯುವಂತಿಲ್ಲ ಎಂದು ಬಸವರಾಜ ಮತ್ತಿಮಡು ಹೇಳಿದರು.
ಅವರು ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಭಗತ್‍ಸಿಂಗ್, ಚಂದ್ರಶೇಖರ ಆಜಾದ, ಸುಭಾಶ್ಚಂದ್ರಭೋಸರಂತಹ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಬದುಕಿನ ಸಂತೋಷಗಳನ್ನು ತ್ಯಾಗ ಮಾಡಿದರು.ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಇತಿಹಾಸ ಬರೆದರು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ್, ಶಿವಕುಮಾರ ಇಂಗಿನಶೆಟ್ಟಿ, ದಿನೇಶ ಗೌಳಿ,ಮಹಾದೇವ ಗೊಬ್ಬೂರಕರ್, ನಿಂಗಣ್ಣ ಹುಳಗೋಳಕರ್,ಅಪ್ಪಾರಾವ ನಾಗಶೆಟ್ಟಿ ನಾಗರಾಜ ಮೆಲಗಿರಿ, ನಿಂಗಣ್ಣ ಹುಳಗೋಳಕರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಡಿ.ಸಿ.ಹೊಸಮನಿ,ಸಂಜಯ ಕೋರೆ, ಬಸವರಾಜ ಬಿರಾದಾರ, ಚಂದ್ರಕಾಂತ ಸುಬೆದಾರ, ಯಲ್ಲಪ್ಪ ದಂಡಗುಲಕರ್,ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ನೀಲಗಂಗಮ್ಮ ಘಂಟ್ಲಿ, ಶಿವುಗೌಡ ಪಾಟೀಲ, ಮೋಹನ ಹಳ್ಳಿ,ದತ್ತು ಘಂಟಿ ಸೇರಿದಂತೆ ಅನೇಕರು ಇದ್ದರು.