ಜಾನಪದ ಮೌಲ್ಯಗಳಿಂದ  ವ್ಯಕ್ತಿತ್ವ ವಿಕಸನ

0
39

ಕಲಬುರಗಿ: ನಾಡು-ನುಡಿ, ದೇಶಾಭಿಮಾನ, ವ್ಯಕ್ತಿ ಗೌರವ, ಸೌಹಾರ್ಧತೆ, ಗುರು-ಹಿರಿಯರಿಗೆ ಗೌರವಿಸುವ, ಆಚಾರ-ವಿಚಾರ, ಶಾಂತಿ, ಪ್ರೇಮ, ದೇಶದ ಮೂಲ ಸಂಸ್ಕೃತಿ ಹೊಂದಿರುವ ಜನಪದ ಮೌಲ್ಯಗಳನ್ನು ಅಳವಡಿಸಿಕೊಂಡು, ವಿದೇಶಿ ಸಂಸ್ಕೃತಿಯಿಂದ ದೂರ ಸರಿದರೆ  ಉನ್ನತ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.

ನಗರದ ಆಳಂದ ರಸ್ತೆಯ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ಕಜಾಪ ಜಿಲ್ಲಾ ಮತ್ತು ಉತ್ತರ ವಲಯದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಜೆ ಜರುಗಿದ ‘ವಿಶ್ವ ಜಾನಪದ ದಿನಾಚರಣೆ’ಯನ್ನು ಉದ್ಘಾಟಿಸಿ, ಕಲಾವಿದರಿಗೆ ಸತ್ಕರಿಸಿ ನಂತರ ಅವರು ಮಾತನಾಡಿದರು.

Contact Your\'s Advertisement; 9902492681

ಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ ಮಾತನಾಡಿ, ಜಾನಪದ ಪರಂಪರೆಯಲ್ಲಿ ವ್ಯಕ್ತಿ, ದೇಶದ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಅಂಶಗಳಿವೆ. ಪೂರ್ವಜರು ನೀಡಿದ ಭವ್ಯ ಸಂಸ್ಕೃತಿಯನ್ನು  ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಜಾನಪದ ಕಲಾವಿದರಾದ ಶರಣು ಸಾಗನೂರ, ದೇವಿದಾಸ, ಆನಂದ ಪೂಜಾರಿ, ಬಸವರಾಜ್ ಸುತ್ತಾರ ಅವರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಪ್ರಮುಖರಾದ ಬಸವರಾಜ ಹೆಳವಾರ ಯಾಳಗಿ, ರವೀಂದ್ರ ಗುತ್ತೇದಾರ, ಚಂದ್ರಶೇಖರ ಹರವಾಳ, ರಾಮದಾಸ ಪಾಟೀಲ, ಪದ್ಮಣ್ಣ ವಗ್ಗೆ,ಜಿತೇಂದ್ರ ಸಿಂಗ್ ಠಾಕೂರ, ಅಮೃತ ನಾಯಕ, ರವಿಕುಮಾರ ಗೋಲಗೇರಿ, ದತ್ತತ್ರಾಯ ಸಾಬಣಿ, ಸೂರ್ಯಕಾಂತ ಸಾವಳಗಿ, ಸಿದ್ರಾಮಪ್ಪ ಮಾಲಿ ಬಿರಾದಾರ, ಅಣವೀರ ಬಿರಾದಾರ, ಜಾನಪದ ಕಲಾವಿದ ರಾಜು ಹೆಬ್ಬಾಳ, ವಿನೋದಕುಮಾರ ಪಡನೂರ, ಬಾಲಾಜಿ ರುದ್ರವಾಡಿ, ಶ್ರೀಶೈಲ ಪಾಟೀಲ ಗದಲೆಗಾಂವ, ಮಲ್ಲಿನಾಥ ಮುನ್ನೋಳಿ, ಯಲ್ಲಪ್ಪ ಬೈರಾಮಡಗಿ, ವೀರಯ್ಯ ಹಿರೇಮಠ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಜಾಪ ಉತ್ತರ ವಲಯದ ಅಧ್ಯಕ್ಷ ಹಣಮಂತರಾಯ ಎಸ್.ಅಟ್ಟೂರ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು. ಚಂದ್ರಕಾಂತ ತಳವಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here