ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಬಂಧುಗಳ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಅಂಗವಾಗಿ ಅ.೧೯ರಿಂದ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ಕಾಲ ೪೩ನೇ ವರ್ಷದ ಶ್ರೀ ದೇವಿ ಪಾರಾಯಣ ಧಾರ್ಮಿಕ ಕಾರ್ಯಕ್ರಮ ನಾಳೆ ಸೋಮವಾರ ಅ.೨೩ರಂದು ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಗ್ರಾಮದ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗುರುಗಳಾದ ಮಹಾಂತಸ್ವಾಮಿ ಮಮ್ಮಸಪೇಠ ಅವರು ಸಾನಿಧ್ಯ, ಕೊಟ್ರಯ್ಯ ಸ್ವಾಮಿ ಬಳೂಂಡಗಿಮಠ ಅಧ್ಯಕ್ಷತೆ ವಹಿಸುವರು. ಗದಗ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಶಿವಯೋಗಿ ಲಿಂ. ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಶ್ರೀ ವೇದಮೂರ್ತಿ ಕರಬಸಯ್ಯ ಶಾಸ್ತ್ರೀಗಳು ಹಿರೇಮಠ ಕಾಡನಾಳ ಅವರು ಪುರಾಣ ಪ್ರವಚನ ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ರತ್ನಾಕರ ಕೆ.ಬಣಗಾರ ಸಂಗೀತ, ಕಿರಣಕುಮಾರ ಸಿಂಪಿ ತಬಲಾ ಸಾಥ ನೀಡಿದ್ದಾರೆ.
ಬೆಳಿಗ್ಗೆ ಮಹಾನವಮಿಯ ವಿಶೇಷ ಖಂಡೆಪೂಜೆ, ಬನ್ನಿ ಮಹಾಂಕಾಳಿಗೆ ಹಾಗೂ ಮುತೈದೆಯರಿಗೆ ಉಡಿತುಂಬವುದು, ಪಾರಾಯಣ ಮಹಾಮಂಗಲ ನಡೆಯಲಿದೆ. ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ನಡೆಯುತ್ತದೆ. ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಬಣಗಾರ ಬಂಧುಗಳು ಮನವಿ ಮಾಡಿದ್ದಾರೆ.