ನಮ್ಮೊಳಗಿನ ದೇವರನ್ನು ಕಾಣುವ ದಾರಿ ತೋರಿದ ಮಹಾನ್ ಗುರು ಬಸವಣ್ಣ

0
62

ಶಹಾಬಾದ: ನಮ್ಮೊಳಗಿನ ಆತ್ಮ ಚೈತನ್ಯವೇ ದೇವರೆಂದು ತಿಳಿಸಿ ಇತರರಲ್ಲೂ ದೇವರನ್ನು ಕಾಣುವ ದಾರಿ ತೋರಿದ ಮಹಾನ್ ಗುರು ಎಂದರೆ ಅಪ್ಪ ಬಸವಣ್ಣನವರು ಎಂದು ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮ ಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹೇಳಿದರು.

ಅವರು ಶನಿವಾರ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರೀ ಬಸವೇಶ್ವರ ಮೂರ್ತಿ ಅನಾವರಣ ಹಾಗೂ ಶ್ರೀ ಬುತ್ತಿ ಬಸವಲಿಂಗೇಶ್ವರ ಪ್ರತಿಷ್ಠಾಪನೆಯ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಬಸವ ತತ್ವ ದರ್ಶನ ಆಧ್ಯತ್ಮಿಕ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಾಡುವ ಕಾರ್ಯದಲ್ಲಿ ಉಚ್ಛ ನೀಚವೆಂಬ ಭಾವನೆಯನ್ನು ತೊಲಗಿಸಿ, ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದವರು ಬಸವಣ್ಣನವರು. ಬಸವಣ್ಣನವರು ಹಾಗೂ ಬಸವಾಧಿ ಶರಣರು ನೀಡಿದ ವಚನಗಳೇ ನಮಗೆ ಸಂವಿಧಾನ. ಬದುಕು ಹೇಗಿರಬೇಕು ಎನ್ನುವುದು ಕುರಿತು ಸರಳವಾಗಿ ವಚನಗಳ ಮೂಲಕ ನಮಗೆಲ್ಲರಿಗೂ ತಿಳಿಸಿದ್ದಾರೆ.ಬಸವಣ್ಣ ಒಬ್ಬ ಲೋಕಸೂರ್ಯವಿದ್ದಂತೆ. ಎಲ್ಲಿ ಸೂರ್ಯನ ಬೆಳಕು ಹೋಗುತ್ತದೆಯೋ ಅಲ್ಲಿ ಕತ್ತಲು ಮಾಯವಾಗುತ್ತದೆ.ಅದೇ ರೀತಿ ಬಸವಣ್ಣ ಇರುವಲ್ಲಿ ಅಜ್ಞಾನ, ಮೂಢನಂಬಿಕೆ ಎಂಬ ಕತ್ತಲೆಗೆ ಜಾಗವಿಲ್ಲ. ಅಲ್ಲಿ ಮೇಲು-ಕೀಳೀಲ್ಲ. ಅಸಮಾನತೆ ಮಾತೇ ಇಲ್ಲ ಎಂದರು.

ಅಂತಹ ಬಸವ ಚಿಂತನೆಯನ್ನು ನಿರಂತರವಾಗಿ ಸುಮಾರು 25 ವರ್ಷಗಳಿಂದ ಶಹಾಬಾದ ನಗರದಲ್ಲಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಕೆಲಸ ಎಂದರು.

ಹಳೆಶಹಾಬಾದ ವಚನೋತ್ಸವ ಸಮಿತಿಯ ಸಂಚಾಲಕರಾದ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಹೊಟ್ಟೆಗೆ ಊಟ ಎಷ್ಟು ಮುಖ್ಯವೋ, ಅಷ್ಟೇ ನೆತ್ತಿಗೂ ಜ್ಞಾನ ಮುಖ್ಯ.ಅಂತಹ ಜ್ಞಾನ ಕಣಜವಾಗಿರುವ ವಚನ ಸಾಹಿತ್ಯವನ್ನು ಬಸವಾದಿ ಶರಣರು ನೀಡಿದ್ದಾರೆ.ಅಪ್ಪ ಬಸವಣ್ಣ ನಮ್ಮ ತಂದೆ ಮತ್ತು ವಚನ ಸಾಹಿತ್ಯವೇ ನಮಗೆ ತಾಯಿ ಎಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ.ನಮ್ಮ ಬದುಕಿನಲ್ಲಿ ಬೆಳಕು ಮತ್ತು ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಬಸವ ಚಿಂತನೆ ಮಾಡುವುದು ಅತಿ ಅವಶ್ಯಕತೆಯಿದೆ ಎಂದು ತಿಳಿಸಿದರು.

ಶಿರಗುಪ್ಪಾದ ಬಸವ ಚಿಂತಕರಾದ ಬಸವರಾಜ ವೆಂಕಟಾಪೂರ ಶರಣರು ಮಾತನಾಡಿ,ಇಂದು ಸಮಾಜದಲ್ಲಿ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆದಿದ್ದು, ಅದರಿಂದ ಹೊರಬರಬೇಕಾದರೆ ಬಸವಣ್ಣನವರ ವಿಚಾರಗಳು ನೆತ್ತಿಯೊಳಗೆ ಪ್ರವೇಶಮಾಡಬೇಕಿದೆ.ವಚನಗಳು ನಮ್ಮ ಬದುಕಿಗೆ ದಾರಿ ದೀಪ. ಶರಣರು ನೀಡಿದ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು, ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಅಂಧಕಾರವನ್ನು ಹೋಗಲಾಡಿಸಲು ಪ್ರಯತ್ನಪಡೋಣ.ಮಕ್ಕಳಿಗೆ ಸಂಸ್ಕಾರಯುತ ಬಸವ ಚಿಂತನೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ ಎಂದರು.ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು.ಉದ್ಯಮಿ ಶರಣಬಸಪ್ಪ ನಂದಿ,ಭಂಕೂರ ಗ್ರಾಪಂ ಸದಸ್ಯರಾದ ಶರಣಗೌಡ ದಳಪತಿ ವೇದಿಕೆಯ ಮೇಲಿದ್ದರು.ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸಿದ್ದರು. ಅಮೃತ ಮಾನಕರ್ ನಿರೂಪಿಸಿ, ವಂದಿಸಿದರು. ರೇವಣಸಿದ್ದಪ್ಪ ಮುಸ್ತಾರಿ ಸ್ವಾಗತಿಸಿದರು.

ಗಣ್ಯರಾದ ಚನ್ನವೀರಪ್ಪ ಪಾಟೀಲ, ಹೆಚ್.ವಾಯ್.ರಡ್ಡೇರ್,ಬಸವ ಸಮಿತಿ ಸದಸ್ಯರಾದ ಅಮರಪ್ಪ ಹೀರಾಳ,ಚಂದ್ರಕಾಂತ ಅಲಮಾ,ಶಿವಪುತ್ರ ಕುಂಬಾರ, ಹಣಮಂತರಾವ ದೇಸಾಯಿ,ತಿಪ್ಪಣ್ಣ ರೆಡ್ಡಿ, ಶಿವರಾಜ ಹಡಪದ,ಮಹಾದೇವ ಮಾನಕರ್,ಶರಣಬಸಪ್ಪ ನಾಗನಳ್ಳಿ,ಸೋಮಶೆಖರ ಉಳ್ಳಾಗಡ್ಡಿ,ಮಹಾಂತೇಶ ವಾಡಿ, ಮಲ್ಲಿಕಾರ್ಜುನ ಘಾಲಿ, ಸುನೀಲ ಭಗತ್, ಸಿದ್ದು ಹರವಾಳ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here