ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಅಭಿಯಾನ; ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ

0
52

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ವ್ಯವಸ್ಥಿತವಾಗಿ ಕಾರ್ಯಾಚರಣೆ ರೂಪದಲ್ಲಿ ಅಭಿಯಾನ ನೆಡೆಸಲು ಕಲ್ಯಾಣ ಕರ್ನಾಟಕ ಪ್ರದೇಶದ ತಜ್ಞರ ಚಿಂತಕರ, ಬುದ್ಧಿಜೀವಿಗಳ ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತುಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತರು ಮತ್ತು ಚಿಂತಕರ ಆದ ಶ್ರೀನಿವಾಸ ಸಿರನೂರಕರ್ ರವರು ಮಾತ್ನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ವಿಶೇಷ ಅಭಿವೃದ್ಧಿಗೆ ಮಂಡಳಿ ರಚನೆಯಾಗಿದೆ ಮೂರು ದಶಕಗಳು ಕಳೆದರೂ ವಿಭಾಗೀಯ ಕೇಂದ್ರ ಕಲಬುರ್ಗಿಗೆ ಕನಿಷ್ಠ ಮೂಲಭೂತ ಸೌಕರ್ಯ ನೀಡಲು ಆಗದೆ ಇರುವುದು ಖೇದಕರವಾದ ಸಂಗತಿ ಎಂದ ಅವರು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಗ್ರಾಮ ಮಟ್ಟದಿಂದ ನಗರಗಳ ವರೆಗೆ ಮೂಲ ಸೌಕರ್ಯ ಒದಗಿಸಲು ಸಮಿತಿಯಿಂದ ಅಭಿಯಾನ ನಡೆಸಲು ಪ್ರತಿಪಾದಿಸಿದರು.ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಸರ್ಕಾರಕ್ಕೆ  ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಒತ್ತಾಯಿಸಬೇಕೆಂದು ಪ್ರೊ .ಆರ್.ಕೆ.ಹುಡಗಿಯವರು ಸಭೆಗೆ ಆಗ್ರಹಿಸಿದರು.

Contact Your\'s Advertisement; 9902492681

ಕೆಕೆಆರ್ ಡಿಬಿಯಿಂದ ದೂರ ದೃಷ್ಟಿಕೋನದ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಕಲ್ಯಾಣದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆಕೆಆರ್ ಡಿಬಿಯ ಅಧ್ಯಕ್ಷರ ಮೇಲೆ ಒತ್ತಡ ತರಲು ಅಗ್ರಹಿಸಿದರು.ಈ ಬಗ್ಗೆ ಆದಷ್ಟು ಶೀಘ್ರ ಮಂಡಳಿಯ ಅಧ್ಯಕ್ಷರ ಜೊತೆ ಸಭೆ ನಡೆಸಿ ಆದಷ್ಟು ಶೀಘ್ರ ಕ್ರಮ ಸಮಿತಿ ಯಿಂದ ನಡೆಸಲು ಸಭೆಗೆ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ ಬೀದರ ಮುತ್ತು ರಾಯಚೂರಿನ ತಜ್ಞರಾದ ರಾಮಣ್ಣ,ವಿನಯ ಮಾಳಗೆ ಯವರು ಮಾತ್ನಾಡಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಯಾವ ಮುಲಾಜಿ ಇಲ್ಲದೆ ಹೋರಾಟಕ್ಕೆ ಹೆಜ್ಜೆ ಇಡಬೇಕು ಎಂದರು.ಸಭೆಯಲ್ಲಿ ಲಿಂಗರಾಜ ಸಿರಗಾಪೂರ,ಡಾ.ಮಾಜಿದ ದಾಗಿ, ವಿಜಯಕುಮಾರ್ ಚಿಮ್ಮುಲಗಿ,ರೌಫ ಖಾದ್ರಿ, ಅಬ್ದುಲ್ ಖದೀರ್,ಡಾ.ದೇವಿದಾಸ ಮಾಲೆ ,ರಾಜೆ ಶಿವಶರಣ,ಸಂತೋಷ  ಜವಳಿ,ಬಿ.ಬಿ.ನಾಯಕ, ಮುತ್ತಣ್ಣ ನಾಡಗೇರಿ, ಬೀಮಶೆಟ್ಟಿ ಮುಕ್ಕಾ, ಅಸ್ಲಂ ಚೌಂಗೆ, ಸೇರಿದಂತೆ ಅನೇಕರು ತಮ್ಮ ವಿಷಯಗಳು ಮಂಡಿಸಿದರು.

ಸರ್ವಾನುಮತದಿಂದ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ನಿರ್ಣಯಗಳು ಮಂಡಿಸಿದ್ದರು ಪ್ರೊ.ಆರ್ ಕೆ.ಹುಡಗಿಯವರು ಅನುಮೋದಿಸಿದರು. ಈ ದುಂಡು ಮೇಜಿನ ಸಭೆಯಲ್ಲಿ ಅಶೋಕ ಗುರೂಜಿ, ವೀರೇಶ ಪುರಾಣಿಕ, ಶಿವಲಿಂಗಪ್ಪ ಭಂಡಕ್,ಎಂ.ಬಿ.ನಿಂಗಪ್ಪ, ಸಾಜಿದ್ ಅಲಿ ರಂಜೋಳ್ವಿ,ಶರಣಬಸಪ್ಪ ಕುರಿಕೂಟಾ,ಬಾಬಾ ಫಕ್ರುದ್ದೀನ್,ಮಲ್ಲಿನಾಥ ಸಂಘಶೆಟ್ಟಿ, ಶಿವಕುಮಾರ್ ಬಿರಾದಾರ, ವಿಶ್ವನಾಥ್ ಪಾಟೀಲ್,ಅಣವೀರಪ್ಪ ಹೆಬ್ಬಾಳ, ಸೋಲೋಮನ್ ದಿವಾಕರ ,ಗಿರೀಶ್ ಗೌಡರು,ಡಾ.ಬಿ.ಎಸ್.ಪಾಟೀಲ್, ಶಿವಶಂಕರ ಬಿರಾದಾರ,ಬ‌ಸವರಾಜ ಚಿಡಗುಂಪಿ,ರಾಜು ಜೈನ್, ಪ್ರಲ್ಹಾದ ಎಂ ಕಲ್ಯಾಣರಾವ ತೊನಸ್ಸಳ್ಳಿ, ಶಿವಾನಂದ ಕಾಂದೆ, ಮಕ್ಬೂಲ್ ಪಟೇಲ್ ಬೀಮಶಾ ಮಡಿವಾಳ, ಮುನ್ನಿ ಬೇಗಂ, ಮುಮ್ತಾಜ್ ಬೇಗಂ,ಸಾಲಿಯಾ ಬೇಗಂ,ಶಿಲಾರಾಣಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಸಭೆಯಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು.
  • ಕಲ್ಯಾಣ ಕರ್ನಾಟಕದ ತಜ್ಞರ ಚಿಂತಕರ ಬುದ್ಧಿಜೀವಿಗಳ ನಿಯೋಗ ಸಮಿತಿಯ ನೇತೃತ್ವದಲ್ಲಿ ಆದಷ್ಟು ಶೀಘ್ರ 371ನೇ ಜೇ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವಿವರವಾಗಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವದು
  • ಕೆಕೆಆರ್ ಡಿಬಿಯ ಅಧ್ಯಕ್ಷರ ಜೊತೆ ಸಭೆ ನಡೆಸಿ ಮಂಡಳಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವದು.
  • ಖಾಲಿ ಇರುವ ಕಲ್ಯಾಣದ ನಮ್ಮ ಪಾಲಿನ ಹುದ್ದೆಗಳ ಭರ್ತಿಗೆ ಮತ್ತು ಸಕಾಲದಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮುಂಬಡ್ತಿಗಳು ನೀಡಲು ಒತ್ತಾಯಿಸುವುದು5) ಗುಲಬರ್ಗಾ ವಿಶ್ವವಿದ್ಯಾಲಯದ ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ವಿವಿ ಆಡಳಿತದೊಂದಿಗೆ ಚರ್ಚಿಸಿ ಮುಂದಿನ ರೂಪುರೇಷೆಗಳು ಹಮ್ಮಿಕೊಳ್ಳುವುದು.
  • ಕಲ್ಯಾಣ ಕರ್ನಾಟಕದ ಪ್ರಮುಖ ಬೇಡಿಕೆಗಳು ಸೇರಿದಂತೆ ಕಾರ್ಯಾಚರಣೆ ರೂಪದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆದಷ್ಟು ಶೀಘ್ರ ಸಮಿತಿಯಿಂದ ಪಾದಯಾತ್ರೆ ನೆಡೆಸಲು ನಿರ್ಧಾರ.
  • ಹೊಸ ರೈಲುಗಳ ಚಲಾವಣೆಗೆ ಸಮಿತಿಯಿಂದ ಸಂಬಂಧಪಟ್ಟವರ ಮೇಲೆ ಬಲವಾದ ಒತ್ತಡ ತರಲು ನಿರ್ಧಾರ.
  • ವಿಶೇಷ ಸ್ಥಾನಮಾನ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ, ಅನುಷ್ಠಾನ ಸಮಿತಿ ಇಲ್ಲವೆ ಆಯೋಗ ಅಸ್ತಿತ್ವಕ್ಕೆ ತರಲು ಸರ್ಕಾರದ ಮೇಲೆ ಮೊದಲನೇ ಹಂತವಾಗಿ ಒತ್ತಡ ತಂದು ಹೋರಾಟಕ್ಕೆ ಮುಂದಾಗಲು ನಿರ್ಧಾರ.ಎಲ್ಲರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here