ಸಂವಿಧಾನ ಜಾಗೃತಿ-ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

0
19

ವಾಡಿ: ಸರ್ಕಾರಿ ಅಧಿಕಾರಿಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಶಾಲಾ ಹಂತದಲ್ಲೇ ಕಠಿಣ ಅಭ್ಯಾಸ ಅತ್ಯಗತ್ಯ ಎಂದು ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ವಾಡಿ ಕ್ಲಸ್ಟರ್ ಸಿಆರ್‍ಪಿ ಸೂರ್ಯಕಾಂತ ದಿಗ್ಗಾಂವ ಹೇಳಿದರು.

ಪಟ್ಟಣದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಜಾಗೃತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Contact Your\'s Advertisement; 9902492681

ಶಿಕ್ಷಣ ಎಂಬುದು ಬದುಕಿನ ಭವಿಷ್ಯ ಬರೆಯುವ ಜ್ಞಾನದ ಅಸ್ತ್ರವಾಗಿದೆ. ಶಾಲಾ ದಿನಗಳಲ್ಲಿ ಕಾಲಹರಣ ಮಾಡದೆ ಕಷ್ಟಪಟ್ಟು ಅಭ್ಯಾಸ ಮಾಡಬೇಕು. ಹತ್ತನೇ ಪರೀಕ್ಷೆಗಳಲ್ಲಿ ಪಡೆಯುವ ಉತ್ತಮ ಅಂಕಗಳು ಉನ್ನತ ಶಿಕ್ಷಣದ ಭವಿಷ್ಯ ನಿರ್ಧರಿಸುತ್ತವೆ. ಐಎಎಸ್. ಕೆಎಎಸ್, ಐಪಿಎಸ್ ಅಧಿಕಾರಿಯಾಗುವ ಗುರಿ ಹೊಂದುವುದು ತಪ್ಪಲ್ಲ. ಪ್ರಯತ್ನಪಟ್ಟರೆ ಯಶಸ್ಸು ಸಾಧಿಸಲು ಯಾವ ಗುರಿಯೂ ಕಷ್ಟವಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬೇಡ್ಕರ್ ಪ್ರಶಸ್ತಿ ಪುರಸ್ಕøತ ಮುಖ್ಯಶಿಕ್ಷಕ ಬಸವರಾಜ ಹೊಸಮನಿ, ನಮ್ಮ ನಮ್ಮ ಧರ್ಮಗಳ ಗ್ರಂಥಗಳು ಭಿನ್ನವಾಗಿದ್ದರೂ ಸಂವಿಧಾನ ಎಂಬುದು ಅಖಂಡ ಭಾರತೀಯರ ಪಾಲಿನ ಜ್ಞಾನ ಗ್ರಂಥವಾಗಿದೆ. ನಾವೆಲ್ಲರೂ ಅಂಬೇಡ್ಕರರು ನೀಡಿದ ಜಾತ್ಯಾತೀತ ಚಿಂತನೆಯ ಹಾಗೂ ಸರ್ವ ಸಮಾನತೆಯ ಸಿದ್ಧಾಂತ ಬೋಧಿಸುವ ಸಂವಿಧಾನದಡಿಯೇ ಕೋಮು ಸೌರ್ಹಾಧತೆಯಿಂದ ಬದುಕಬೇಕಿದೆ. ಶೋಷಿತರು, ದಲಿತರು, ಹಿಂದುಳಿದವರು ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಂವಿಧಾನದಲ್ಲಿ ಹಕ್ಕುಗಳನ್ನು ಕಲ್ಪಿಸಲಾಗಿದೆ. ತುಳಿತಕ್ಕೊಳಗಾದ ಜನರ ಶಕ್ತಿಯಾಗಿ ಕಾನೂನುಗಳು ರೂಪುಗೊಂಡಿವೆ. ಸಂವಿಧಾನದ ಹಕ್ಕು ಕರ್ತವ್ಯಗಳ ಪರಿಚಯ ವಿದ್ಯಾರ್ಥಿಗಳಿಗಾಗಬೇಕು ಎಂಬ ಕಾರಣಕ್ಕೆ ರಮಾಬಾಯಿ ಅಂಬೇಡ್ಕರ್ ಶಾಲೆಯಲ್ಲಿ ಪ್ರತಿವರ್ಷ ಸಂವಿಧಾನ ಆಶಯಗಳಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.

ಶಿಕ್ಷಕರಾದ ಆಶಾಲತಾ, ಶೈಲಜಾ ಬಿರಾದಾರ, ಉದಯಶ್ರೀ, ಮಲ್ಲಿನಾಥ ಸಿಂಘೆ, ಸಿಬ್ಬಂದಿ ಲೋಕಪ್ಪ ಹೊಸಮನಿ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಚಿದಾನಂದ ಮಠಪತಿ ನಿರೂಪಿಸಿ, ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿನಿಯರಾದ ಸುವರ್ಣಾ, ಸಂಪತ್ತಕುಮಾರಿ, ಸುನಿತಾ, ಶೀತಲ್, ಸರಿತಾ, ಭಾಗ್ಯಶ್ರೀ, ಕಾವೇರಿ, ತಸ್ಮೀಯಾ, ಅಂಬಿಕಾ ಆರ್ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಿಆರ್‍ಪಿ ಸೂರ್ಯಕಾಂತ ದಿಗ್ಗಾಂವ ಹಾಗೂ ಪತ್ರಕರ್ತ ಮಡಿವಾಳಪ್ಪ ಹೇರೂರ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here