ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ : ಜನಾಬ ಮುಹಮ್ಮದ ಸಯ್ಯದ್ ಅಲಿ ಅಲ್ ಹುಸ್ಸೇನಿ

0
66

ಕಲಬುರಗಿ : ಆಟದಲ್ಲಿ ಸೋಲು ಗೆಲುವು ಮಹತ್ವದಲ್ಲ ಭಾವಹಿಸುವಿಕೆ ಗೆಲುವಿನ ಸೋಪಾನವಾಗುತ್ತದೆ ಎಂದು ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ ಸಾಹೇಬ ನುಡಿದರು.

ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ 2023ನೇ ಸಾಲಿನ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

Contact Your\'s Advertisement; 9902492681

ಅವರು ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರನ್ನು ಶ್ಲಾಘಿಸಿದರು. ವಿಶೇಷವಾಗಿ ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಬಹುದು ಎಂದರು. ಅವರು ಎಲ್ಲಾ ವಿದ್ಯಾರ್ಥಿಗಳಿಗೆ, ಸಂಘಟನಾ ಸಮಿತಿಯ ಸದಸ್ಯರಿಗೆ ಮತ್ತು ಅಧ್ಯಾಪಕರಿಗೆ ಅವರ ಗೌರವಾನ್ವಿತ ಕುಲಪತಿಗಳಾದ ಡಾ ಸೈಯದ್ ಶಾ ಖುಸ್ರೋ ಹುಸೇನಿ ಸಾಹೇಬ್ ಅವರ ಪರವಾಗಿ ಅಭಿನಂದಿಸಿದರು.

ಗೌರವಾನ್ವಿತ ಉಪಕುಲಪತಿಗಳಾದ ಪ್ರೊ ಅಲಿ ರಜಾ ಮೂಸ್ವಿ ಭಾಷಣದಲ್ಲಿ ಸ್ಫೂರ್ತಿಯ ಮಾತುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ರೂಪಿಸುವಲ್ಲಿ ಇಂತಹ ಘಟನೆಗಳ ಮಹತ್ವವನ್ನು ಸಾರಿದರು. ಅವರು ವಿದ್ಯಾರ್ಥಿಗಳ ಸಮರ್ಪಣೆ, ಸ್ಥಿತಿಸ್ಥಾಪಕತ್ವ ಮತ್ತು ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ವ್ಯಕ್ತಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಪೋಷಿಸುವಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಮಹತ್ವ ಎಂದು ಅಭಿಪ್ರಾಯಪಟ್ಟರು.

ಅಲ್ಲದೇ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸಂತೋಷ, ಸ್ಪರ್ಧಾಗುಣ ಮತ್ತು ಒಗ್ಗಟ್ಟಿನ ವಾತಾವರಣ ನಿರ್ಮಿಸಲು ಸಹಕಾರಿ ಎಂದರು.ಈ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧೆಗಳ ವಿಜೇತರಿಗೆ, ಪ್ರಮಾಣಪತ್ರ, ಪ್ರಶಸ್ತಿ ಮತ್ತು ಟ್ರೋಫಿಗಳನ್ನು ನೀಡಲಾಯಿತು. ಮೆಡಿಕಲ ನಿಕಾಯ ಜನರಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಸಯ್ಯದ್ ಮೆಹ್ಮುದ್ ಪ್ರಾರ್ಥಿಸಿದರೆ, ವಿದ್ಯಾರ್ಥಿ ಕಲ್ಯಾಣ ಡೀನ ಡಾ ನಜಿರ್ ಅಹ್ಮದ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ ಜಿಬ್ರಾನ್ ಮತ್ತು ಡಾ ಸನಾ ಇಜಾಜ ನಿರೂಪಿಸಿದರೆ ಡಾ. ಬಿಲಾಲ ವಂದಿಸಿದರು.

ಕೆಬಿಎನ್ ವಿವಿಯ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಲಸಚಿವೆ ಡಾ. ರುಕ್ಸರ್ ಫಾತಿಮಾ, ಮೆಡಿಕಲ ಡೀನ ಡಾ ಸಿದ್ದೇಶ್, ಇಂಜಿನಿಯರಿಂಗ ಡೀನ ಮೊಹಮ್ಮದ ಅಜಾಮ, ಕಲಾ,ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಮತ್ತು ವಿಜ್ಞಾನ, ಶಿಕ್ಷಣ, ಕಾನೂನು ಡೀನ ಡಾ ನಿಶಾತ ಆರೀಫ್ ಹುಸೇನಿ, ಪ್ರೊ ಪಠಾನ, ಡಾ ರಾಧಿಕಾ, ಡಾ ಜಮಾ ಮೂಸ್ವಿ ಹಾಗೂ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here