ಸೇಡಂ; ರಾಷ್ಟ್ರೀಯ ದಂತ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಸರ್ಕಾರಿ ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ ಸೇಡಂ ಇವರಗಳ ಸಂಯುಕ್ತಾಶ್ರಯದಲ್ಲಿ. ಊಡಗಿ ಉಪ ಕೇಂದ್ರದಲ್ಲಿ ಆಯೋಜಿಸಲಾದ ಉಚಿತ ಬಾಯಿಯ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ , ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಕುಮಾರ ಬಾಂಜಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ನಮ್ಮ ಗ್ರಾಮದವರು ಆರೋಗ್ಯ ಇಲಾಖೆ ನಡೆಸಿಕೊಡುವ ಉಚಿತ ಆರೋಗ್ಯ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳ ಬೇಕೆಂದು ಹೇಳಿದರು.
ಜಿಲ್ಲಾ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಸಂಜೀವ್ ಪಾಟೀಲ್ ಹಾಗೂ ಸರ್ಕಾರಿ ಸಾರ್ವಜನಿಕ ಎನ್ ಓ ಹೆಚ್ ಪಿ ಅಧಿಕಾರಿಗಳು ಡಾ. ಸಂಧ್ಯಾ ಕಾನೇಕರ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಕಾರಿಗಳಾದ ಡಾ. ನಾಗರಾಜ್ ಮನ್ನೆ, ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಮಳಖೇಡ, ಡಾ. ರಾಕೇಶ್ ಕಾಂಬ್ಳೆ ಕೋಡ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ, ಡಾ. ಶ್ವೇತಾ ದೇವದುರ್ಗ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇಡಂ, ಡಾ. ಕಹಕಶಾನ್, ಮಳಖೇಡ ಸಮುದಾಯದ ಆರೋಗ್ಯ ಕೇಂದ್ರ ವೈದ್ಯರು ಡಾ.ರಾಕೇಶ್ವರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸೇಡಂನ ಪ್ರೀತಿ ಭದ್ರ , ಅವರು ವೇದಿಕೆ ಮೇಲೆ ಇದ್ದರು. ಹಾಗೆ ಪ್ರಮುಖರಾದ ಮಾಜಿ ಗ್ರಾಮ ಅಧ್ಯಕ್ಷರಾದ ಹಣಮಂತ ಬೆನಕನಹಳ್ಳಿ, ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನಿ ಉಮೇಶ್ ತೆಲ್ಕೂರ್ ಸೇರಿದಂತೆ ಅನೆಕರು ಇದ್ದರು.
ಕಾರ್ಯಕ್ರಮವನ್ನು ಜ್ಯೋತಿ ಲಿಂಗಂಪಲ್ಲಿ ನಿರೂಪಿಸಿದರು. ಚನ್ನಬಸಪ್ಪ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಹಾಗೂ ಕೋಡ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರು.