ಕಲಬುರಗಿ: ಹಣ, ಆಸ್ತಿ ತೋರಿಕೆಯ ಸಂಪತ್ತು. ಆರೋಗ್ಯವೇ ನಿಜವಾದ ಸಂಪತ್ತಾಗಿದೆ ಎಂದು ಯುನಿಕಾರ್ನ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯರಾದ ಡಾ. ಅಬ್ದುಲ್ ಖಾದರ್ ಜಿಲಾನಿ ಹೇಳಿದರು.
ಭಾನುವಾರ ನಗರದ ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಹಾಗೂ ಯುನಿಕಾರ್ನ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ ಮೇಘಾ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಣ, ಆಸ್ತಿ ಹಳೆದು ಹೋದರೆ ಮತ್ತೆ ಮತ್ತೆ ಪಡೆಯಬಹುದು. ಆದರೆ ಆರೋಗ್ಯ ಎಂಬ ಸಂಪತ್ತು ಒಂದುಬಾರಿ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ. ಹಣ ಮತ್ತು ಆಸ್ತಿಗೆ ನೀಡುವ ಪ್ರಾಮುಖ್ಯತೆ ಆರೋಗ್ಯ ನೀಡಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್, ಮಕ್ತಬ್ ಆಲ್ ಫಿರದೋಸ್ ಮದರಸಾದ ಸಂಚಾಲಕ ಹಾಜಿ ಶೇಖ ಚಾಂದ್ ಸಾಬ್, ಬಾಬಾ ಬೈ ಪೆಂಟರ್, ಹಸನ್ ಅಲಿ ಸುಲ್ತಾನಪುರಿ, ಮೊಹಮ್ಮದ್ ಅಕ್ರಮ್, ಎಂ.ಡಿ ಇಮ್ರಾನ್, ಮೊಹಮ್ಮದ್ ನವಾಬ್, ಶೌಕತ್ ಅಲಿ ಖಾನ್, ಜಿಲಾನಿ ಸೇರಿದಂತೆ ಹಲವಾರು ಇದ್ದರು.