ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಜರುಗಲಿ

0
18

ಶಹಾಪುರ: ಪ್ರಸ್ತುತ ತಂತ್ರಜ್ಞಾನದ ದಿನಮಾನಗಳ ಒತ್ತಡ ಬದುಕಿನಲ್ಲಿ ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದ ಓರೆ ಕೋರೆಗಳನ್ನು ತಿದ್ದುವಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿ ಎಂದು ಹಿರಿಯ ಮುಖಂಡರಾದ ಸಿದ್ಧಲಿಂಗಣ್ಣ ಆನೆಗುಂದಿ ಹೇಳಿದರು.

ನಗರದ ಶ್ರೀಮತಿ ಸುಮಿತ್ರಾ ಪತ್ತಾರ ಸ್ಮಾರಕ ರಂಗಮಂದಿರದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಟ್ರಸ್ಟ್ ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಸಾಂಸ್ಕೃತಿಕ ಕಾಳಜಿ ಮೆರೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ಹೊಸ ತಲೆಮಾರಿನ ಯುವಕರಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಜೊತೆಗೆ ಐತಿಹಾಸಿಕ ಪರಂಪರೆಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದರಾಮ ಹೊನಕಲ್ ಲೇಖಕಿ ಸುರಯ್ಯ ಹಾದಿಮನಿ ರಚಿಸಿದ “ಮನದಂಗಳದಿ” ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಇಷ್ಟಪಟ್ಟು ಓದುವ ಪುಸ್ತಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನುಡಿದರು.

ಸಾಮರಸ್ಯದ ಜೊತೆಗೆ ಸಮಾಜಕ್ಕೆ ಮೌಲ್ಯಯುತದ ಸಾಹಿತ್ಯ ಬರಹಗಳು ಈ ಕೃತಿಯಲ್ಲಿ ಅಡಗಿವೆ,ಅಲ್ಲದೆ ಅರಿವಿನ ವಿಸ್ತಾರತೆಗೆ ಹಿಡಿದ ಕೈಗನ್ನಡಿಯಾಗಿದೆ,ಯುವ ಸಮೂಹ ಸನ್ಮಾರ್ಗದಲ್ಲಿ ಮುನ್ನಡೆಸುವ ಸಮಗ್ರ ಬರಹಗಳು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಅತ್ಯಂತ ಅರ್ಥಗರ್ಭಿತವಾಗಿ ರಚಿಸಿದ್ದಾರೆ ಎಂದು ಹಿರಿಯ ಸಾಹಿತಿ ಶಿವಣ್ಣಇಜೇರಿ ಕೃತಿ ಕುರಿತು ಮಾತನಾಡಿದರು.

ಈ ಸಮಾರಂಭದ ವೇದಿಕೆಯ ಮೇಲೆ,ಲೇಖಕಿ ಸುರಯ್ಯಾ ಹಾದಿಮನಿ,ಶಹಪುರ ಬಸ್ ಘಟಕ ವ್ಯವಸ್ಥಾಪಕರಾದ ಅಕ್ಬರ್ ಭಾಷಾ ಹೊಟಗಿ,ಮುಖ್ಯ ಗುರುಗಳಾದ ಶೈಲಾ ಪತ್ತಾರ,ಹಾಗೂ ಇತರರು ಉಪಸಿತರಿದ್ದರು,ಸುಮಿತ್ರಾ ಪತ್ತಾರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ರವೀಂದ್ರ ಪತ್ತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,

ನಂತರದಲ್ಲಿ ಬೂದಯ ಹಿರೇಮಠ ಅವರಿಂದ ಶಾಸ್ತ್ರೀಯ ಸಂಗೀತ,ನಿಂಗಣ್ಣ ಹತ್ತಿಗುಡೂರ ಇವರಿಂದ ಸುಗಮ ಸಂಗೀತ,ಸ್ವಾತಿ ಕಲಬುರಗಿ ಇವರಿಂದ ತತ್ವಪದಗಳು,ಬಸವರಾಜ ಹಯ್ಯಾಳ ಇವರಿಂದ ಜಾನಪದ ಸಂಗೀತ, ಚಂದ್ರಕಲಾ ಪ್ರಲ್ಹಾದ ಅವರಿಂದ ಭಾವಗೀತೆ,ಸವಿತಾ ಶಹಪುರ ಅವರಿಂದ ವಚನ ಗಾಯನ,ಗಂಗಮ್ಮ ಮತ್ತು ತಂಡದವರಿಂದ ಸಂಪ್ರದಾಯ ಪದಗಳು ಹಾಗೂ ಲಕ್ಷ್ಮಿ ಕುಂಬಾರ ನೃತ್ಯ ತಂಡ ಶಹಪುರ ವತಿಯಿಂದ ಸಮೂಹ ಭರತನಾಟ್ಯ,ಶಿಲ್ಪಾ ಮಂಗಳೂರು ತಂಡದ ವತಿಯಿಂದ ಸಮೂಹ ನೃತ್ಯಗಳ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ನಂತರದಲ್ಲಿ ಎಲ್ಲಾ ಕಲಾವಿದರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ನುಡಿಗಳಾಡಿದರು,ವಸಂತ ದೇಸಾಯಿ ,ಸ್ವಾಗತಿಸಿದರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here