ಕಲಬುರಗಿ: ಬದುಕಿನಲ್ಲಿ ತಾಳ್ಮೆಗೆ ಬಹಳ ಮಹತ್ವವಿದೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಪಡೆಯಬೇಕು ಎಂದಾದರೆ ತಾಳ್ಮೆ ಬೇಕೆ ಬೇಕು. ಪ್ರತಿಯೊಬ್ಬರು ತಾಳ್ಮೆಯ ಮಹತ್ವವನ್ನು ಅರಿತುಕೊಳ್ಳಬೇಕು. ಯಾವುದೇ ಕಾರ್ಯಕ್ಕು ಕಾಲಬೇಕು, ಆ ಕಾಲಕ್ಕೆ ನಾವು ಕಾಯಬೇಕು ಅದುವೆ ತಾಳ್ಮೆ ಆಗ ಮಾತ್ರ ಜೀವನ ಸುಂದರವಾಗುತ್ತದೆ ಎಂದು ಟೇಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಜ ಅಂಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದ ಮಾರ್ಗವಾಗಿ ಸಂಚರಿಸುತ್ತಿದ್ದ ರಥಯಾತ್ರೆಗೆ ಸ್ವಾಗತಿಸಿ, ತಾಯಿ ಭುವನೇಶ್ವರಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ವಾಹನ ದಟ್ಟಣೆಯಿರುವ ಪ್ರತಿ ಜಿಲ್ಲೆ, ತಾಲೂಕಿನ ಹಾಗೂ ಹಳ್ಳಿಗಳ ಸಣ್ಣ-ಸಣ್ಣ ರಸ್ತೆಗಳ ಮೂಲಕ ತಾಳ್ಮೆಯಿಂದ ಸುಗಮವಾಗಿ ನಿರಂತರ ಪ್ರಯಾಣ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಥಯಾತ್ರೆ ವಾಹನ ಚಾಲಕರಾದ ಮಂಜುನಾಥ ಮತ್ತು ಕ್ಲೀನರ್ ದೀಪಕ ಅವರಿಗೆ ಟೇಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ವಿನೋದಕುಮಾರ ಜೇನೆವರಿ ಹಾಗೂ ಕನ್ನಡದ ಧ್ವಜ ಕೈಯಲ್ಲಿ ಹಿಡಿದ ಕನ್ನಡದ ಅಭಿಮಾನಿಗಳು ಉಪಸ್ಥಿತರಿದ್ದರು.
ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50, ಜ್ಯೋತಿ ರಥಯಾತ್ರೆ ನವೆಂಬರ 2023ರಂದು ಬೆಂಗಳೂರಿನಿಂದ ಪ್ರಾರಂಭವಾದ ಜ್ಯೋತಿ ರಥ ನವೆಂಬರ 2024ರ ರಾಜ್ಯಾದ್ಯಂತ ಜ್ಯೋತಿ ರಥಯಾತ್ರೆ ಸಂಚರಿಸಲಿದೆ.