ಜಂತು ಹುಳ ಮಾತ್ರೆ ಸೇವನೆಗೆ ಚಾಲನೆ

0
60

ಕಲಬುರಗಿ; ಫೆ 26.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಂ.ಪಿ.ಹೆಚ್.ಎಸ್) ಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನದ ಅಂಗವಾಗಿ ಮೊದಲನೇ ಹಂತದಲ್ಲಿ ಪ್ರಥಮ ಪಿಯುಸಿ ಮಕ್ಕಳಿಗೆ ಆರ್ ಸಿ ಎಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ಅವರು ಮೊದಲಿಗೆ ಸಸಿಗೆ ನೀರು ಏರಿಯುವ ಮೂಲಕ ಹಾಗೂ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ಹತ್ತಿರದ ಶಾಲೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು ಮತ್ತು ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕೊಡದೆ ವಂಚಿತರಾದ ಮಕ್ಕಳಿಗೆ ಮಾಪ – ಆಫ್ ದಿನದಂದು ಕಡ್ಡಾಯವಾಗಿ ಈ ಮಾತ್ರೆಯನ್ನು ಕೊಡಿಸಬೇಕು. ಸುರಕ್ಷಿತ ಹಾಗೂ ಪ್ರಯೋಜನಕಾರಿಯಾದ ಜಂತು ಹುಳ ನಾಶ‌ಕ ಮಾತ್ರೆಯನ್ನು ಉಚಿತವಾಗಿ ನಿಡಲಾಗುತ್ತದೆ, ಅಲ್ಬಂಡಝೊಲ್ ಈ ಮಾತ್ರೆಯನ್ನು ಅಗಿದು ನುಂಗಬೇಕು. ಇದಕ್ಕೆ ಕಾರಣ ಮಕ್ಕಳ ಅರಿವಿನ ಬೆಳವಣಿಗೆ ಮತ್ತು ಕಡಿಮೆ ಶಾಲಾ ಭಾಗವಹಿಸುವಿಕೆಗೆ ಕಾರಣವಾಗಬಹುದು.

Contact Your\'s Advertisement; 9902492681

ಸೋಂಕನ್ನು ತಡೆಯುವುದು ಹೇಗೆ , ನೈರ್ಮಲ್ಯ ಶೌಚಾಲಯಗಳನ್ನು ಬಳಸಿ. ಹೊರಗೆ ಮಲವಿಸರ್ಜನೆ ಮಾಡಬೇಡಿ.ಮುಖ್ಯವಾಗಿ ತಿನ್ನುವ ಮೊದಲು ಮತ್ತು ಶೌಚಾಲಯಗಳನ್ನು ಬಳಸಿದ ನಂತರ ಕೈಗಳನ್ನು ಸರಿಯಾಗಿ ತೊಳೆಯಿರಿ.ಚಪ್ಪಲಿ ಮತ್ತು ಬೂಟುಗಳನ್ನು ಧರಿಸಿ.ಸುರಕ್ಷಿತ ಮತ್ತು ಶುದ್ಧ ನೀರಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆಯಿರಿ. ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸಿ.ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಉದ್ದೇಶವಾಗಿದೆ ಎಂದು ಹೇಳಿದರು.

ಹಾಗೆ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಶಿವಶರಣಪ್ಪ ಮುಗುಳನಾಗಂವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಓದಿನ ಜೊತೆಗೆ ನಿಮ್ಮ ಆರೋಗ್ಯದ ಕಡೆ ಲಕ್ಷ ವಹಿಸಬೇಕು ಎಂದು ತಿಳಿಸಿದರು.

ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ಮಾರುತಿ ಕಾಂಬಳೆ ಮತ್ತು ಜಿಲ್ಲಾ ಸಂಯೋಜಕರು ಆರ್ ಕೆ ಎಸ್ ಕೆ. ಶಿವಕುಮಾರ್ ಕಾಂಬಳೆ , ಎಂ ಪಿ ಎಚ್ ಎಸ್ ಕಾಲೇಜಿನ ಪ್ರಾಂಶುಪಾಲರು ಸಂಶೋಧಿನ್, ಹಿರಿಯ ಉಪನ್ಯಾಸಕರಾದ ಅಶೋಕ ತಳಕೇರಿ, ದೇವಿದಾಸ್ ಪವಾರ್, ವೇದಿಕೆ ಮೇಲೆ ಇದ್ದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಎಲ್ ಹೆಚ್ ವಿ ಕಲಾವತಿ, ಮತ್ತು ಪ್ರೀತಿ ಮತ್ತಂಪುರ್ , ಹಾಗೆ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜಿನ ವಿಧ್ಯಾರ್ಥಿಗಳು ಸಾಮೂಹಿಕವಾಗಿ ಜಂತುಹುಳ ನಿವಾರಣೆ ಮಾತ್ರೆಯನ್ನು ಸೇವಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here