ವಿದ್ಯಾರ್ಥಿಗಳು ಬರವಣಿಗೆ ಕೌಶಲ್ಯ ವೃದ್ಧಿಸಿಕೊಂಡು ಸ್ವಂತ ಆಲೋಚನೆಯಿಂದ ಮಾದರಿಗಳನ್ನು ಮಂಡಿಸಿ

0
23

ಕಲಬುರಗಿ: ನಗರದ ಶಂಕರಗೌಡ ಪೊಲೀಸ ಪಾಟೀಲ್ ಅಂದೋಲ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ವಿಜ್ಞಾನ ವಸ್ತು ಪ್ರದರ್ಶನವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಕ್ರಪ್ಪ ಗೌಡ ಬಿರಾದಾರ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಬರವಣಿಗೆ ಕೌಶಲ್ಯವನ್ನು ವೃದ್ಧಿಸಿಕೊಂಡು ತಮ್ಮ ಸ್ವಂತ ಹೊಸ ಹೊಸ ಆಲೋಚನೆಗಳಿಂದ ಮಾದರಿಗಳನ್ನು ಮಂಡಿಸಬೇಕು. ಶಿಕ್ಷಕರು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಜ್ಞಾನ ಶಿಕ್ಷಕ ಚಂದ್ರಶೇಖರ್ ಪಾಟೀಲ್ ಯಳಸಂಗಿ ವಿಜ್ಞಾನ ಎಂಬುದು ಕೇವಲ ಪಾಶ್ಚಿಮಾತ್ಯ ದೇಶಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಸರ್ ಸಿವಿ ರಾಮನ್ ರು ಕೇವಲ 200 ರೂಪಾಯಿ ವೆಚ್ಚದಲ್ಲಿ ತಾವೇ ಅಳವಡಿಸಿಕೊಂಡ ಉಪಕರಣಗಳ ಸಹಾಯದಿಂದ 1928 ಫೆಬ್ರವರಿ 28ರಂದು ಇಡೀ ವಿಶ್ವ ಬೆರಗಾಗುವಂತಹ ರಾಮನ್ ಪರಿಣಾಮವನ್ನು ಜಗತ್ತಿಗೆ ಪರಿಚಯಿಸಿದ ದಿನ. ಈ ದಿನ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ ನಿರ್ದಿಷ್ಟ ತರಂಗಾಂತರಗಳ ಬೆಳಕಿನ ಕಿರಣಗಳನ್ನು ಸರ್ ಸಿ ವಿ ರಾಮನ್ ಗಮನಿಸಿದರು. ಈ ಅಸಂಗತ ಚದುರುವಿಕೆಯ ವಿದ್ಯಮಾನ ರಾಮನ್ ಪರಿಣಾಮ ಎಂದು ಪ್ರಖ್ಯಾತವಾಯಿತು.

ಈ ಅಪರೂಪದ ಸಂಶೋಧನೆಯ ಸ್ಮರಣೆಗಾಗಿ ಪ್ರತಿವರ್ಷ ಫೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಿ ವೈಜ್ಞಾನಿಕ ಸಾಧನೆಗಳನ್ನು ಅನಾವರಣಗೊಳಿಸಲಾಗುತ್ತಿದೆ.

ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನಾತ್ಮಕ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಾಬುರಾವ್ ಕುಲಕರ್ಣಿ ಬಿಐ ಆರ್‌ಟಿ ಅಪ್ಪಾಸಾಹೇಬ ಪಾಟೀಲ ಸಿ ಆರ್ ಸಿ ಮಲಿಕ್ ಸಾಬ ನದಾಫ್ ಶಾಲೆಯ ಮುಖ್ಯಗುರುಗಳಾದ ಶ್ರೀದೇವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜಿಎಸ್ ಪಾಟೀಲ್ ಅಂದೋಲ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here